Hair Care: ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಶಾಂಪೂ ಮಾಡುವ ಮೊದಲು ಈ ಸಣ್ಣ ವಿಧಾನವನ್ನು ಅನುಸರಿಸಿ
Hair Care Tips: ಬಲವಾದ ಮತ್ತು ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೇ? ಹಾಗಿದ್ದರೆ ಇದನ್ನು ಒಮ್ಮೆ ಟ್ರೈ ಮಾಡಿ
Hair Care Tips: ಮಾಲಿನ್ಯ, ಧೂಳು-ಮಣ್ಣು ಮತ್ತು ರಾಸಾಯನಿಕಯುಕ್ತ ಶ್ಯಾಂಪೂಗಳು ಇತ್ಯಾದಿಗಳ ಕಾರಣದಿಂದ ನಮ್ಮ ಕೂದಲು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಕೂದಲು ಉದುರುವುದು ಆರಂಭವಾಗುತ್ತದೆ. ಇದರೊಂದಿಗೆ, ಕೂದಲು ತೆಳುವಾಗುವುದರ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಆದರೆ ನಿಮ್ಮ ಕೂದಲನ್ನು ಶಾಂಪೂ ಮಾಡುವ ಮೊದಲು ಒಂದು ಸರಳ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನೈಸರ್ಗಿಕವಾಗಿ ಕೂದಲನ್ನು ಆರೋಗ್ಯಕರವಾಗಿಸಬಹುದು. ನಿಮ್ಮ ಕೂದಲು ಮತ್ತೊಮ್ಮೆ ಮೃದು ಮತ್ತು ಆರೋಗ್ಯಕರವಾಗುತ್ತದೆ, ಇದು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಕೂದಲನ್ನು ರೇಷ್ಮೆಯಂತೆ ಮತ್ತು ಮೃದುವಾಗಿಸುವ ಮಾರ್ಗ ಯಾವುದು ಎಂದು ತಿಳಿಯಿರಿ.
ರೇಷ್ಮೆಯಂತಹ ಕೊದಲನ್ನು ಪಡೆಯಲು ನೈಸರ್ಗಿಕ ವಿಧಾನ:
ನಮ್ಮ ಹಲವು ಸಮಸ್ಯೆಗಳಿಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಪರಿಹಾರ ಪಡೆಯಬಹುದು. ರೇಷ್ಮೆಯಂತಹ ಕೂದಲಿಗಾಗಿ (Silky Hair) ಈ ಮನೆಮದ್ದನ್ನು ಅಳವಡಿಸಿಕೊಂಡ ನಂತರ ನಿಮಗೆ ಇದರ ವ್ಯತ್ಯಾಸ ಅನುಭವಕ್ಕೆ ಬರುತ್ತದೆ. ಆದಾಗ್ಯೂ, ಸಂಪೂರ್ಣ ಫಲಿತಾಂಶಗಳನ್ನು ಪಡೆಯಲು ನೀವು ಈ ಮನೆಮದ್ದನ್ನು ನಿಯಮಿತವಾಗಿ ಅನುಸರಿಸಬೇಕು. ಕೂದಲನ್ನು ಗಟ್ಟಿಯಾಗಿಸಲು ನೀವು ವಾರದಲ್ಲಿ ಎರಡು ಸಲ ಈ ಪರಿಹಾರವನ್ನು ಬಳಸಬಹುದು.
ಇದನ್ನೂ ಓದಿ- Food For Men's Health: ಪುರುಷರಿಗೆ ಬಹಳ ಪ್ರಯೋಜನಕಾರಿ ಈ 3 ಆಹಾರ
ಕೂದಲಿನ ಶುಷ್ಕತೆಯ ಸಮಸ್ಯೆಯನ್ನು ನಿವಾರಿಸಲು ಯಾವ ಕ್ರಮವನ್ನು ಅನುಸರಿಸಬೇಕು? ಯಾವ ಮನೆಮದ್ದುಗಳಿಂದ ಕೂದಲು ಆರೋಗ್ಯಕರವಾಗುತ್ತದೆ (Healthy Hair) ಮತ್ತು ಕೂದಲು ಉದುರುವುದು ನಿಲ್ಲುತ್ತದೆ. ಜೊತೆಗೆ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಇದನ್ನು ಓದಿ- Side Effects of Lemon Water: ನಿಂಬೆ ನೀರಿನ ಪ್ರಯೋಜನಗಳು ತಿಳಿದಿವೆ, ಆದರೆ ಅನಾನುಕೂಲತೆಗಳ ಬಗ್ಗೆ ತಿಳಿದಿದೆಯೇ
ಆರೋಗ್ಯಕರ ಕೂದಲನ್ನು ಪಡೆಯಲು ಇವುಗಳನ್ನು ಒಮ್ಮೆ ಪ್ರಯತ್ನಿಸಿ:
>> ಮೊದಲಿಗೆ, ಒಂದು ಬಟ್ಟಲಿನಲ್ಲಿ 2-3 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ. ಕೂದಲಿನ ಉದ್ದಕ್ಕೆ ಅನುಗುಣವಾಗಿ ಜೇನುತುಪ್ಪದ ಪ್ರಮಾಣವನ್ನು ಬದಲಾಯಿಸಬಹುದು.
>> ಇದರ ನಂತರ ನಿಂಬೆಹಣ್ಣನ್ನು ಜೇನುತುಪ್ಪದಲ್ಲಿ ಹಿಂಡಿ. ನಿಂಬೆಯು ಜೇನುತುಪ್ಪದ ಜಿಡ್ಡನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ಇದನ್ನು ಕೂದಲಿಗೆ ಸುಲಭವಾಗಿ ಹಚ್ಚಬಹುದು.
>> ನಿಂಬೆಯನ್ನು ಹಿಸುಕುವಾಗ, ನಿಂಬೆ ಬೀಜಗಳು ಅಥವಾ ನಾರುಗಳನ್ನು ಅದರಲ್ಲಿ ಮಿಶ್ರಣ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ನಿಂಬೆಯನ್ನು ಹಿಂಡಲು ಒತ್ತಡ ಅಥವಾ ಜರಡಿಯ ಸಹಾಯವನ್ನು ತೆಗೆದುಕೊಳ್ಳಿ.
>> ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ನೆತ್ತಿಯಿಂದ ಕೂದಲಿನ ತುದಿಗೆ ಹಚ್ಚಿ.
>> ಈ ಮಿಶ್ರಣವನ್ನು ಕೂದಲಿಗೆ ಚೆನ್ನಾಗಿ ಹಚ್ಚಿ. 30 ನಿಮಿಷಗಳ ನಂತರ, ಕೂದಲನ್ನು ಸೌಮ್ಯ ಮತ್ತು ಹರ್ಬಲ್ ಶಾಂಪೂ ಬಳಸಿ ತೊಳೆಯಿರಿ.
>> ಕೂದಲಿಗೆ ಈ ರೀತಿ ಮನೆಮದ್ದನ್ನು ಬಳಸುವುದರಿಂದ ಕೂಡಲೇ ಬದಲಾವಣೆಯನ್ನು ನೀವು ಅನುಭವಿರಿ. ಆದರೆ ನೀವು ಬಳಸುವ ಶಾಂಪೂ ಸೌಮ್ಯವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.