ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಹುಡುಗರ ಮತ್ತು ಹುಡುಗಿಯರ ಕೂದಲುಗಳು 20-25 ನೇ ವಯಸ್ಸಿನಲ್ಲಿಯೇ ಉದುರಲು ಪ್ರಾರಂಭಿಸುತ್ತವೆ. ಇದೇ ವೇಳೆ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ, ಸಾಮಾನ್ಯ ಋತುವಿಗಿಂತ ಹೆಚ್ಚು ಕೂದಲು ಉದುರುತ್ತದೆ. ಇಂದು ಸಮಸ್ಯೆ ಏನೆಂದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ದುಬಾರಿ ಬೆಲೆಯ ಶಾಂಪೂ, ಕಂಡೀಷನರ್, ಹೇರ್ ಆಯಿಲ್ ಗಳು ಕೂಡ ಕೂದಲು ಉದುರುವುದನ್ನು ತಡೆಗಟ್ಟಲು ವಿಫಲ ಸಾಬೀತಾಗುತ್ತಿವೆ. ಏಕೆಂದರೆ ಅವುಗಳಲ್ಲಿ ಹಲವು ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ನೀವು ಸಹ ಈ ಉತ್ಪನ್ನಗಳನ್ನು ಬಳಸಿ ನಿರಾಶೆ ಹೊಂದಿದ್ದರೆ, ಹತಾಶರಾಗಬೇಡಿ. ಕೂದಲು ಉದುರುವುದನ್ನು ತಡೆಯಲು ಈಗ ನೀವು ಆಯುರ್ವೇದ ವಿಧಾನವನ್ನು ಅಳವಡಿಸಿಕೊಳ್ಳಬಹುದು. (Lifestyle News In Kannada)


COMMERCIAL BREAK
SCROLL TO CONTINUE READING

ಆಯುರ್ವೇದದಲ್ಲಿ ಉಲ್ಲೇಖಿಸಲಾದ ಪರಿಹಾರಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ, ಅವು ತುಂಬಾ ಪರಿಣಾಮಕಾರಿ ಎಂದೂ ಕೂಡ ಸಾಬೀತಾಗುತ್ತವೆ. ಇಂದು ನಾವು ಆಯುರ್ವೇದದಲ್ಲಿ ಬಳಸುವ 5 ವಸ್ತುಗಳನ್ನು ಬೆರೆಸಿ ವಿಶೇಷ ಹೇರ್ ಮಾಸ್ಕ್  ಹೇಗೆ ತಯಾರಿಸಬೇಕು ಎಂಬುದನ್ನು ನಿಮಗೆ ಹೇಳಿಕೊಡಳಿದ್ದೇವೆ. ಈ ಮಾಸ್ಕ್ ಕೆಲವೇ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದರೊಂದಿಗೆ ಇದರ ಬಳಕೆಯಿಂದ ತಲೆಹೊಟ್ಟು ಸಮಸ್ಯೆಯೂ ನಿವಾರಣೆಯಾಗುತ್ತದೆ. ಈ ಆಯುರ್ವೇದ ಮಾಸ್ಕ್  ಹೇಗೆ ತಯಾರಿಸುವುದು ತಿಳಿದುಕೊಳ್ಳೋಣ ಬನ್ನಿ, 


ಆಯುರ್ವೇದ ಹೇರ್ ಮಾಸ್ಕ್‌ಗೆ ಬೇಕಾದ ಪದಾರ್ಥಗಳು
2 ಟೀ ಚಮಚ ಶಿಕಾಕಾಯಿ ಪುಡಿ


2 ಟೀ ಚಮಚ ಮೆಂತ್ಯ ಬೀಜಗಳ ಪುಡಿ


1 ಟೀಸ್ಪೂನ್ ಬ್ರಾಹ್ಮಿ ಪುಡಿ


3 ಸ್ಪೂನ್ ಮೊಸರು ಅಥವಾ ಯೋಗಾರ್ಟ್


2 ಟೀಸ್ಪೂನ್ ನಿಂಬೆ ರಸ


ಆಂಟಿ ಹೇಯರ್ ಫಾಲ್ ಮಾಸ್ಕ್ ಹೇಗೆ ತಯಾರಿಸಬೇಕು?
1. ಮೊದಲು ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಿ. ಈ ಬಟ್ಟಲಿನಲ್ಲಿ ಎಲ್ಲಾ ಮೂರು ಚಮಚ ಪುಡಿಯನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.


