Happy Mother's Day: ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಅತ್ಯಂತ ವಿಶೇಷ, ವಿಭಿನ್ನ ಮತ್ತು ಅತ್ಯಂತ ಸುಂದರ ಎಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ಸಂಬಂಧಗಳಿಗಿಂತ ದೊಡ್ಡದಾಗಿದೆ. ತಾಯಂದಿರ ದಿನವು ತಾಯಿಯ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ಆಚರಿಸುವ ದಿನವಾಗಿದೆ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ತಾಯಂದಿರ ದಿನವನ್ನು ಮೇ 12 ರಂದು ಭಾನುವಾರ ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Mother's Day: ಮೊದಲ ಬಾರಿ ತಾಯಿಯಾಗುತ್ತಿದ್ದರೆ ತಪ್ಪದೇ ಈ ಆರೋಗ್ಯ ಸಲಹೆ ಪಾಲಿಸಿರಿ


50 ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವುದು 1900 ರ ದಶಕದ ಆರಂಭದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಅನ್ನಾ ಜಾರ್ವಿಸ್, ಅಮೇರಿಕನ್ ಮಹಿಳೆ, 1905 ರಲ್ಲಿ ತನ್ನ ತಾಯಿಯ ಮರಣದ ನಂತರ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು, ನಂತರ ಈ ದಿನವನ್ನು 1908 ರಲ್ಲಿ ವೆಸ್ಟ್ ವರ್ಜೀನಿಯಾದಲ್ಲಿ ಔಪಚಾರಿಕವಾಗಿ ಆಚರಿಸಲು ಪ್ರಾರಂಭಿಸಿದರು.


ತಾಯಂದಿರ ದಿನದ ಶುಭಾಶಯಗಳು : 


ಅಮ್ಮನ ಮಡಿಲಲ್ಲಿ ಏನು ಮಾಯೆ ಇದೆಯೋ ಗೊತ್ತಿಲ್ಲ.
ಅದರಲ್ಲಿ ಅಡಗಿಕೊಂಡರೆ ದುಃಖಗಳೆಲ್ಲ ಮಾಯವಾಗುತ್ತವೆ.
ನನ್ನ ಸಂತಸದ ಕಡಲಿಗೆ ತಾಯಂದಿರ ದಿನದ ಶುಭಾಶಯಗಳು


ಸ್ವರ್ಗವು ತಾಯಿಯ ಪಾದದಲ್ಲಿದೆ
ತಾಯಿಯ ಮಡಿಲಲ್ಲಿ ಶಾಂತಿ ಇದೆ
ಅಮ್ಮನೇ ಜೀವನದ ಸರ್ವಸ್ವ 
ತಾಯಂದಿರ ದಿನದ ಶುಭಾಶಯಗಳು


ತಾಯಿಯೊಂದಿಗಿನ ಸಂಬಂಧವು ತುಂಬಾ ವಿಶೇಷವಾಗಿದೆ
ದೂರವಿದ್ದರೂ ಹತ್ತಿರವೇ ಇರುತ್ತಾಳೆ
ನಮ್ಮೆಲ್ಲ ದುಃಖಗಳು ಅವಳಿಗೆ ಗೊತ್ತು
ತಾಯಂದಿರ ದಿನದ ಶುಭಾಶಯಗಳು


ನಾನು ದೇವರನ್ನು ನೋಡಿಲ್ಲ,
ಆದರೆ ನನ್ನಮ್ಮ ನಿನ್ನನ್ನು ನೋಡಿದ್ದೇನೆ
ನನ್ನ ಪಾಲಿಗೆ ನೀನೇ ದೇವರು
ತಾಯಂದಿರ ದಿನದ ಶುಭಾಶಯಗಳು


ಇದನ್ನೂ ಓದಿ: ಇಂದಿನಿಂದ 3 ದಿನ ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ.. ಹಲವೆಡೆ ಯೆಲ್ಲೋ ಅಲರ್ಟ್.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.