White Hair: ಈ ಎಲೆಯಿಂದ ಬಿಳಿ ಕೂದಲಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುತ್ತದೆ
ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
ನವದೆಹಲಿ: ತುಳಸಿ ಎಲೆಗಳ ನೀರು ಕೂದಲ ಆರೋಗ್ಯಕ್ಕೆ ಒಳ್ಳೆಯದು. ಇದರ ಎಲೆಗಳ ಪೇಸ್ಟ್ ಮತ್ತು ನೀರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
ಕೂದಲಿನ ಬುಡಕ್ಕೆ ಮಸಾಜ್ ಮಾಡಿರಿ: ಒಂದು ಪಾತ್ರೆಯಲ್ಲಿ 3 ಲೋಟ ನೀರು ತೆಗೆದುಕೊಂಡು ಅದರಲ್ಲಿ 20ರಿಂದ 25 ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಇದರ ರಸ ನೀರಿನಲ್ಲಿ ಕರಗಿದ ನಂತರ ತಣ್ಣಗಾಗಲು ಬಿಡಿ. ನಂತರ ಈ ನೀರಿನಿಂದ ಕೂದಲನ್ನು ತೊಳೆಯಿರಿ. ತೊಳೆಯುವ ವೇಳೆ ಈ ನೀರಿನಿಂದ ಕೂದಲಿನ ಬುಡಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಬೇಕು.
ರಕ್ತ ಪರಿಚಲನೆ ಸುಧಾರಿಸುತ್ತದೆ: ತುಳಸಿಯಲ್ಲಿರುವ ಔಷಧೀಯ ಗುಣಗಳು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಇದರ ಎಲೆಗಳು ಹೇರ್ ಫಾಲಿಕಲ್ಸ್‍ಗಳನ್ನು ಪುನಃ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆ ಸಮಸ್ಯೆ ತೆಗೆದುಹಾಕುತ್ತದೆ. ಇದಲ್ಲದೆ ಇದರ ಬಳಕೆಯಿಂದ ನೆತ್ತಿ ತಂಪಾಗಿರುತ್ತದೆ ಮತ್ತು ರಕ್ತ ಪರಿಚಲನೆಯೂ ಸುಧಾರಿಸುತ್ತದೆ.
ಇದನ್ನೂ ಓದಿ: ಈ ಹೊತ್ತಿನಲ್ಲಿ ಕುಡಿಯುವ ನೀರು ವಿಷದಂತೆ ಕೆಲಸ ಮಾಡುತ್ತದೆ .! ನೀವೂ ಈ ತಪ್ಪು ಮಾಡುತ್ತಿದ್ದರೆ ಸರಿಪಡಿಸಿಕೊಳ್ಳಿ
ಎಣ್ಣೆಯಲ್ಲಿ ಮಿಶ್ರಣ ಮಾಡಿ: ತುಳಸಿ ಎಲೆಗಳನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ಬಳಸಬೇಕು. ತುಳಸಿ ಎಲೆಗಳನ್ನು ಪುಡಿಮಾಡಿ ಎಣ್ಣೆಯಲ್ಲಿ ಮಿಶ್ರಣ ಮಾಡಿಕೊಳ್ಳಿ. ಎಣ್ಣೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಿಸಿ. ನಂತರ ಈ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು. ಸ್ವಲ್ಪ ಸಮಯದವರೆಗೆ ಕೂದಲಿನ ಮೇಲೆ ಹಾಗೇ ಬಿಡಿ. ಸುಮಾರು 1 ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.
ಕರಿಬೇವಿನ ಎಲೆಗಳೊಂದಿಗೆ ಮಿಶ್ರಣ ಮಾಡಿ: ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳ ಹೇರ್ ಪ್ಯಾಕ್ ಬಳಸಿ ಡ್ಯಾಂಡ್ರಫ್ ಸಮಸ್ಯೆ ಹೋಗಲಾಡಿಸಬಹುದು. ಈ ಹೇರ್ ಪ್ಯಾಕ್ ಅನ್ನು ಕನಿಷ್ಠ 35 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಹಾಗೇ ಬಿಡಿ. ನಂತರ ಶಾಂಪೂ ಬಳಸಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.
ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ: ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದ ಕೂದಲು ಬಿಳಿಯಾಗುವ ಸಮಸ್ಯೆ ಇರುತ್ತದೆ. 1 ಬೌಲ್ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ಆಮ್ಲಾ ಮತ್ತು ತುಳಸಿ ಪುಡಿ ಮಿಶ್ರಣ ಮಾಡಿ ರಾತ್ರಿಯಿಡೀ ಅದನ್ನು ಇರಿಸಿ. ಈ ಮಿಶ್ರಣವನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಬಿಳಿ ಕೂದಲ ಸಮಸ್ಯೆಗೆ ಶೀಘ್ರವೇ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ: Garlic And Ghee: ನಿತ್ಯ ಬೆಳ್ಳುಳ್ಳಿ-ದೇಸಿ ತುಪ್ಪ ಏಕಕಾಲಕ್ಕೆ ಸೇವಿಸುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.