Hanuman Jayanti 2022: ಶನಿ-ರಾಹು-ಕೇತುಗಳ ಕಾಟದಿಂದ ಮುಕ್ತಿ ಪಡೆಯಲು ಈ ಉಪಾಯಗಳನ್ನು ಮಾಡಿ
Hanuman Jayanti Importance - ಹನುಮ ಜಯಂತಿಯ ದಿನವು ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಲು ಬಹಳ ವಿಶೇಷವಾದ ಸಂದರ್ಭವಾಗಿದೆ. ಈ ದಿನದಂದು ತೆಗೆದುಕೊಳ್ಳುವ ಕೆಲವು ಕ್ರಮಗಳು ತುಂಬಾ ಶಕ್ತಿಯುತವಾಗಿದ್ದು, ಅವು ಶನಿ, ರಾಹು-ಕೇತುಗಳ ಕೆಟ್ಟ ಪರಿಣಾಮಗಳಿಂದಲೂ ಪರಿಹಾರವನ್ನು ನೀಡುತ್ತವೆ.
ನವದೆಹಲಿ: Hanuman Jayanti - 2022 ಹಿಂದೂ ಪಂಚಾಂಗದ ಮೊದಲ ತಿಂಗಳು ಅಂದರೆ ಚೈತ್ರ ಮಾಸ ಬಹಳ ವಿಶೇಷವಾಗಿದೆ. ಈ ತಿಂಗಳಿನಿಂದ ಹಿಂದೂ ಹೊಸ ವರ್ಷ ಪ್ರಾರಂಭವಾಗುತ್ತದೆ, ಚೈತ್ರ ನವರಾತ್ರಿ ಇದೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ, ರಾಮನವಮಿಯಂದು, ಶ್ರೀ ರಾಮನ ಜನ್ಮದಿನವನ್ನು ಆಚರಿಸಲಾಗುತ್ತದೆ ಮತ್ತು ಶ್ರೀರಾಮನ ಭಕ್ತ ಹನುಮಂತನ ಜನ್ಮದಿನವೂ ಇದೇ ತಿಂಗಳಲ್ಲಿ ಬರುತ್ತದೆ. ದೋಷನಿವಾರಕನಾದ ಹನುಮಂತನು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆ. ಈ ವರ್ಷ, ಹನುಮ ಜಯಂತಿಯು 16ನೇ ಏಪ್ರಿಲ್ 2022 (Date Of Hanuman Jayanti 2022), ಅಂದರೆ ಶನಿವಾರ ಆಚರಿಸಲಾಗುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿ ಶನಿ, ರಾಹು-ಕೇತುಗಳ ರಾಶಿ ಪರಿವರ್ತನೆ (Importance Of Hanuman Jayanti)
ಜ್ಯೋತಿಷ್ಯದ (Astrology) ದೃಷ್ಟಿಕೋನದಿಂದ, ಏಪ್ರಿಲ್ ತಿಂಗಳು ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಈ ತಿಂಗಳು, ಶನಿ, ರಾಹು-ಕೇತುಗಳಂತಹ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ, ಅವುಗಳ ದುಷ್ಟ ದೃಷ್ಟಿ ಜೀವನವನ್ನು ನಾಶಮಾಡಲು ಸಾಕು ಎನ್ನಲಾಗುತ್ತದೆ. ಛಾಯಾ ಗ್ರಹಗಳಾದ ರಾಹು-ಕೇತುಗಳು 12 ಏಪ್ರಿಲ್ 2022 ರಂದು ರಾಶಿಯನ್ನು ಬದಲಾಯಿಸುತ್ತಿದ್ದರೆ, ಶನಿಯು ಏಪ್ರಿಲ್ 29 ರಂದು ತನ್ನ ಸ್ಥಾನ ಪಲ್ಲಟ ನಡೆಸಲಿದೆ. ಜ್ಯೋತಿಷ್ಯದ ಪ್ರಕಾರ, ಈ ಕ್ರೂರ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಅನೇಕ ರಾಶಿಗಳ ಜಾತಕದವರ (Zodiac Signs) ಮೇಲೆ ಪ್ರಭಾವ ಬೀರಲಿದೆ. ಹೀಗಿರುವಾಗ, ಈ ಗ್ರಹಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು ಮುಂಚಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ಹನುಮಂತನು ಪ್ರತಿ ಬಿಕ್ಕಟ್ಟನ್ನು ನಿವಾರಿಸುತ್ತಾನೆ
ಪವನಸುತ ಹನುಮಂತ ಪ್ರತಿ ಬಿಕ್ಕಟ್ಟನ್ನು ನಿವಾರಿಸುತ್ತಾನೆ, ಆದ್ದರಿಂದ ಆತನನ್ನು ಸಂಕಟ ಮೊಚಕ ಎಂದೂ ಕೂಡ ಕರೆಯಲಾಗುತ್ತದೆ. ಏಪ್ರಿಲ್ 16 ರ ಹನುಮ (Hanuman Jayanti Shubh Muhurat) ಜಯಂತಿಯ ದಿನದಂದು ಕೆಲ ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಶನಿ, ರಾಹು-ಕೇತುಗಳ ದುಷ್ಪರಿಣಾಮಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ಕಾಣಬಹುದು.
