After 50 Hair Care Tips: ವಯಸ್ಸಿಗೆ ತಕ್ಕಂತೆ ಕೂದಲುಗಳು ತಮ್ಮ ನೈಸರ್ಗಿಕ ಬಣ್ಣ ಕಳೆದುಕೊಳ್ಳುವುದು ಅಥವಾ ನಿಸ್ತೇಜ ಗೊಳ್ಳುವುದು ಸಹಜ. ಅಷ್ಟೇ ಅಲ್ಲ ಕೂದಲುಗಳು ಉದುರಿ ತೆಳುವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ವಯಸ್ಸಾದಂತೆ, ದೇಹದಲ್ಲಿ ಅನೇಕ ಪೋಷಕಾಂಶಗಳ ಕೊರತೆ, ಒತ್ತಡ ಮತ್ತು ಕೂದಲಿಗೆ ಪೋಷಣೆಯ ಕೊರತೆಯಿಂದಾಗಿ ನಿಮ್ಮ ಕೂದಲು ತುಂಬಾ ನಿರ್ಜೀವವಾಗಬಹುದು. ಅಂತಹ  ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಕೂದಲನ್ನು ಮೊದಲಿನಂತೆಯೇ ಪುನಃಸ್ಥಾಪಿಸಬಹುದು. 50 ವರ್ಷದ ನಂತರವೂ ನೀವೂ ನಿಮ್ಮ ಕೂದಲನ್ನು ದಟ್ಟವಾಗಿ, ನೀಳವಾಗಿ, ಸುಂದರವಾಗಿ ಇರಿಸಲು ನೀವು ಬಯಸಿದರೆ, ಇದಕ್ಕಾಗಿ ನೀವು ಕೆಲವು ಸುಲಭ ಸಲಹೆಗಳನ್ನು ಅನುಸರಿಸಬಹುದು. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)


COMMERCIAL BREAK
SCROLL TO CONTINUE READING

ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ
50 ರ ನಂತರ ಕೂದಲು ದಟ್ಟವಾಗಿಸಲು ಮತ್ತು ಮೃದುವಾಗಿಸುವಂತೆ ಮಾಡಲು, ನೀವು ವಾರಕ್ಕೆ ಎರಡು ಬಾರಿ ನಿಯಮಿತವಾಗಿ ಮಸಾಜ್ ಮಾಡಬೇಕಾಗಬಹುದು. ಮಸಾಜ್ ಮಾಡಲು ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆ. ಇದರಿಂದ ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡಬಹುದು. ಎಣ್ಣೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಅದರಲ್ಲಿ ಸ್ವಲ್ಪ ಆಮ್ಲಾ ಪುಡಿ ಅಥವಾ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ


ಮನೆಯಲ್ಲಿ ತಯಾರಿಸಿದ ಆವಕಾಡೊ ಹೇರ್ ಮಾಸ್ಕ್ ಅನ್ನು ಅನ್ವಯಿಸಿ
ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸಲು, ಕನಿಷ್ಠ ವಾರಕ್ಕೊಮ್ಮೆ ಅಥವಾ ಪ್ರತಿ 15 ದಿನಗಳಿಗೊಮ್ಮೆ ಹೇರ್ ಮಾಸ್ಕ್ ಅನ್ನು ಅನ್ವಯಿಸಿ. ಹೇರ್ ಮಾಸ್ಕ್ ಅನ್ನು ಅನ್ವಯಿಸುವುದರಿಂದ ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚು ಸುಧಾರಿಸಬಹುದು. ಇದಕ್ಕಾಗಿ ಅರ್ಧ ಆವಕಾಡೊವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸುಮಾರು 30 ನಿಮಿಷಗಳ ನಂತರ, ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.


