Maha Shivratri Wishes: ಮಹಾಶಿವರಾತ್ರಿ ಹಬ್ಬಕ್ಕೆ ನಿಮ್ಮ ಸ್ನೇಹಿತರು & ಕುಟುಂಬದವರಿಗೆ ಈ ಸಂದೇಶಗಳ ಮೂಲಕ ಶುಭ ಕೋರಿ
Happy Maha Shivratri 2023: ಈ ಮಹಾಶಿವರಾತ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಭಗವಾನ್ ಶಿವನು ಪ್ರತಿಯೊಬ್ಬ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತಾಗಲಿ. ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು..
ನವದೆಹಲಿ: ಮಹಾಶಿವರಾತ್ರಿ ಹಬ್ಬವು ಭಗವಾನ್ ಶಿವನಿಗೆ ಅರ್ಪಿತವಾಗಿದೆ. ಈ ದಿನ ಶಿವನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಶಿವನನ್ನು ವಿಧಿ-ವಿಧಾನಗಳ ಮೂಲಕ ಪೂಜಿಸುವುದರಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಈ ವರ್ಷ ಮಹಾಶಿವರಾತ್ರಿ ಹಬ್ಬವನ್ನು ಫೆ.18ರ ಶನಿವಾರ ಆಚರಿಸಲಾಗುವುದು. ಮಹಾಶಿವರಾತ್ರಿ ಹಬ್ಬದಂದು ನೀವು ನಿಮ್ಮ ಸ್ನೇಹಿತರು ಬಂಧು-ಬಾಂಧವರೊಂದಿಗೆ ಇಲ್ಲಿರುವ ಶುಭಾಶಯಗಳು & ಸಂದೇಶಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಕೋರಿಬಹುದು.
ಇದನ್ನೂ ಓದಿ: Mahashivratri 2023: ಮಹಾಶಿವರಾತ್ರಿಯಂದು ಈ ಹಣ್ಣುಗಳನ್ನು ಅರ್ಪಿಸಬೇಡಿ, ಶಿವನು ಕೋಪಗೊಳ್ಳುತ್ತಾನೆ.!
ಮಹಾಶಿವರಾತ್ರಿಯ ಶುಭಾಶಯಗಳು:
ಶಿವ.. ಶಿವ ಎಂದರೆ ಭಯವಿಲ್ಲ. ಶಿವ ನಾಮಕೆ ಸಾಟಿ ಬೇರಿಲ್ಲ... ನಿಮಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಾನ್ ಶಿವನು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ನೀಡಲಿ. ನಿಮಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು!
ಭಗವಾನ್ ಶಿವನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವಾದ ನೀಡಲಿ. ಮಹಾ ಶಿವರಾತ್ರಿಯ ಶುಭಾಶಯಗಳು!
ಭಗವಾನ್ ಶಿವನ ದೈವಿಕ ಆಶೀರ್ವಾದ ಸದಾಕಾಲ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ... ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಮಹಾಶಿವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ಶಿವನ ದಿವ್ಯ ಆಶೀರ್ವಾದ ನಿಮ್ಮೊಂದಿಗಿರಲಿ. ನಿಮಗೂ & ನಿಮ್ಮ ಕುಟುಂಬದವರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ವಾತಾವರಣವಿರಲಿ. ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಮಹಾಶಿವರಾತ್ರಿಯ ಶುಭ ಮಹೋತ್ಸವದ ಶುಭ ಸಂದರ್ಭದಲ್ಲಿ ಪರಶಿವನ ಆಶೀರ್ವಾದ ಸದಾ ನಿಮೊಂದಿಗಿರಲಿ. ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಾನ್ ಶಿವನು ನಿಮಗೆ ಪ್ರೀತಿ ಮತ್ತು ಶಕ್ತಿಯನ್ನು ನೀಡಲಿ. ಸುಖ-ಸಂತೋಷ ಮತ್ತು ಶಾಂತಿಯನ್ನು ನೀಡಲಿ. ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದವೂ ಸಿಗಲಿ. ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶಿವ ಮತ್ತು ಪಾರ್ವತಿ ದೇವಿಯೂ ಎಲ್ಲರನ್ನೂ ಹರಸಲಿ ಈ ಹಬ್ಬ ಪ್ರತಿಯೊಬ್ಬರಿಗೂ ಖುಷಿ ತರಲಿ. ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ನಿಮ್ಮೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು..
ಭಗವಾನ್ ಶಿವನ ಅನುಗ್ರಹ ನಾಡಿನ ಸಮಸ್ತ ಜನತೆಯ ಮೇಲಿರಲಿ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಇದನ್ನೂ ಓದಿ: Mahashivratri 2023 Wishes : ಮಹಾಶಿವರಾತ್ರಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸುವ ಮೂಲಕ ಶುಭಕೋರಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.