ಬೆಂಗಳೂರು: ಕೆಲ ನೈಸರ್ಗಿಕ ಜ್ಯೂಸ್ ಗಳ ದಿನನಿತ್ಯದ ಸೇವನೆ ನಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಪ್ರತಿಯೊಬ್ಬರೂ ತಮ್ಮ ಕೂದಲುಗಳ ಮೂಲಕ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಕಪ್ಪು ದಪ್ಪ ಕೂದಲುಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ. ನಿಮ್ಮ ಆಹಾರದಲ್ಲಿ ಕೆಲವು ಪಾನೀಯಗಳನ್ನು ಸೇರಿಸುವ ಮೂಲಕ, ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳ ಕೊರತೆಯನ್ನು ಪೂರೈಸಬಹುದು (Lifestyle News In Kannada). ತಾಜಾ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳು ನಮ್ಮ ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ನೀಡುತ್ತವೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಈ ರಸಗಳು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಜ್ಯೂಸ್ ಕುಡಿಯುವುದರಿಂದ ಪೋಷಕಾಂಶಗಳು ದೇಹದಲ್ಲಿ ವೇಗವಾಗಿ ಹೀರಲ್ಪಡುತ್ತವೆ.

COMMERCIAL BREAK
SCROLL TO CONTINUE READING

ಅಲೋವೆರಾ ರಸ
ಅಲೋವೆರಾ ಸಸ್ಯದ ರಸವು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲೋವೆರಾದಲ್ಲಿರುವ ವಿಟಮಿನ್‌ಗಳು ಕೂದಲನ್ನು ಬಲಪಡಿಸಲು ಮತ್ತು ಒಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲೋವೆರಾ ಜ್ಯೂಸ್ ಕಿಣ್ವಗಳನ್ನು ಹೊಂದಿರುತ್ತದೆ ಅದು ಕೂದಲನ್ನು ಪೋಷಿಸಲು ಮತ್ತು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಅಲೋವೆರಾ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲೋವೆರಾ ಜ್ಯೂಸ್ ಕೂದಲನ್ನು ಹೊಳೆಯುವ ಹಾಗೆ ಮಾಡುತ್ತವೆ ಮತ್ತು ಮೃದುವಾಗಿಸಲು ಸಹಾಯ ಮಾಡುತ್ತದೆ.

ಕಿವಿ ರಸ
ಕಿವಿ ರಸದಲ್ಲಿ ವಿಟಮಿನ್ ಇ ಕಂಡುಬರುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಇ ಸೇವನೆಯಿಂದ ಕೂದಲಿನ ಬೆಳವಣಿಗೆಯು ವೇಗ ಪಡೆದುಕೊಳ್ಳುತ್ತದೆ. ಕಿವಿ ಜ್ಯೂಸ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ರೋಗನಿರೋಧಕ ಶಕ್ತಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಕೂದಲನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಕ್ಲೆನ್ಸಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.


ಕ್ಯಾರೆಟ್ ರಸ
ಕ್ಯಾರೆಟ್ ಜ್ಯೂಸ್ ಕೂದಲನ್ನು ದಟ್ಟವಾಗಿ ಮತ್ತು ಬಲವಾಗಿ ಮಾಡಲು ಪ್ರಯೋಜನಕಾರಿಯಾಗಿದೆ, ವಿಟಮಿನ್ ಎ ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಇದರಲ್ಲಿರುವ ಪೋಷಕಾಂಶಗಳು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

ಇದನ್ನೂ ಓದಿ-ಒಂದೇ ರಾತ್ರಿಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುತ್ತವೆ ಈ 5 ಮನೆ ಉಪಾಯಗಳು!


ಈರುಳ್ಳಿ ರಸ
ಈರುಳ್ಳಿ ರಸವು ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿ ಆರೋಗ್ಯಕರವಾಗಿದ್ದು, ಈರುಳ್ಳಿ ರಸವನ್ನು ನೇರವಾಗಿ ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಸಮೃದ್ಧವಾಗಿದೆ, ಇದು ನಮ್ಮ ದೇಹಕ್ಕೆ ಉತ್ತಮ ಪೋಷಣೆ ಮತ್ತು ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ಚಮತ್ಕಾರಿಕ ಪದ್ಧತಿಯಲ್ಲಿ ತೂಕ ಇಳಿಕೆ ಮಾಡುತ್ತೆ ಈ ಪೇಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.