Guru-Rahu Synastry 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಕಾಲಾವಧಿಯ ನಂತರ ತನ್ನ ಸ್ಥಾನವನ್ನು ಬದಲಾಯಿಸುತ್ತದವೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಬೀಳುತ್ತದೆ ಮತ್ತು ಜನರ ಜೀವನದಲ್ಲಿ ಶುಭ ಮತ್ತು ಅಶುಭ ಫಲಿತಾಂಶಗಳು ಗೋಚರಿಸುತ್ತವೆ. ಈ ವರ್ಷ ಅನೇಕ ದೊಡ್ಡ ಗ್ರಹಗಳು ತನ್ನ ಸ್ಥಾನವನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಗುರುವೂ ಶಾಮೀಲಾಗಿದೆ. ಏಪ್ರಿಲ್ 22 ರಂದು ಗುರುವು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಏತನ್ಮಧ್ಯೆ ರಾಹು ಈಗಾಗಲೇ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಗುರು ಮತ್ತು ರಾಹುವಿನ ಈ ಹತ್ತಿರ ಬರುವಿಕೆ ಗುರು ಚಂಡಾಲ ಯೋಗ ರೂಪಿಸಲಿದೆ. ಯಾವ ರಾಶಿಗಳ ಜನರ ಮೇಲೆ ಈ ಯೋಗ ನಕಾರಾತ್ಮಕ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಗುರು ಮತ್ತು ರಾಹುವಿನ ಸಂಯೋಗದಿಂದ ಈ ರಾಶಿಗಳ ಜನರು ಎಚ್ಚರದಿದಿರಬೇಕು
ಕರ್ಕ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಮೇಷ ರಾಶಿಗೆ ಪ್ರವೇಶಿಸುವುದು ಮತ್ತು ರಾಹುವಿನ ಜೊತೆ ಮೈತ್ರಿ ನಡೆಸುವುದು ಕರ್ಕ ರಾಶಿಯವರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡಲಿದೆ. ಈ ರಾಶಿಯ ಜನರು ಈ ಅವಧಿಯಲ್ಲಿ ಶತ್ರುಗಳಿಂದ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ, ಕೆಲಸದ ಸ್ಥಳದಲ್ಲಿ ವಿವಾದದ ಪರಿಸ್ಥಿತಿ ಉದ್ಭವಿಸಬಹುದು. ಗುರು ಚಂಡಾಲ ಯೋಗವು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಸಾಧಿಸುವುದು ಉತ್ತಮ.


ಮಿಥುನ ರಾಶಿ : ಗುರು ಮತ್ತು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗ ನಿರ್ಮಾಣಗೊಳ್ಳಲಿದೆ. ಈ ಅವಧಿಯಲ್ಲಿ, ಮಿಥುನ ರಾಶಿಯ ಜನರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಿಥುನ ರಾಶಿಯವರು ಈ ಅವಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಷೇರು ಮಾರುಕಟ್ಟೆ ಮತ್ತು ಲಾಟರಿಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ಹಣ ನಷ್ಟವಾಗುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಜನರ ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಇದರೊಂದಿಗೆ, ವ್ಯಕ್ತಿಯು ಒತ್ತಡವನ್ನು ಎದುರಿಸಬೇಕಾಗಬಹುದು.


ಇದನ್ನೂ ಓದಿ-Mahashivratri 2023: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಮಹಾಶಿವರಾತ್ರಿಯ ದಿನ ಈ ಉಪಾಯ ಮಾಡಿ!


ಮೇಷ ರಾಶಿ : ಮೇಷ ರಾಶಿಯಲ್ಲಿ ಗುರುವಿನ ಸಂಕ್ರಮಣ ಮತ್ತು ರಾಹುವಿನ ಉಪಸ್ಥಿತಿಯು ಈ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅವಧಿಯಲ್ಲಿ, ಈ ರಾಶಿಚಕ್ರದ ಜನರು ಹಣದ ನಷ್ಟವನ್ನು ಅನುಭವಿಸಬಹುದು. ಆತ್ಮವಿಶ್ವಾಸ ಕಡಿಮೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಮೇಷ ರಾಶಿಯ ಜನರನ್ನು ಕಾಡಬಹುದು. ಕೆಲಸದ ಸ್ಥಳದಲ್ಲಿ ಎಚ್ಚರ ಅಗತ್ಯ. ಏಕೆಂದರೆ ಗುರು ಚಂಡಾಲ ಯೋಗದಿಂದಾಗಿ ಅಧಿಕಾರಿಯೊಂದಿಗೆ ವಾಗ್ವಾದ ಉಂಟಾಗಬಹುದು. ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ.


ಇದನ್ನೂ ಓದಿ-ಕಡಿಮೆ ಅವಧಿಯಲ್ಲಿ ಸಿರಿವಂತರಾಗಬೇಕೆ? ನೀಮ್ ಕರೋಲಿ ಬಾಬಾ ಹೇಳಿರುವ ಈ 3 ಸಲಹೆ ಟ್ರೈಮಾಡಿ ನೋಡಿ!


ಕೇತುವಿನ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಈ ಪರಿಹಾರಗಳನ್ನು ಅನುಸರಿಸಿ
ಕೇತು ಗ್ರಹದ ಶಾಂತಿಗಾಗಿ, ಶನಿವಾರದಂದು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಅದರಲ್ಲಿ ಸ್ವಲ್ಪ ಕರಿಕೆಯನ್ನು ಸೇರಿಸಿ. ಇದರೊಂದಿಗೆ ಸಂಜೆ ತುಪ್ಪದ ದೀಪವನ್ನು ಬೆಳಗಿ. ಕೇತುವಿನ ಕೋಪವನ್ನು ತಪ್ಪಿಸಲು, ಭಾನುವಾರದಂದು ಕನ್ಯೆಯರಿಗೆ ಪಾಯಸ ಮತ್ತು ಸಿಹಿ ಮೊಸರು ತಿನ್ನಿಸಿ.


ಇದನ್ನೂ ಓದಿ-ಮಂಗಳನ ಅಧಿಪತ್ಯದ ರಾಶಿಯಲ್ಲಿ ಗುರು-ಸೂರ್ಯರು, ಈ 5 ರಾಶಿಯ ಜನರಿಗೆ ಆಕಸ್ಮಿಕ ಧನಲಾಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.