How to Stay Happy: ಜೀವನದಲ್ಲಿ ನೀವು ಏನೇ ಮಾಡಿದರೂ, ಪ್ರತಿಯೊಂದು ಕೆಲಸದ ಉದ್ದೇಶವೂ ಒಂದೇ ಆಗಿರುತ್ತದೆ ಮತ್ತು ಅದು ಸಂತೋಷವಾಗಿರುವುದು. ಹಣ ಸಂಪಾದಿಸಲು ಅಥವಾ ವೃತ್ತಿಯನ್ನು ಮಾಡಲು ಅಥವಾ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ತಲುಪಲು, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲವನ್ನೂ ಮಾಡುತ್ತಾನೆ. ಏಕೆಂದರೆ ಸಂತೋಷದಿಂದ ಇರುವವರು ಆರೋಗ್ಯದಿಂದ ಕೂಡ ಇರುತ್ತಾರೆ  ಮತ್ತು ಸಂತೋಷ ಹಾಗೂ ಆರೋಗ್ಯವಂತರಾಗಿರುವಷ್ಟು ಅದೃಷ್ಟವಂತರು ಯಾರೂ ಇರಲಾರರು. ಹೀಗಾಗಿ ನಾವು ಸಂತೋಷವಾಗಿರಲು ಸೇವಿಸಬೇಕಾದ ಆಹಾರಗಳು ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲ ವಿಷಯಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಇವು ನಿಮಗೆ ಯಾವಾಗಲೂ ಸಂತೋಷವಾಗಿರಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತವೆ.


COMMERCIAL BREAK
SCROLL TO CONTINUE READING

ಸಂತೋಷವನ್ನು ಹೇಗೆ ಅನುಭವಿಸಬೇಕು?
ಯಾವುದೇ ವ್ಯಕ್ತಿ ಅನಾವಶ್ಯಕವಾಗಿ ಸುಖದಿಂದಿರಲು ಅಥವಾ ದುಃಖದಿಂದ ಇರಲು ಸಾಧ್ಯವಿಲ್ಲ. ಇದಕ್ಕಾಗಿ ಭಾವನೆಗಳ ಜೊತೆಗೆ ಹಾರ್ಮೋನ್ ಗಳು ಕೂಡ ಕಾರಣವಾಗಿರುತ್ತವೆ. ನಮಗೆ ಖುಷಿಯ ಅನುಭವ ನೀಡುವ ಹಾರ್ಮೋನ್ ಹೆಸರು ಡೋಪಮೈನ್. ನಮ್ಮ ಶರೀರದಲ್ಲಿ ಈ ಹಾರ್ಮೋನು ಉತ್ತಮ ಮಟ್ಟದಲ್ಲಿದ್ದರೆ, ವ್ಯಕ್ತಿ ಯಾವಾಗಲು ಖುಷಿಯ ಅನುಭವ ಪಡೆಯುತ್ತಾನೆ ಮತ್ತು ಆತನ ಮುಖದ ಮೇಲೆ ನಗು ಇರುತ್ತದೆ. ಈಗ ನೀವು ನಿಮ್ಮ ಶರೀರದಲ್ಲಿ ಈ ಹಾರ್ಮೋನ್ ಮಟ್ಟವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


ಡೋಪಮೈನ್ ಸ್ರವಿಸುವಿಕೆಯನ್ನು ಹೇಗೆ ಹೆಚ್ಚಿಸುವುದು?
ಡೋಪಮೈನ್ ಹಾರ್ಮೋನ್ ಸ್ರವಿಸುವಿಕೆಯನ್ನು ಹೆಚ್ಚಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಬೀನ್ಸ್ ಮತ್ತು ಸೋಯಾಬೀನ್ಗಳ ಪ್ರಮಾಣವನ್ನು ಹೆಚ್ಚಿಸಬೇಕು. ಏಕೆಂದರೆ ಉತ್ತಮ ಪ್ರಮಾಣದ ಟೈರೋಸಿನ್ ಅಮೈನೋ ಆಮ್ಲವನ್ನು ಒಳಗೊಂಡಿರುವ ಪ್ರೋಟೀನ್ ಸೇವನೆಯೊಂದಿಗೆ ಡೋಪಮೈನ್ ಸೃವಿಕೆ  ಹೆಚ್ಚಾಗುತ್ತದೆ. ಹಸಿರು ಬೀನ್ಸ್, ಸೋಯಾಬೀನ್, ಡೈರಿ ಉತ್ಪನ್ನಗಳು, ಬಾಳೆಹಣ್ಣುಗಳು, ಮೊಟ್ಟೆಗಳು, ಪ್ರೋಬಯಾಟಿಕ್ಗಳು ​​ಮತ್ತು ಚಿಕನ್ ಇಂತಹ ಆಹಾರ ಪ್ರದಾರ್ಥಗಳು ಪ್ರೋಟೀನ್ ನಿಂದ  ಸಮೃದ್ಧವಾಗಿರುವ ಆಹಾರಗಳಾಗಿವೆ. ಹೀಗಾಗಿ, ಈ ಆಹಾರಗಳನ್ನು ಸೇವಿಸುವುದರಿಂದ ಸಂತೋಷವಾಗಿರಲು ಅವು ಸಹಾಯ ಮಾಡಲಿವೆ. ಇವುಗಳನ್ನು ಹೊರತುಪಡಿಸಿ ದಿನನಿತ್ಯದ ಆಹಾರದಲ್ಲಿ ಈ ಕೆಳಗಿನ ಪದಾರ್ಥಗಳನ್ನು ಸೇವಿಸುವುದರಿಂದಲೂ ಕೂಡ ಲಾಭ ಸಿಗುತ್ತದೆ. 


