ಬೆಂಗಳೂರು: ಸಾಮಾನ್ಯವಾಗಿ ಕೋಸಂಬರಿ ಮತ್ತು ಸಲಾಡ್‌ಗಳ ರುಚಿಯನ್ನು ಹೆಚ್ಚಿಸಲು ಕಪ್ಪು ಉಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಸೇವನೆಯು ದೇಹವನ್ನು ಆರೋಗ್ಯವಾಗಿಡಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಪ್ಪು ಉಪ್ಪನ್ನು ಬಳಸುವುದರಿಂದ ಕೂದಲು ಸಂಬಂಧಿತ ಹಲವು ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ. ಹೌದು ಕಪ್ಪು ಉಪ್ಪಿನಲ್ಲಿರುವ ಗುಣಲಕ್ಷಣಗಳು ತಲೆಹೊಟ್ಟು ಹೋಗಲಾಡಿಸಲು ಮತ್ತು ಕೂದಲು ಉದುರುವಿಕೆಯನ್ನು ತೊಡೆದುಹಾಕಲು ಪ್ರಯೋಜನಕಾರಿಯಾಗಿದೆ. ವಾಸ್ತವದಲ್ಲಿ, ವಿಟಮಿನ್ ಎ, ಕಬ್ಬಿಣದ ಸಲ್ಫೈಡ್, ಹೈಡ್ರೋಜನ್ ಸಲ್ಫೈಡ್, ಉತ್ಕರ್ಷಣ ನಿರೋಧಕ ಮತ್ತು ಪೊಟ್ಯಾಸಿಯಮ್ನಂತಹ ಗುಣಲಕ್ಷಣಗಳು ಬ್ಲಾಕ್ ಸಾಲ್ಟ್ ನಲ್ಲಿ ಕಂಡುಬರುತ್ತವೆ. ಇದನ್ನು ಕೂದಲಿಗೆ ನಿಯಮಿತವಾಗಿ ಬಳಸುವುದರಿಂದ ಅನೇಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.


COMMERCIAL BREAK
SCROLL TO CONTINUE READING

ಕಪ್ಪು ಉಪ್ಪನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು
ಕೂದಲಿನ ಮೇಲೆ ನಿಯಮಿತವಾಗಿ ಕಪ್ಪು ಉಪ್ಪನ್ನು ಬಳಸುವುದು ಬಿಳಿ ಕೂದಲು, ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಕೂದಲು ಸೀಳುವಿಕೆ ಸಮಸ್ಯೆಯಲ್ಲಿ  ತುಂಬಾ ಪ್ರಯೋಜನಕಾರಿಯಾಗಿದೆ. ಈ ಕುರಿತಾಗಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ, ಕಪ್ಪು ಉಪ್ಪು ಕೂದಲಿಗೆ ಔಷಧಿಗಿಂತ ಕಡಿಮೆಯಿಲ್ಲ ಎನ್ನಲಾಗಿದೆ . ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಬಳಸುವುದು ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಕಪ್ಪು ಉಪ್ಪಿನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.


ಕೂದಲಿಗೆ ಕಪ್ಪು ಉಪ್ಪನ್ನು ಬಳಸುವುದು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ


1. ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ
ಕಪ್ಪು ಉಪ್ಪು ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳ ಆಗರವಾಗಿದೆ. ಇದನ್ನು ಎಣ್ಣೆಯಲ್ಲಿ ಬೆರೆಸಿ ವಾರಕ್ಕೆ ಎರಡರಿಂದ ಮೂರು ಬಾರಿ ಬಳಸುವುದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯಬೇಡಿ.


2. ತಲೆಹೊಟ್ಟು ನಿವಾರಿಸುತ್ತದೆ
ಕೂದಲು ಮತ್ತು ನೆತ್ತಿಯ ಮೇಲೆ ಸಂಗ್ರಹವಾಗಿರುವ ಡ್ಯಾಂಡ್ರಫ್ ಅನ್ನು ತೆಗೆದುಹಾಕಲು ಕಪ್ಪು ಉಪ್ಪಿನ ಬಳಕೆ ತುಂಬಾ ಪ್ರಯೋಜನಕಾರಿಯಾಗಿದೆ. ಟೊಮೆಟೊ ಅಥವಾ ನಿಂಬೆ ರಸದಲ್ಲಿ ಕಪ್ಪು ಉಪ್ಪನ್ನು ಬೆರೆಸಿ ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದನ್ನು ಕೂದಲಿಗೆ ಹಚ್ಚಿದ ನಂತರ ಸ್ವಲ್ಪ ಸಮಯ ಬಿಟ್ಟು ನಂತರ ಶಾಂಪೂವಿನಿಂದ ಕೂದಲನ್ನು ಸ್ವಚ್ಛಗೊಳಿಸಿ.


3. ಕೂದಲು ಬೆಳವಣಿಗೆಯನ್ನು ಹೆಚ್ಚಿಸಿ
ಕಪ್ಪು ಉಪ್ಪು ಮತ್ತು ಟೊಮೆಟೊ ರಸದಿಂದ ಮಾಡಿದ ಹೇರ್ ಪ್ಯಾಕ್ ಅನ್ನು ಬಳಸುವುದರಿಂದ ಕೂದಲಿಗೆ ಸಾಕಷ್ಟು ಪೋಷಣೆ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಮತ್ತು ಇತರ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


4. ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ
ಪೌಷ್ಠಿಕಾಂಶದ ಕೊರತೆ ಮತ್ತು ಆನುವಂಶಿಕ ಕಾರಣಗಳಿಂದ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿಗುಗುವ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕಪ್ಪು ಉಪ್ಪನ್ನು ಕ್ಯಾಸ್ಟರ್ ಆಯಿಲ್ ಬೆರೆಸಿ ಕೂದಲಿಗೆ ಹಚ್ಚಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸುವುದು ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ.


ಇದನ್ನೂ ಓದಿ-ತೂಕ ಇಳಿಕೆಗೆ ಕಾಶ್ಮೀರದ ಈ ಶಾಹಿ ಪೇಯ ಒಂದು ರಾಮಬಾಣ ಉಪಾಯ!


ಕಪ್ಪು ಉಪ್ಪಿನಲ್ಲಿರುವ ಖನಿಜಗಳು ಮತ್ತು ಇತರ ಪೋಷಕಾಂಶಗಳು ಕೂದಲನ್ನು ಬಲಪಡಿಸುತ್ತದೆ. ಇದನ್ನು ಬಳಸುವುದರಿಂದ ಸ್ಪ್ಲಿಟ್ ಎಂಡ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ-ವೇಗವಾಗಿ ತೂಕ ಇಳಿಕೆ ಮಾಡುತ್ತೆ ಈ ಹಿಟ್ಟಿನ ರೊಟ್ಟಿ, ಬೇಸಿಗೆಯ ಜೊತೆಗೆ ಚಳಿಗಾಲದಲ್ಲಿಯೂ ಬೊಜ್ಜು ಕರಗಿಸುತ್ತೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