Hanuman Jayanti 2022: ಧಾರ್ಮಿಕ ಗ್ರಂಥಗಳ ಪ್ರಕಾರ, ಏಳು ಚಿರಂಜೀವಿಗಳಲ್ಲಿ ಶ್ರೀ ಆಂಜನೇಯ ಕೂಡ ಒಬ್ಬ. ಚಿರಂಜೀವಿ ವರದಾನ ಪ್ರಾಪ್ತಿ ಮಾಡಿದ ಇತರ ಆರು ಜನರಲ್ಲಿ ಅಶ್ವತ್ಥಾಮ, ಮಹರ್ಷಿ ವೇದವ್ಯಾಸ, ವಿಭೀಷಣ, ಬಲಿ, ಕೃಪಾಚಾರ್ಯ ಮತ್ತು ಪರಶುರಾಮ ದೇವರು ಶಾಮೀಲಾಗಿದ್ದಾರೆ. ಕಲಿಯುಗದಲ್ಲಿ ಹನುಮಂತನ ಆರಾಧನೆ ಅತ್ಯಂತ ಶ್ರೇಯಸ್ಕರ ಎಂದು ಹೇಳಲಾಗಿದೆ. ಕೇವಲ ಹನುಮಂತನ ನಾಮಸ್ಮರಣೆಯಿಂದಲೇ (Hanuman Jayanti Shubh Muhurat) ಹಲವು ರೀತಿಯ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಬಾರಿಯ ಹನುಮ ಜಯಂತಿಗಾಗಿ ದಿನಗಣನೆ ಆರಂಭವಾಗಿದೆ. ಚೈತ್ರ ಮಾಸದ ಹುಣ್ಣಿಮೆಯಂದು ಅಂಜನಿಯ ಮಗ ಆಂಜನೇಯ ಜನಿಸಿದನು ಎಂಬುದು ಧಾರ್ಮಿಕ ನಂಬಿಕೆ. ಈ ವರ್ಷ ಈ ದಿನಾಂಕವು ಏಪ್ರಿಲ್ 16 ರಂದು ಬೀಳಲಿದೆ (Hanuman Jayanti 2022 Date). 2022 ರ ಹನುಮ ಜಯಂತಿಯ ದಿನದಂದು ಹನುಮಂಜಿ ಪೂಜೆಯ ನಿಯಮಗಳ ಕುರಿತು ತಿಳಿದುಕೊಳ್ಳೋಣ.

COMMERCIAL BREAK
SCROLL TO CONTINUE READING

ಹನುಮಂಜಿ ಪೂಜೆಯ ನಿಯಮಗಳು (Hanuman Jayanti Puja Vidhi)
>> ಧಾರ್ಮಿಕ ಗ್ರಂಥಗಳ ಪ್ರಕಾರ, ಹನುಮನ ಪೂಜೆಯಲ್ಲಿ ಬೂಂದಿ ಲಡ್ಡುಗಳನ್ನು ಬಳಸಬೇಕು. ಹನುಮಂತನಿಗೆ ಲಡ್ಡು ತುಂಬಾ ಪ್ರಿಯ ಎಂದು ಹೇಳಲಾಗುತದೆ. ಇನ್ನೊಂದೆಡೆ, ಹನುಮನ ಪೂಜೆಯಲ್ಲಿ ಚರಣಾಮೃತವನ್ನು ಬಳಸಲಾಗುವುದಿಲ್ಲ.
>> ಧರ್ಮಗ್ರಂಥಗಳಲ್ಲಿ ಆಂಜನೇಯ ಸಂಪೂರ್ಣ ಬ್ರಹ್ಮಚಾರಿ. ಹೀಗಿರುವಾಗ ಆತನ ಪೂಜೆಯ ಸಮಯದಲ್ಲಿ ಸಂಪೂರ್ಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಇದರೊಂದಿಗೆ ಅವರ ಆರಾಧನೆಗಳಲ್ಲಿಯೂ ಕೂಡ ನಿಮ್ಮ ಆಲೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು.
>> ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರ ಆಂಜನೇಯನನ್ನು ಪೂಜಿಸಲು ಉತ್ತಮ ದಿನಗಳಾಗಿವೆ. ಇದಲ್ಲದೇ ಈ ದಿನ ಹನುಮನನ್ನು ಪೂಜಿಸುವುದರಿಂದ ಶನಿಯ ಚನಿ ಪ್ರಕೋಪ ಕೂಡ ದೂರಾಗುತ್ತದೆ.
>> ಹನುಮ ಜಯಂತಿಯ ದಿನದಂದು ಆಂಜನೇಯನನ್ನು ಪೂಜಿಸುವಾಗ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಬಾರದು. ಇದಲ್ಲದೆ, ಈ ದಿನ ಮಾಂಸ ಮತ್ತು ಬೆಳ್ಳುಳ್ಳಿ-ಈರುಳ್ಳಿ ಸೇವನೆಯನ್ನು ಸಹ ತಪ್ಪಿಸಬೇಕು.


ಇದನ್ನೂ ಓದಿ-Samudrik Shastra: ನಿಮ್ಮ ಶರೀರ ಸಂರಚನೆ ಈ ರೀತಿ ಇದ್ದರೆ, ಅಪಾರ ಧನವೃಷ್ಟಿಯ ಜೊತೆಗೆ ಸಫಲತೆ ನಿಮ್ಮದಾಗಲಿದೆ

ಶನಿ ದೋಷವನ್ನು ತೊಡೆದುಹಾಕಲು ಪರಿಹಾರಗಳು
ಈ ಬಾರಿ ಹನುಮ ಜಯಂತಿ ಶನಿವಾರ ಬರುತ್ತಿದೆ. ಹೀಗಿರುವಾಗ ಶನಿ ದೋಷ ನಿವಾರಣೆಗೆ ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಶನಿಯ ಪ್ರಕೊಪದಿಂದ ಮುಕ್ತಿ ಹೊಂದಲು ಈ ದಿನ ಹನುಮನ ಆರಾಧನೆ ಮಾಡಿ. ಇದಲ್ಲದೇ ಈ ದಿನ ಶನಿದೇವನ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಅಲ್ಲದೆ, ನಿರ್ಗತಿಕರಲ್ಲಿ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಶನಿದೇವನ ಸ್ಥಿತಿ ಲಾಭ ನೀಡಲಿದೆ ಎಂದು ನಂಬಲಾಗಿದೆ.


ಇದನ್ನೂ ಓದಿ-Hanuman Jayanti 2022: ಶ್ರೀಆಂಜನೇಯನ ಭಕ್ತಿಯಲ್ಲಿ ಲೀನನಾದ ಮುಸ್ಲಿಂ ವ್ಯಕ್ತಿಯ ಶ್ರದ್ಧೆಗೆ ಮಾರುಹೋದ ಜನ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-