ನಿಮ್ಮ ಆಹಾರ ಕ್ರಮದ ಕಡೆಗೆ ಗಮನಹರಿಸಿ
ಕೂದಲಿನ ಬೆಳವಣಿಗೆ ಮತ್ತು ಅವುಗಳ ದಟ್ಟತನ  ಕಾಪಾಡಿಕೊಳ್ಳಲು, ನಿಮ್ಮ ಆಹಾರದ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಆರೋಗ್ಯಕರ ಕೂದಲಿಗೆ ದೇಹಕ್ಕೆ ಪೋಷಣೆಯ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ,  ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರವನ್ನು ಸೇವಿಸಲು ಒತ್ತು ನೀಡಿ.  ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇರಿಸಿ. ಹೊರಗಿನ ಜಂಕ್ ಫುಡ್, ಸಕ್ಕರೆ ಮತ್ತು ಹೆಚ್ಚುವರಿ ಉಪ್ಪನ್ನು ಸೇವಿಸಬೇಡಿ. 


ಒತ್ತಡದಿಂದ ದೂರವಿರಿ
ಕೂದಲು ಉದುರುವುದಕ್ಕೆ ಒತ್ತಡವೇ ಮುಖ್ಯ ಕಾರಣ. ಆದ್ದರಿಂದ, ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಒತ್ತಡ ಅಥವಾ ಯಾವುದೇ ರೀತಿಯ ಮಾನಸಿಕ ಸಮಸ್ಯೆಯು ಕೇವಲ ದೈಹಿಕ ಸಮಸ್ಯೆಗಳನ್ನು ಅಷ್ಟೇ ಉಂಟುಮಾಡುವುದಲ್ಲದೆ, ಅದರಿಂದ ಕೂದಲು ಮತ್ತು ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಒತ್ತಡ ಮತ್ತು ಆತಂಕದಂತಹ ವಿಷಯಗಳಿಂದ ದೂರವಿರಲು ಪ್ರಯತ್ನಿಸಿ. ಇದಕ್ಕಾಗಿ, ಯೋಗ, ಧ್ಯಾನ ಮತ್ತು ಸರಿಯಾದ ಆಹಾರ ಪದ್ಧತಿಯ ಸಹಾಯವನ್ನು ತೆಗೆದುಕೊಳ್ಳಿ.


ಇದನ್ನೂ ಓದಿ-Weight Loss Remedy: ಕೇವಲ 15 ದಿನಗಳಲ್ಲಿ ಸೊಂಟಕ್ಕೆ ನಾರ್ಮಲ್ ಆಕಾರ ನೀಡಬೇಕೆ? ಈ ದೇಸೀ ಉಪಾಯ ಟ್ರೈ ಮಾಡಿ ನೋಡಿ!


ಸರಿಯಾದ ಕೂದಲು ರಕ್ಷಣೆಯ ಸಾಧನಗಳನ್ನು ಬಳಸಿ
50 ವರ್ಷ ವಯಸ್ಸಿನ ಬಳಿಕ ಕೂದಲಿನ ಆರೈಕೆ ತುಂಬಾ  ಮುಖ್ಯ. ಈ ವಯಸ್ಸಿನಲ್ಲಿ, ಅನೇಕ ಮಹಿಳೆಯರು ತಮ್ಮ ಕೂದಲನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಕೂದಲು ಸುಂದರವಾಗಿರಬೇಕೆಂದು ನೀವು ಬಯಸುತ್ತಿದ್ದಾರೆ, ಇದಕ್ಕಾಗಿ ಸರಿಯಾದ ಶಾಂಪೂ, ಎಣ್ಣೆ ಮತ್ತು ಬಾಚಣಿಗೆ ಬಳಸಿ. 


ಇದನ್ನೂ ಓದಿ-Hair Colouring Tips: ಕೂದಲಿಗೆ ಬಣ್ಣ ಹಚ್ಚುವುದರಿಂದಾಗುವ ಈ ಅನಾನುಕೂಲತೆಗಳು ನಿಮಗೆ ತಿಳಿದಿವೆಯಾ!


(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.