ನವದೆಹಲಿ : ಜೀವನದಲ್ಲಿ ಹಣ ಗಳಿಸಲು, ವೈವಾಹಿಕ ಜೀವನದ ಸಂತೋಷಕ್ಕಾಗಿ, ವೃತ್ತಿಜೀವನದ ಪ್ರಗತಿಗಾಗಿ ಜಾತಕದಲ್ಲಿ ಗುರು (Guru) ಗ್ರಹ ಉತ್ತಮ ಸ್ಥಾನದಲ್ಲಿರುವುದು ಅವಶ್ಯಕ. ಈ ಕಾರಣಗಳಿಂದಾಗಿಯೇ, ಜ್ಯೋತಿಷ್ಯದಲ್ಲಿ ಸೌರಮಂಡಲದ ಈ ದೊಡ್ಡ ಗ್ರಹವನ್ನು ದೇವಗುರು ಎಂದು ಕರೆಯಲಾಗುತ್ತದೆ. ಗುರುವಿನ (Jupiter) ರಾಶಿಚಕ್ರದ ಬದಲಾವಣೆಯು ಜೀವನದಲ್ಲಿ ಸಂತೋಷ ಮತ್ತು ಪ್ರಗತಿಯ ದೃಷ್ಟಿಯಿಂದ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. 14 ಸೆಪ್ಟೆಂಬರ್ 2021 ರಂದು, ಗುರು ಮಕರ ರಾಶಿಗೆ (Capricorn) ಪ್ರವೇಶಿಸುತ್ತಾನೆ. ಆದರೆ, ಈ ರಾಶಿಯಲ್ಲಿ ಶನಿಯು ಈಗಾಗಲೇ ಹಿಮ್ಮುಖ ಚಲನೆಯಲ್ಲಿದ್ದಾನೆ. 


COMMERCIAL BREAK
SCROLL TO CONTINUE READING

ನೀಚ ಭಂಗ ರಾಜ ಯೋಗ :
ವಕ್ರೀ ಶನಿ ಮತ್ತು ಗುರು (Shani-Guru) ಇಬ್ಬರೂ ಸೇರಿ ಮಕರ ರಾಶಿಯಲ್ಲಿ  ನೀಚ ಭಂಗ ರಾಜ ಯೋಗ  (Neechbhang Rajyog) ರಚನೆಯಾಗುತ್ತದೆ. ಜ್ಯೋತಿಷ್ಯದ (Astrology) ದೃಷ್ಟಿಯಿಂದ ಈ ಸ್ಥಾನವು ಬಹಳ ಮುಖ್ಯವಾಗಿದೆ. ಈ ಯೋಗವು ಕೆಲವು ರಾಶಿಗಳಿಗೆ ವರವಾಗುವ ಸಾಬೀತಾದರೆ, ಕೆಲವು ರಾಶಿಚಕ್ರದವರಿಗೆ ತೊಂದರೆಯುಂಟಾಗುತ್ತದೆ.  


ಇದನ್ನೂ ಓದಿ: Sun Transit September 2021 :ಸೆಪ್ಟೆಂಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಇದಕ್ಕೂ ಮುನ್ನ ಈ ರಾಶಿಯವರಿಗೆ ಸಿಗಲಿದೆ ಶುಭ ಫಲ


ಈ 4 ರಾಶಿಗಳಿಗೆ ಬಹಳ ಶುಭ  :
ಸೆಪ್ಟೆಂಬರ್ 14 ರಂದು ಗುರು ಮಕರ ರಾಶಿಗೆ (Capricorn)  ಪ್ರವೇಶಿಸಿದ ತಕ್ಷಣ, 4 ರಾಶಿಗಳ ದಿನಗಳ ಅಂದರೆ ವೃಷಭ, ಕರ್ಕಾಟಕ, ತುಲಾ (Libra) ಮತ್ತು ಮಕರ ರಾಶಿಗಳ ಜನರ ಮೇಲೆ ಶುಭ ಫಲ ಬೀರಲಿದೆ. ದೀರ್ಘಕಾಲದದಿಂದ ಸ್ಥಗಿತಗೊಂಡಿರುವ ಪ್ರಗತಿಯ ಸುದ್ದಿಯನ್ನು ಇವರಿಗೆ ಈಗ ಸಿಗಲಿದೆ. ಆರ್ಥಿಕ ಲಾಭ ಇರುತ್ತದೆ. ಆದಾಯದ ಹೊಸ ಮಾರ್ಗಗಲು ಹುಟ್ಟಿಕೊಳ್ಳಲಿದೆ. ಒಟ್ಟಾರೆಯಾಗಿ, ವೃತ್ತಿಜೀವನದಲ್ಲಿ ಪ್ರಯೋಜನಗಳನ್ನು ಪಡೆಯುವ ಬಲವಾದ ಅವಕಾಶಗಳಿವೆ. ಈ  ಸಮಯವನ್ನು ತಮ್ಮ ಪ್ರೀತಿಪಾತ್ರರ ಜೊತೆ ಪೂರ್ಣವಾಗಿ ಆನಂದಿಸುತ್ತಾರೆ. 


ಈ ರಾಶಿಯವರಿಗೆ ದುರಾದೃಷ್ಟ :
ಅದೇ ಸಮಯದಲ್ಲಿ, ಈ ದುರ್ಬಲ ರಾಜಯೋಗವು ಮೇಷ, ಮಿಥುನ, ಸಿಂಹ (leo) ಮತ್ತು ವೃಶ್ಚಿಕ ರಾಶಿಯವರಿಗೆ ಕಷ್ಟಗಳನ್ನು ತರುತ್ತದೆ. ಈ ಸಮಯದಲ್ಲಿ, ಈ ರಾಶಿಚಕ್ರದ ಜನರು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು, ವಾದಗಳನ್ನು ತಪ್ಪಿಸಬೇಕು. ಅಪಘಾತ ಅಥವಾ ಹಾನಿ ಸಂಭವಿಸಬಹುದು. ಮತ್ತೊಂದೆಡೆ, ಗುರುವಿನ ಈ ರಾಶಿ ಪರಿವರ್ತನೆಯು ಕನ್ಯಾ, ಧನು, ಕುಂಭ ಮತ್ತು ಮೀನ ರಾಶಿಯ ಜನರಿಗೆ ಸರಾಸರಿ ಫಲಿತಾಂಶಗಳನ್ನು ನೀಡುತ್ತದೆ. 


ಇದನ್ನೂ ಓದಿ: ಈ ನಾಲ್ಕು ರಾಶಿಯವರ ಮೇಲಿದೆ ಗಣೇಶನ ಅಪಾರ ಕೃಪೆ, ಉದ್ಯೋಗ ಆರ್ಥಿಕ ಸ್ಥಿತಿಯಲ್ಲಿ ಆಗಲಿದೆ ಭಾರೀ ಪ್ರಗತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.