ಬೆಂಗಳೂರು : ಉದ್ದನೆಯ ಕೂದಲು ಹೊಂದುವುದು ಪ್ರತಿ ಹೆಣ್ಣಿನ ಆಸೆಯಾಗಿರುತ್ತದೆ. ಇದಕ್ಕಾಗಿ ಬಹಳ ಸರ್ಕಸ್ ಕೂಡಾ ಮಾಡುತ್ತಾರೆ.  ಆದರೂ ನಾವು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಸೇವಿಸುವ ಕಳಪೆ ಆಹಾರದ ಕಾರಣದಿಂದಾಗಿ, ಕೂದಲು ದುರ್ಬಲಗೊಂಡು ಉದುರಲು ಪ್ರಾರಂಭಿಸುತ್ತದೆ. ತಜ್ಞರ ಪ್ರಕಾರ, ಜೆನೆಟಿಕ್ಸ್, ಮಾಲಿನ್ಯ, ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಉತ್ಪನ್ನಗಳು ಕೂದಲು ಉದುರುವ ಹಿಂದಿನ ಮುಖ್ಯ ಕಾರಣವಾಗಿದೆ. ಇಲ್ಲಿ ಕೂದಲು ಉದುರುವುದು ಮಾತ್ರವಲ್ಲ ಕೂದಲ ಬೆಳವಣಿಗೆ ಕೂಡಾ ನಿಲ್ಲುತ್ತದೆ. ಆದರೆ, ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಕೂದಲಿನ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಲಿಕ್ವಿಡ್ ಸೀರಮ್ :
ತಜ್ಞರ ಪ್ರಕಾರ, ಕೂದಲು ಶುಷ್ಕ ಮತ್ತು ಫ್ರಿಜ್ ಆಗಿರುವುದರಿಂದ ಒಡೆಯಲು ಪ್ರಾರಂಭಿಸುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಹೇರ್ ಸೀರಮ್ ಬಳಸಿ. ಲಿಕ್ವಿಡ್ ಸೀರಮ್ ಡಿಟ್ಯಾಂಗಲ್ಸ್ ಮತ್ತು ಕೂದಲನ್ನು ಮೃದುವಾಗಿಸುತ್ತದೆ. 


ಇದನ್ನೂ ಓದಿ : Green peas Side Effects: ಈ ಜನರು ಅಪ್ಪಿತಪ್ಪಿಯೂ ಬಟಾಣಿ ತಿನ್ನಬಾರದು: ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುತ್ತದೆ


ಕೂದಲು ಬಾಚಿಕೊಂಡು ಮಲಗಿ :
ರಾತ್ರಿ ಮಲಗುವ ಮುನ್ನ  ಕೂದಲು ಬಾಚಿದರೆ ಕೂದಲು ಸಿಕ್ಕಾಗುವುದಿಲ್ಲ. ರಾತ್ರಿ ಕೂದಲು ಬಾಚುವುದರಿಂದ ಕೂದಲಿನ ಬೇರುಗಳಲ್ಲಿ ಎಣ್ಣೆ ಬಿಡುಗಡೆಯಾಗುತ್ತದೆ. ಹೀಗಾಗಿ ಕೂದಲು ಶುಷ್ಕವಾಗುವುದಿಲ್ಲ. 


ಮಲಗುವ ಮುನ್ನ ಕೂದಲು ಒಣಗಿಸಿಕೊಳ್ಳಿ :
ಹೆಚ್ಚಿನವರು ರಾತ್ರಿ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಹಾಗೆಯೇ ಬಿಡುತ್ತಾರೆ. ಒದ್ದೆ ಕೂದಲಿನೊಂದಿಗೆ ಮಲಗುತ್ತಾರೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನೀವು ಕೂಡಾ ಹೀಗೆ ಮಾಡುತ್ತಿದ್ದರೆ ನಿಮ್ಮ ಅಭ್ಯಾಸವನ್ನು ತಕ್ಷಣ ಬದಲಾಯಿಸಿಕೊಳ್ಳಿ.   


ಇದನ್ನೂ ಓದಿ : Uric Acid Pain : ದೇಹದ ಈ ಭಾಗಗಳಲ್ಲಿ ತೀವ್ರವಾದ ನೋವಿದ್ದರೆ ನಿರ್ಲಕ್ಷ ಬೇಡ.!


ಮಲಗುವ ವೇಳೆ ಕೂದಲು ಕಟ್ಟಿಕೊಳ್ಳಬೇಡಿ :
ಕೆಲವರಿಗೆ ಮಲಗುವ ವೇಳೆ ಕೂದಲನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸದಿಂದ ಕೂದಲಿಗೆ ಹಾನಿಯಾಗುತ್ತದೆ. 


ಡೀಪ್ ಕಂಡೀಷನಿಂಗ್ :
ಆರೋಗ್ಯಕರ ಕೂದಲಿಗೆ ಡೀಪ್ ಕಂಡೀಷನಿಂಗ್ ಬಹಳ ಮುಖ್ಯ. ಇದಕ್ಕಾಗಿ, ಬಾದಾಮಿ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚಿ. ಇದರಲ್ಲಿ ವಿಟಮಿನ್-ಇ ಕ್ಯಾಪ್ಸುಲ್ ಗಳನ್ನು ಕೂಡಾ ಸೇರಿಸಿಕೊಳ್ಳಬಹುದು.  


ಇದನ್ನೂ ಓದಿ : Weight Loss Diet: ಈ ಬಿಳಿ ಬೀಜಗಳಲ್ಲಿ ಅಡಗಿದೆ ತೂಕ ಇಳಿಕೆಯ ರಹಸ್ಯ.!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.