Hair Astrology: ಹೆಚ್ಚಿನ ಜನರು ಕಪ್ಪು ಉದ್ದನೆಯ ಕೂದಲನ್ನು ಸೌಂದರ್ಯದ ಅಳತೆ ಎಂದು ಪರಿಗಣಿಸುತ್ತಾರೆ, ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೂದಲು ಮಾನವ ಸ್ವಭಾವಕ್ಕೆ ಸಂಬಂಧಿಸಿದೆ ಎಂಬುದು ನಿಮಗೆ ತಿಳಿದಿದೆಯೇ? ಜನರ ಕೂದಲು ನೋಡಿ ಅವರ ಸ್ವಭಾವ ಹೇಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಏನಾಗಬಹುದು ಎಂಬುದನ್ನು ಹೇಳಬಹುದು ಎನ್ನುತ್ತಾರೆ ಸಾಮುದ್ರಿಕ ಶಾಸ್ತ್ರಜ್ಞರು. ಹಾಗಾದರೆ ಬನ್ನಿ ಯಾವ ರೀತಿಯ ಕೂದಲುಗಳು ವ್ಯಕ್ತಿಯ ಯಾವ ಸ್ವಭಾವದ ಕುರಿತು ಹೇಳುತ್ತವೆ ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಕೂದಲು ವ್ಯಕ್ತಿತ್ವವನ್ನು ಹೇಳುತ್ತದೆ
1. ಗುಂಗುರು ಕೂದಲು ಹೊಂದಿರುವ ಜನರು ಜನರು ಅದೃಷ್ಟದ ವಿಷಯದಲ್ಲಿ ತುಂಬಾ ಲಕ್ಕಿಯಾಗಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರಜ್ಞರು ಹೇಳುತ್ತಾರೆ. ಅವರ ಅದೃಷ್ಟದ ನಕ್ಷತ್ರವು ತುಂಬಾ ಹೈ ಆಗಿರುತ್ತದೆ. ಈ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಾರೆ ಮತ್ತು ತಮ್ಮ ಕೆಲಸದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಗುಂಗುರು ಕೂದಲು ಇರುವವರು ಕಲಾವಿದರಾಗಿ ಬೆಳೆಯುತ್ತಾರೆ ಎಂದು ನಂಬಲಾಗಿದೆ. ಜನರೊಂದಿಗೆ ಅವರ ಸ್ನೇಹ ಉತ್ತಮವಾಗಿರುತ್ತದೆ ಮತ್ತು ಅವರು ಉತ್ತಮ ಸ್ನೇಹಿತರೆಂದು ಸಾಬೀತಾಗುತ್ತಾರೆ.


2. ಮೃದುವಾದ ಕೂದಲು ಇರುವವರಲ್ಲಿ ನಾಯಕತ್ವದ ಗುಣ ತುಂಬಾ ಚೆನ್ನಾಗಿರುತ್ತದೆ ಎಂದು ಈ ಶಾಸ್ತ್ರವನ್ನು ಓದಿದ  ತಜ್ಞರ ಅಭಿಪ್ರಾಯವಾಗಿದೆ . ಇವರು ತಮ್ಮ  ವ್ಯಕ್ತಿತ್ವದಿಂದ ಇತರ ಜನರನ್ನು ತುಂಬಾ ವೇಗವಾಗಿ ತಮ್ಮತ್ತ  ಆಕರ್ಷಿಸುತ್ತಾನೆ. ಈ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸುತ್ತಾರೆ ಮತ್ತು ಇವರು ಆರ್ಥಿಕವಾಗಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ.


ಇದನ್ನೂ ಓದಿ-Chanakya Niti: ನೀವು ನಿಮ್ಮ ಮನೆಗೆ ಯಜಮಾನನಾಗಿದ್ದರೆ, ಈ ಸಂಗತಿ ನಿಮಗೆ ತಿಳಿದಿರಲಿ


3. ಕೆಲವರು ತಮ್ಮ ತೆಳ್ಳನೆಯ ಕೂದಲಿನ ಬಗ್ಗೆ ತುಂಬಾ ಚಿಂತಾಕ್ರಾಂತರಾಗಿರುತ್ತಾರೆ, ಆದರೆ ತೆಳ್ಳನೆಯ ಕೂದಲು ಅದೃಷ್ಟದ ಸಂಕೇತವಾಗಿದೆ ಎಂಬುದು ನಿಮಗೆ ಗೊತ್ತಿರಲಿ. ಇಂತಹ ಜನರು ಉತ್ತಮ ಪ್ರೇಮಿಗಳು ಎಂದು ಸಾಬೀತಾಗುತ್ತಾರೆ ಮತ್ತು ಸ್ವಭಾವತಃ ತುಂಬಾ ಕರುಣಾಮಯಿಗಳಾಗಿರುತ್ತಾರೆ. ಕಲಾ ಕ್ಷೇತ್ರದಲ್ಲಿ ಇವರ ಕೈಯನ್ನು ಯಾರು ಹಿಡಿಯಲು ಸಾಧ್ಯವಿಲ್ಲ ಮತ್ತು ಇವರು ಯಾವಾಗಲೂ ಹೊಸ ವಿಷಯಗಳನ್ನು ಕಂಡುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ.


ಇದನ್ನೂ ಓದಿ-April ತಿಂಗಳಿನಲ್ಲಿ ಮಂಗಳನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಪ್ರವೇಶ, ಈ ರಾಶಿಗಳ ಜನರಿಗೆ ವಿಪರೀತ ರಾಜಯೋಗದ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