2. ಈಗ ಅದಕ್ಕೆ ಮೊಸರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಹೇಯರ್ ಮಾಸ್ಕ್ ಗಾಢವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.


3. ಇದರ ನಂತರ 3 ಚಮಚ ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.


4. ನಿಮ್ಮ ಹೇರ್ ಮಾಸ್ಕ್ ಸಿದ್ಧವಾಗಿದೆ, ಈಗ ನೀವು ಅದನ್ನು ನಿಮ್ಮ ಕೂದಲಿಗೆ ಅನ್ವಯಿಸಬಹುದು.


ಇದನ್ನೂ ಓದಿ -ಶಾಂಪೂ ಪ್ಲಸ್ ಈ 5 ಪದಾರ್ಥ ಬಳಸಿ ಕೂದಲುದುರುವಿಕೆಗೆ ಬ್ರೇಕ್ ಹಾಕಿ, ದಟ್ಟ, ನೀಳವಾದ ಕೇಶರಾಶಿ ನಿಮ್ಮದಾಗಿಸಿ!


ಹೇರ್ ಮಾಸ್ಕ್ ಅನ್ನು ಹೇಗೆ ಅನ್ವಯಿಸಬೇಕು?
1. ಕೂದಲಿಗೆ ಹೇರ್ ಮಾಸ್ಕ್ ಅನ್ನು ಅನ್ವಯಿಸಲು, ಮೊದಲು ಸಾಮಾನ್ಯ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿ.


2. ನೀವು ಬಯಸಿದರೆ, ಕ್ಯಾಸ್ಟರ್ ಆಯಿಲ್ ಮತ್ತು ಆಲಿವ್ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಬಹುದು. ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ.


3. ಕೂದಲಿಗೆ ಮಸಾಜ್ ಮಾಡಿದ ನಂತರ, ಟವೆಲ್ ಅಥವಾ ಬಟ್ಟೆಯನ್ನು ನೆನೆಸಿ ಮತ್ತು ಅದನ್ನು ನಿಮ್ಮ ಕೂದಲಿಗೆ ಕಟ್ಟಿಕೊಳ್ಳಿ ಮತ್ತು ಒಂದು ಗಂಟೆ ಬಿಡಿ.


4. ಸುಮಾರು ಒಂದು ಗಂಟೆಯ ನಂತರ, ಕೂದಲಿನಿಂದ ಬಟ್ಟೆಯನ್ನು ತೆಗೆದುಹಾಕಿ ಮತ್ತು ನಂತರ ಸಿದ್ಧಪಡಿಸಿದ ಮಾಸ್ಕ್ ಅನ್ನು ಕೂದಲಿನ ಬೇರುಗಳಿಗೆ ಅನ್ವಯಿಸಿ.


5. ಸುಮಾರು ಅರ್ಧ ಘಂಟೆಯವರೆಗೆ ಕೂದಲನ್ನು ಹಾಗೆಯೇ ಬಿಡಿ.


6. ಇದಾದ ಬಳಿಕ ಶಾಂಪೂ ಬಳಸದೇ ಕೂದಲನ್ನು ತೊಳೆಯಿರಿ.ಇದಾದ ನಂತರ ಕೂದಲಿಗೆ ಕಂಡೀಷನರ್ ಹಚ್ಚಿ ತೊಳೆಯಿರಿ.


7. ವಾರಕ್ಕೊಮ್ಮೆ ಈ ಮಾಸ್ಕ್ ಹಾಕುವುದರಿಂದ ಕೂದಲಿಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯೂ ನಿವಾರಣೆಯಾಗುತ್ತದೆ. 


ಇದನ್ನೂ ಓದಿ-ಲೆಮನ್ ಕಾಫಿ ಸೇವನೆಯಿಂದ ತೂಕ ಇಳಿಕೆಯಾಗುತ್ತಾ? ಹೌದು ಎಂದಾದ್ರೆ ಹೇಗೆ ಇಲ್ಲಿ ತಿಳಿದುಕೊಳ್ಳಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