Anti Hari Fall Oils: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಜನರಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ನಿಮ್ಮ ಕೂದಲನ್ನು ಬಾಚಿಕೊಂಡ ನಂತರ, ಬಾಚಣಿಕೆಯಲ್ಲಿ ಬರುವ ಕೂದಲಿನ ಗುಂಪೇ ನಿಮ್ಮ ಕೂದಲು ತುಂಬಾ ದುರ್ಬಲವಾಗಿವೆ ಎಂಬುದನ್ನು ಸೂಚಿಸುತ್ತವೆ. ಹೀಗಾಗಿ ಕೂದಲು ಉದುರುವುದನ್ನು ತಡೆಯುವುದು ಬಹಳ ಮುಖ್ಯ. ಇಲ್ಲವಾದರೆ ಕೂದಲು ಉದುರುವುದರಿಂದ ಬೋಳು ಬೋಳು ತಲೆ ಸಮಸ್ಯೆ ಎದುರಾಗುತ್ತದೆ. ಕೂದಲು ಉದುರುವುದನ್ನು ತಡೆಯಲು ಮತ್ತು ಉತ್ತಮ ಬೆಳವಣಿಗೆಗೆ ಕೆಲ ಎಣ್ಣೆಗಳು ಅತ್ಯುತ್ತಮ ಎಣ್ಣೆಗಳು ಎಂದು ಪರಿಗಣಿಸಲಾಗಿವೆ. ಇಂದು ನಾವು ನಿಮಗೆ ಕೂದಲು ಉದುರುವಿಕೆಯನ್ನು ತಡೆಯುವ ಅಂತಹ 5 ಎಣ್ಣೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆ ತಡೆಯಲು ಇಲ್ಲಿವೆ 5 ನೈಸರ್ಗಿಕ ಎಣ್ಣೆಗಳು
ಹರಳೆಣ್ಣೆ

ಕ್ಯಾಸ್ಟರ್ ಆಯಿಲ್ ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲುಗಳು ದಟ್ಟವಾಗಿ ಬೆಳೆಯಲು ಪ್ರಯೋಜನಕಾರಿಯಾಗಿದೆ. ಕ್ಯಾಸ್ಟರ್ ಆಯಿಲ್ ವಿಟಮಿನ್ ಇ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಕ್ಯಾಸ್ಟರ್ ಆಯಿಲ್ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ನೆತ್ತಿಯ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.


ತೆಂಗಿನ ಎಣ್ಣೆ
ತೆಂಗಿನೆಣ್ಣೆಯು ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿಗೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಒಳ್ಳೆಯದು. ತೆಂಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆಯ ಮಸಾಜ್ ಕೂದಲಿಗೆ ಪೋಷಣೆಯನ್ನು ನೀಡುತ್ತದೆ.


ಆಮ್ಲಾ ಎಣ್ಣೆ
ಆಮ್ಲಾ ಎಣ್ಣೆ ಕೂದಲಿಗೆ ತುಂಬಾ ಉಪಯುಕ್ತಕಾರಿಯಾಗಿದೆ. ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಕೂದಲು ಉದುರುವುದನ್ನು ತಡೆಯುವುದಲ್ಲದೆ, ಕೂದಲಿನ ಬೆಳವಣಿಗೆಯನ್ನು ಇದು ಹೆಚ್ಚಿಸುತ್ತದೆ.


ರೋಸ್ಮರಿ ಎಣ್ಣೆ
ರೋಸ್ಮರಿ ಎಣ್ಣೆಯನ್ನು ಕೂದಲಿನ ಬೆಳವಣಿಗೆಗೆ ಬಳಸಬಹುದು. ಇದು ಕೂದಲು ಉದುರುವುದನ್ನು ತಡೆಯುವುದಲ್ಲದೆ, ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಕೂದಲಿನ ಆರೈಕೆಗಾಗಿ ನೀವು ಈ ಎಣ್ಣೆಯನ್ನು ಬಳಸಬಹುದು.


ಇದನ್ನೂ ಓದಿ-ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ನೀಡುತ್ತೇ ಮೊಸರು, ಈ 3 ವಿಧಗಳಲ್ಲಿ ಬಳಸಿ!


ಆಲಿವ್ ಎಣ್ಣೆ
ಕೂದಲು ಉದುರುವುದನ್ನು ತಡೆಯಲು ಆಲಿವ್ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.


ಇದನ್ನೂ ಓದಿ-Weight Loss ಗೋಸ್ಕರ ನೀವೂ ಡೈಟಿಂಗ್ ಮಾಡುತ್ತಿರುವಿರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.