ಬೆಂಗಳೂರು : ಪ್ರತಿದಿನ 50 ರಿಂದ 100 ಕೂದಲುಗಳು ಉದುರುತ್ತವೆ. ಕೂದಲು ಉದುರುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರಲ್ಲಿ ಇದ್ದಕ್ಕಿದ್ದಂತೆ  ಕೂದಲು ಉದುರುವುದು ಆರಂಭವಾಗುತ್ತದೆ. ಹಳೆಯ ಕೂದಲು ಉದುರಿದರೂ, ಹೊಸ ಕೂದಲು ಬೆಳೆಯಬೇಕು. ಇಲ್ಲವಾದಲ್ಲಿ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವ ಸಮಸ್ಯೆ ಅಪಾಯ ಮಟ್ಟಕ್ಕೆ ತಲುಪುವ ಮುನ್ನ ಇದಕ್ಕೆ ಪರಿಹಾರ ಮಾರ್ಗವನ್ನು ಕಂಡು ಹಿಡಿಯಬೇಕು. ಮನೆಯಲ್ಲಿಯೇ ತಯಾರಿಸುವ ಹೇರ್ ಮಾಸ್ಕ್ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.


COMMERCIAL BREAK
SCROLL TO CONTINUE READING

ಕೂದಲು  ಉದುರುವುದಕ್ಕೆ ಕಾರಣ ? : 
ಹಾರ್ಮೋನುಗಳ ಬದಲಾವಣೆಯಿಂದ ಹಿಡಿದು ವಿವಿಧ ವೈದ್ಯಕೀಯ ಸ್ಥಿತಿಗಳವರೆಗೆ  ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿರಬಹುದು. ಬೋಳು ತಲೆ ಅಥವಾ ಕೂದಲು ಉದುರುವುದು ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಮಹಿಳೆಯರಲ್ಲಿಯೂ ಈ ಸಮಸ್ಯೆ ಕಂಡು ಬರುತ್ತದೆ. 


ಇದನ್ನೂ ಓದಿ : ದೇಹದ ಕೊಬ್ಬನ್ನು ಬರ್ನ್ ಮಾಡಲು ಕುಡಿಯಿರಿ ಈ 'ಮ್ಯಾಜಿಕ್' ಡಿಟಾಕ್ಸ್ ಡ್ರಿಂಕ್ಸ್!


ಚಳಿಗಾಲದಲ್ಲಿ ಕೂದಲು ನಿರ್ಜೀವವಾಗುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಜನರ ಕೂದಲು ಸಾಮಾನ್ಯಕ್ಕಿಂತ ಹೆಚ್ಚಾಗಿ ಉದುರುತ್ತದೆ. ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಲು  ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು.  


ಮೆಂತ್ಯೆ ಬೀಜಗಳು ಕೂದಲಿಗೆ  ಬಹಳ ಉಪಯುಕ್ತವಾಗಿದೆ. ಇದರ ಜೊತೆಗೆ ಈರುಳ್ಳಿ ಕೂಡಾ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕೂದಲಿನ ಆರೈಕೆಗಾಗಿ ಹಿಂದಿನಿಂದಲೂ ಮೆಂತ್ಯೆಯನ್ನು ಬಳಸಲಾಗುತ್ತಿದೆ. ಇದು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುವ ಲೆಸಿಥಿನ್‌ನ ನಿಂದ  ಕೂಡಿದೆ. 


ಮೆಂತ್ಯೆ ನೆತ್ತಿಯನ್ನು ತೇವಗೊಳಿಸಿ ಕೂದಲು ಉದುರುವುದನ್ನು ತಡೆಯುತ್ತದೆ. ನಿಮ್ಮ ಕೂದಲನ್ನು ದಪ್ಪವಾಗಿಸುವಲ್ಲಿ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯಲ್ಲಿ ಮೆಂತ್ಯೆ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ. ಅಗತ್ಯವಾದ ಖನಿಜಗಳು ಮತ್ತು ಶಕ್ತಿಯುತ ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಮೆಂತ್ಯೆಯು ಹಾನಿಗೊಳಗಾದ ಕೂದಲಿಗೆ ಮತ್ತೆ ಹೊಳಪು ನೀಡುತ್ತದೆ. 


ಇದನ್ನೂ ಓದಿ :ವೇಗವಾಗಿ ತೂಕ ಇಳಿಕೆ ಮಾಡುತ್ತೆ ಈ ಹಿಟ್ಟಿನ ರೊಟ್ಟಿ, ಬೇಸಿಗೆಯ ಜೊತೆಗೆ ಚಳಿಗಾಲದಲ್ಲಿಯೂ ಬೊಜ್ಜು ಕರಗಿಸುತ್ತೆ!