>> ಹಸಿರು ಚಹಾ
>> ಆರ್ಗನ್ ಸಾರ
>> ಕರ್ಕ್ಯುಮಿನ್ (ಅರಿಶಿನ)
>> ಮೆಗ್ನೀಸಿಯಮ್
>> ವಿಟಮಿನ್ ಡಿ

ಸಂತೋಷವಾಗಿರಲು ಏನನ್ನು ಸೇವಿಸಬಾರದು?
ಆಹಾರದಲ್ಲಿಯೇ ಪ್ರೋಟೀನ್ ಸಮೃದ್ಧವಾಗಿರುವ ಕೆಲವು ಪದಾರ್ಥಗಳಿವೆ. ಆದರೆ ಸಂತೋಷವಾಗಿರಲು ಅವು ನಿಮಗೆ ಸಹಾಯ ಮಾಡುವುದಿಲ್ಲ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಉದಾಹರಣೆಗೆ, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳು. ಇವುಗಳಲ್ಲಿ ಪ್ರಾಣಿಗಳ ಕೊಬ್ಬು, ಬೆಣ್ಣೆ, ಪಾಮ್ ಎಣ್ಣೆ ಮತ್ತು ತೆಂಗಿನ ಎಣ್ಣೆ ಶಾಮೀಲಾಗಿವೆ. ಅವುಗಳ ಸೇವನೆ ಆದಷ್ಟು ಕಡಿಮೆ ಮಾಡಿ.


ಇದನ್ನೂ ಓದಿ-Zodiac Signs : ಅತೀ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಪಡೆಯುತ್ತಾರೆ ಈ ರಾಶಿಯ ಯುವಕರು


ನೀವು ಸಂತೋಷವಾಗಿರಲು ಸಹಾಯ ಮಾಡುವ ಚಟುವಟಿಕೆಗಳು ಯಾವುವು?
>> ಕನಿಷ್ಠ 6 ರಿಂದ 8 ಗಂಟೆಗಳವರೆಗೆ ಉತ್ತಮ ಗುಣಮಟ್ಟದ ನಿದ್ರೆ ಪಡೆಯಿರಿ  .
>> ಧ್ಯಾನ ಮಾಡಿ. ಇದು ಭಾವನೆಗಳನ್ನು ನಿಯಂತ್ರಿಸಲು ಮತ್ತು ಸಂತೋಷವಾಗಿರಲು ಡೋಪಮೈನ್ ಸ್ರವಿಸುವಿಕೆಯನ್ನು ಉತ್ತೆಜಿಸಲು ಸಹಾಯ ಮಾಡುತ್ತದೆ.
>> ಸಂಗೀತವನ್ನು ಆಲಿಸಿ. ನಿಮ್ಮ ಆಯ್ಕೆಯ ಸಂಗೀತವು ಯಾವಾಗಲೂ ನಿಮಗೆ ಸಂತೋಷ ಮತ್ತು ವಿಶ್ರಾಂತಿ ನೀಡುವದಾಗಿರಬೇಕು. ಇದು ಡೋಪಮೈನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.
>> ಈ ಎಲ್ಲಾ ಚಟುವಟಿಕೆಗಳೊಂದಿಗೆ ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಕಾಲ ಕಳೆಯಬೇಕು ಎನ್ನುತ್ತಾರೆ ಮಹೋವೈದ್ಯರು. ಅದರಲ್ಲಿಯೂ ವಿಶೇಷವಾಗಿ ಬೆಳಗಿನ ಹೊತ್ತಿನಲ್ಲಿ. ಏಕೆಂದರೆ ಸೂರ್ಯೋದಯದ ಬೆಳಕು ಮತ್ತು ಬೆಳಗಿನ ತಾಜಾ ಗಾಳಿ ಡೋಪಮೈನ್ ಸ್ರವಿಸುವಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.


ಇದನ್ನೂ ಓದಿ-Highway Hypnosis : ಡ್ರೈವಿಂಗ್‌ ಮಾಡುವ ಎಲ್ಲರೂ ಇದನ್ನು ತಿಳಿಯಲೇ ಬೇಕು, ಅಪಾಯಕ್ಕೆ ಇದೂ ಕಾರಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.