Hair loss problem: ಕೂದಲು ಉದುರುವ ಸಮಸ್ಯೆ ಇಂದಿನ ಯುವಕ-ಯುವತಿಯರಲ್ಲಿ ಸಾಮನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಪುರುಷರಲ್ಲಿ ಬೋಳು ತಲೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಲಾಗುತ್ತದೆ. ಎಷ್ಟೇ ಎಣ್ಣೆ, ಶಾಂಪೂ, ಕಂಡೀಷನರ್ ಬಳಸಿದರೂ ಬೊಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲವೇ? ಗಿಡಮೂಲಿಕೆಗಳ ಸೌಂದರ್ಯವರ್ಧಕಗಳು ಕೆಲಸಕ್ಕೆ ಬರುತ್ತಿಲ್ಲವೇ? ಹಾಗಾದ್ರೆ ಇಂದು ನಾವು ತಿಳಿಸುವ ಈ ಸರಳ ಸಲಹೆಗಳನ್ನು ಪಾಲಿಸಿರಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿಮಗೆ ಲೈಂಗಿಕ ಆಸಕ್ತಿ ಕಡಿಮೆ ಇದ್ಯಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ..!


  • ದಿನನಿತ್ಯದ ಜೀವನದಲ್ಲಿ ನಾವು ತಿಳಿಯದೆ ಮಾಡುವ ಕೆಲ ತಪ್ಪುಗಳು ಕೂದಲು ಉದುರುವಿಕೆ ಸಮಸ್ಯೆಯನ್ನು ಹೆಚ್ಚಿಸುತ್ತವೆ. ದೇಹದಲ್ಲಿ ನೀರಿನ ಕೊರತೆಯು ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಿಸುತ್ತದೆ. ಹೀಗಾಗಿ ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆಯು ದೇಹದ ಆಂತರಿಕ ಅಂಗಗಳ ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಉಂಟುಮಾಡುತ್ತದೆ.

  • ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಬೋಳು ನಿವಾರಣೆಯಾಗುವ ಮುನ್ನವೇ ಈ ಎರಡು ಅಭ್ಯಾಸಗಳನ್ನು ಬಿಡಬೇಕು.

  • ತೂಕ ಇಳಿಸಿಕೊಳ್ಳಲು ಆಹಾರಕ್ರಮವನ್ನು ಅನುಸರಿಸುತ್ತಾರೆ. ಪರಿಣಾಮ ದೇಹದಲ್ಲಿ ವಿಟಮಿನ್ C, D, ಕಬ್ಬಿಣ, ಸತು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಕೊರತೆಯಿದ್ದರೆ, ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ.

  • ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ. 

  • ಕೂದಲಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಬೇಕು.

  • ಅತಿಯಾದ ಶಾಖವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಸಹ ಹೆಚ್ಚಿಸುತ್ತದೆ.

  • ಕೂದಲಿಗೆ ಕಲರ್, ಸ್ಟ್ರೈಟ್ನರ್ ಮತ್ತು ಡ್ರೈಯರ್ ಬಳಸುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ.


ಇದನ್ನೂ ಓದಿ: Skin Care: ರೋಸ್ ವಾಟರ್ ಅನ್ನು ಈ ರೀತಿ ಬಳಸಿದ್ರೆ 30 ದಾಟಿದ್ರು ಯಂಗ್ ಆಗೇ ಕಾಣಬಹುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.