Guru Uday 2022: ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಗುರುವಿಗೆ 9 ದೇವಗುರು ಎಂಬ ಬಿರುದು ನೀಡಲಾಗಿದೆ. ಜೊತೆಗೆ ಗುರು ಗ್ರಹವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ದೇವಗುರು ಗುರುವು ಉತ್ತಮ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಅವರ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಗುರುವು ರಾಶಿಚಕ್ರವನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಅಸ್ತಮಿಸಿದ್ದ ಗುರು ಇದೀಗ  ಮಾರ್ಚ್ 26 ರಂದು ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕುಂಭ ರಾಶಿಯಲ್ಲಿ ಗುರುವಿನ ಉದಯ (Guru Uday In Kumbha Rashi) ಯಾವ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  


ಇದನ್ನೂ ಓದಿ- Hindu New Year 2022: ಏಪ್ರಿಲ್ 2 ರಿಂದ ಹಿಂದೂ ಹೊಸ ವರ್ಷ ಪ್ರಾರಂಭ, ದ್ವಾದಶ ರಾಶಿಗಳ ಯುಗಾದಿ ಫಲಾಫಲ


ಕುಂಭ ರಾಶಿಯಲ್ಲಿ ಗುರು ಉದಯ, ಈ ರಾಶಿಯವರ ಮೇಲೆ ಪ್ರಭಾವ :
ಮೇಷ ರಾಶಿ:

ಮೇಷ ರಾಶಿಯವರಿಗೆ ಗುರುವಿನ ಉದಯವು ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತದೆ. ಜೊತೆಗೆ ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗಲಿದೆ. 


ವೃಷಭ ರಾಶಿ:
ಬೃಹಸ್ಪತಿ ಉದಯವು (Bruhaspati Uday) ವೃಷಭ ರಾಶಿಯವರಿಗೆ ವೃತ್ತಿಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಅಲ್ಲದೆ, ನೀವು ಯಾವುದೇ ದೊಡ್ಡ ಕೆಲಸವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಒಳ್ಳೆಯ ಸಮಯ.


ಇದನ್ನೂ ಓದಿ- ಸೂರ್ಯನ ಕೃಪೆಯಿಂದ ಏಪ್ರಿಲ್ 13 ರವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ


ಸಿಂಹ ರಾಶಿ:
ಕುಂಭ ರಾಶಿಯಲ್ಲಿ ಗುರುವಿನ ಉದಯದಿಂದ ಸಿಂಹ ರಾಶಿಯವರಿಗೆ ಒಳ್ಳೆಯದಾಗಬಹುದು. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಅಲ್ಲದೆ, ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ಗಳಿಸಬಹುದು.


ಮಕರ ರಾಶಿ:
ಮಕರ ರಾಶಿಯವರಿಗೆ ಗುರುವಿನ ಉದಯವು ಎಲ್ಲ ರೀತಿಯಿಂದಲೂ ಒಳ್ಳೆಯದು. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಸಾಧಿಸಬಹುದು.


ಸೂಚನೆ: ಈ ಲೇಖನದಲ್ಲಿ ನೀಡಿದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.