ಮತ್ತೊಂದೆಡೆ ಈರುಳ್ಳಿಯಲ್ಲಿ ಸಲ್ಫರ್‌ ಸಮೃದ್ಧವಾಗಿದೆ. ಇದು ಕೂದಲು ಉದುರುವಿಕೆ ಮತ್ತು ಕೂದಲು ಒಡೆಯುವ ಸಮಸ್ಯೆಗಳಿಂದ ಶಾಶ್ವತ ಪರಿಹಾರ ನೀಡುತ್ತದೆ. 


ಕೂದಲು ಉದುರುವುದನ್ನು ತಡೆಯಲು ಮೆಂತ್ಯೆ ಮತ್ತು ಈರುಳ್ಳಿಯ ಪೋಷಕಾಂಶಗಳು :
ಮೆಂತ್ಯೆ ಬೀಜಗಳು ಕೂದಲು ಉದುರುವಿಕೆಯನ್ನು ತಡೆಯುವ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅವು ಕಬ್ಬಿಣ ಮತ್ತು ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಕೂದಲು ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತದೆ. ಇದಲ್ಲದೆ, ಮೆಂತ್ಯೆ ಬೀಜಗಳು ಫೋಲಿಕ್ ಆಮ್ಲ, ವಿಟಮಿನ್ ಎ, ಕೆ ಮತ್ತು ಸಿ ಮತ್ತು ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಭಂಡಾರವಾಗಿದೆ. ಆದ್ದರಿಂದ, ಮೆಂತ್ಯೆ ಕೂದಲು ಉದುರುವುದು, ಒಣ ಕೂದಲು ಮುಂತಾದ ಸಮಸ್ಯೆಯನ್ನು ಗುಣಪಡಿಸುತ್ತದೆ. 


ಮತ್ತೊಂದೆಡೆ, ಈರುಳ್ಳಿ ನಿಮ್ಮ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಕೂದಲು ಉದುರುವುದನ್ನು ಕೂಡಾ ತಡೆಯುತ್ತದೆ. ಇದು ಫೋಲಿಕ್ ಆಮ್ಲ, ಸಲ್ಫರ್ ಮತ್ತು ವಿಟಮಿನ್ ಸಿ ನಂತಹ ಶಕ್ತಿಯುತ ಅಂಶಗಳನ್ನು ಒಳಗೊಂಡಿದೆ. ಸಲ್ಫರ್ ಅಂಶವು ಕೂದಲು ಒಡೆಯುವಿಕೆ ಮತ್ತು ತೆಳುವಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಉದುರಿದ ಜಾಗದಲ್ಲಿ ಮತ್ತೆ ಕೂದಲು  ಬೆಳೆಯುವಂತೆ ಮಾಡುತ್ತದೆ. 


ಇದನ್ನೂ ಓದಿ : ಕೇವಲ 30 ನಿಮಿಷ ಜಾಗಿಂಗ್ ಮಾಡಿ, ಈ ಎಲ್ಲಾ ಪ್ರಯೋಜನ ಪಡೆಯಿರಿ...!


ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನೆತ್ತಿಯ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.


ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು ಹೇಗೆ? : 
ಕೂದಲು ಉದುರುವುದನ್ನು ತಡೆಯಲು ಮೆಂತ್ಯೆ ಮತ್ತು ಈರುಳ್ಳಿ ಹೇರ್ ಮಾಸ್ಕ್ : 
* ಮೊದಲು ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿಡಿ.
* ಬೆಳಿಗ್ಗೆ ಇವುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಉತ್ತಮವಾದ ಪೇಸ್ಟ್ ಮಾಡಿ.
* ಅರ್ಧ ಈರುಳ್ಳಿಯನ್ನು ತುರಿದು ರಸವನ್ನು ಮಸ್ಲಿನ್ ಬಟ್ಟೆಯಲ್ಲಿ ಸೋಸಿಕೊಳ್ಳಿ.
* ಒಂದು ಪಾತ್ರೆಯಲ್ಲಿ ಮೆಂತ್ಯೆ ಪೇಸ್ಟ್ ಮತ್ತು ಈರುಳ್ಳಿ ರಸವನ್ನು ಒಟ್ಟಿಗೆ ಮಿಶ್ರಣ ಮಾಡಿ.


ನಯವಾದ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. 


ಇದನ್ನೂ ಓದಿ : ತೋಳು ನೋವಿನಿಂದ ಬೇಸತ್ತಿದ್ದಿರಾ? ಚಿಂತಿಸಬೇಡಿ!..ಇಲ್ಲಿದೆ ಸುಲಭ ಪರಿಹಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.