>> ಹನುಮಾನ್ ಜಯಂತಿಯಂದು ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಿ. ಶ್ರೀಆಂಜನೇಯನ ದೇವಸ್ಥಾನಕ್ಕೆ ಹೋಗಿ ಸಂಕಟ ಮೊಚಕನ ವಿಗ್ರಹದ ಮುಂದೆ ಕುಳಿತು ಪಠಿಸುವುದು ಇನ್ನೂ ಉತ್ತಮ. ಈ ರೀತಿ ಮಾಡುವುದರಿಂದ ಶನಿಯ ಎರಡೂವರೆ ವರ್ಷಗಳ ಕಾಟ ಅಥವಾ ಸಾದೆಸಾತಿಯಿಂದ ಬಳಲುತ್ತಿರುವವರು ಸಾಕಷ್ಟು ಪರಿಹಾರವನ್ನು ಪಡೆಯಬಹುದು.
>> ಹನುಮನಿಗೆ ಅವರೆಕಾಳು ಲಡ್ಡು ತುಂಬಾ ಇಷ್ಟಪಡುತ್ತಾರೆ. ಹನುಮ ಜಯಂತಿಯ ದಿನದಂದು ಆಂಜನೇಯನಿಗೆ ಬೇಳೆಯಲ್ಲಿ ತಯಾರಿಸಿದ ಲಡ್ಡುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿ ಹರಿದುಬರಲಿದೆ. ಸಂಕಟ ಮೊಚಕನಿಗೆ ಸಿಹಿ ಪಾನ್ ಅನ್ನು ಅರ್ಪಿಸಿ. ಇದರಲ್ಲಿ ಕತ್ಥಾ, ಗುಲ್ಕಂಡ್, ಕೊಬ್ಬರಿ, ಸೌಂಫ ಮತ್ತು ಗುಲಾಬಕಟಾರಿ ಬಳಸಿ ಆದರೆ ಸುಣ್ಣ, ಅಡಿಕೆ, ಕೃತಕ ಪರಿಮಳಯುಕ್ತ ಪದಾರ್ಥಗಳನ್ನೂ ಅಪ್ಪಿತಪ್ಪಿಯೂ ಕೂಡ ಸೇರಿಸಬೇಡಿ.
>> ಹನುಮನಿಗೆ ಸಿಂಧೂರ ಚೋಲಾ ಅರ್ಪಿಸುವುದು ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ, ಆದ್ದರಿಂದ, ಹನುಮ ಜಯಂತಿಯ ದಿನದಂದು, ಬಜರಂಗಿಗೆ ಖಂಡಿತವಾಗಿಯೂ ಚೋಲಾ ಅರ್ಪಿಸಿ. ಮಲ್ಲಿಗೆ ಹೂವುಗಳ ಮಾಲೆ ಮತ್ತು ಕೆಂಪು ಲಂಗೋಟಿಯನ್ನು ಕೂಡ ಅರ್ಪಿಸಿ. ಈ ಪರಿಹಾರವನ್ನು ಹನುಮ ಜಯಂತಿಯಿಂದ ಆರಂಭಿಸಿ ಮುಂದಿನ 11 ಹುಣ್ಣಿಮೆಗಳವರೆಗೆ ಮಾಡಿದರೆ ದೊಡ್ಡ ಸಂಕಷ್ಟದಿಂದ ನೀವು ಪಾರಾಗಬಹುದು.
ಇದನ್ನೂ ಓದಿ-Weekly Horoscope: ಬಡ್ತಿ ಸಿಗಲಿದೆಯಾ ಅಥವಾ ಕೆಲಸ ಬಿಗಡಾಯಿಸಲಿದೆಯಾ? ಇಲ್ಲಿದೆ ವಾರದ ರಾಶಿಫಲ
>> ಆಂಜನೇಯನ ದೇವಸ್ಥಾನದಲ್ಲಿ ತ್ರಿಕೋನಾಕಾರದ ಕೆಂಪು ಧ್ವಜವನ್ನು ಹಾಕಿ, ಹೀಗೆ ಮಾಡುವುದರಿಂದ ನಿಮಗೆ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಮತ್ತು ನಿಮಗೆ ಸಾಕಷ್ಟು ಪ್ರಗತಿ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ-Palmistry: ನಿಮ್ಮ ಅಂಗೈಯಲ್ಲೂ ಈ 3 ಸಂಗತಿಗಳಿವೆಯಾ? ಹಾಗಾದ್ರೆ, ನಿಮ್ಮ ಸಿರಿವಂತಿಕೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.