Haridwar Mahakumbh 2021 : ಮಹಾಕುಂಭಕ್ಕೆ ತೆರಳುವ ಮುನ್ನ ಈ ಬಗ್ಗೆ ತಿಳಿದಿರಲಿ
ಕರೋನಾ ಸೋಂಕಿನ ದೃಷ್ಟಿಯಿಂದ ಹರಿದ್ವಾರ ಮಹಾಕುಂಭ 2021 (Haridwar Mahakumbh 2021) ಅನ್ನು ಮೂರೂವರೆ ತಿಂಗಳಿಂದ ಒಂದೂವರೆ ತಿಂಗಳುಗಳಿಗೆ ಇಳಿಸಲಾಗಿದೆ. ಈಗ ಜನಸಂದಣಿಯನ್ನು ಕಡಿಮೆ ಮಾಡಲು ಆಡಳಿತವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನವದೆಹಲಿ : ಉತ್ತರಾಖಂಡದಲ್ಲಿ ನಡೆಯಲಿರುವ ಹರಿದ್ವಾರ ಮಹಾಕುಂಭ 2021 ಒಂದೂವರೆ ತಿಂಗಳ ನಂತರ ಪ್ರಾರಂಭವಾಗಲಿದೆ. ಈ ಬಾರಿ ಈ ಮೇಳ (Kumbh Mela) ಸಾಂಪ್ರದಾಯಿಕ 12 ವರ್ಷಗಳ ಬದಲು 11 ವರ್ಷಗಳ ನಂತರ ನಡೆಯುತ್ತಿದೆ. ಈ ಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಹರಿದ್ವಾರಕ್ಕೆ ಹೋಗಬೇಕೆಂದು ನೀವು ಯೋಚಿಸುತ್ತಿದ್ದರೆ ಹರಿದ್ವಾರ ಮಹಾಕುಂಭ ಮೇಳ ಆಡಳಿತದ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
ಇದಕ್ಕಾಗಿ ಐಜಿ ಸಂಜಯ್ ಗ್ವಾನ್ಯಾಲ್ (Sanjay guanyal) ದೊಡ್ಡ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಕಾರ ಹರಿದ್ವಾರ ಮಹಾಕುಂಭ (Mahakumbh) 2021ರಲ್ಲಿ ಪಾಲ್ಗೊಳ್ಳುವವರಲ್ಲಿ ಯಾರಿಗಾದರೂ ಕರೋನಾ ಲಕ್ಷಣಗಳು ಕಂಡು ಬಂದರೆ ಅಂತಹವರಿಗೆ ಕುಂಭ ಮೇಳ ನಡೆಯುವ ಸ್ಥಳದಲ್ಲಿ ಪ್ರವೇಶ ಇರುವುದಿಲ್ಲ. ಅವರನ್ನು ವಾಪಸ್ ಕಳುಹಿಸಲಾಗುತ್ತದೆ ಅಥವಾ ಚಿಕಿತ್ಸೆಗಾಗಿ ಕೋವಿಡ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.
ಕರೋನಾ ನೆಗೆಟಿವ್ ಪ್ರಮಾಣಪತ್ರವನ್ನು ತರಬೇಕು (Bring corona negative certificate) :
ಉತ್ತರಾಖಂಡ ಪೊಲೀಸರ ಪ್ರಕಾರ, ಭಕ್ತನೊಬ್ಬ ಕುಂಭ ಮೇಳ ನಡೆಯುವ ಸ್ಥಳದಲ್ಲಿ ರಾತ್ರಿಯಿಡೀ ಇರಲು ಬಯಸಿದರೆ ಅಂತಹವರು ತಮ್ಮ ಕೋವಿಡ್ 19 (Covid 19) ನೆಗೆಟಿವ್ ಪ್ರಮಾಣಪತ್ರವನ್ನು ತೋರಿಸಬೇಕು. ನಂತರವೇ ಅವರಿಗೆ ಆ ಸ್ಥಳದಲ್ಲಿ ಉಳಿಯಲು ಅನುಮತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಕರೋನಾ ಸೋಂಕಿನ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ವೃದ್ಧರಿಗೆ ಮಹಾಕುಂಭ ಮೇಳಕ್ಕೆ (ಹರಿದ್ವಾರ ಮಹಾಕುಂಭ 2021) ಹಾಜರಾಗದಂತೆ ಮನವಿ ಮಾಡಿದೆ.
ಇದನ್ನೂ ಓದಿ - ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಜ್ಞಾನವಿಲ್ಲ: ಯೋಗಿ ಆದಿತ್ಯನಾಥ್
'ಒಂದು ಸ್ನಾನ, ಮೂರು ಬಾರಿ ಮುಳುಗುವ' ಸೂತ್ರ ('One bath, three dip' formula) :
ಪೊಲೀಸ್ ಆಡಳಿತದ ಯೋಜನೆಯ ಪ್ರಕಾರ, ಭಕ್ತರು ಹರಿದ್ವಾರ ಮಹಾಕುಂಭ 2021 ರಲ್ಲಿ 'ಒಂದು ಸ್ನಾನ, ಮೂರು ಬಾರಿ ಮುಳುಗುವ' ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಇದರಲ್ಲಿ ಮೂರುಬಾರಿ ಮುಳುಗಿದ ನಂತರ ನೀರಿನಿಂದ ಹೊರಗೆ ಬರುವಂತೆ ಪೊಲೀಸರು ಭಕ್ತರನ್ನು ಒತ್ತಾಯಿಸುತ್ತಿದ್ದಾರೆ. ಕುಂಭ ಮೇಳಕ್ಕೆ ಬರುವ ಜನರು ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮಹಾಕುಂಭದ ಸಮಯದಲ್ಲಿ ಎಲ್ಲಾ ಜನರು ಮಾಸ್ಕ್ (Mask)ಗಳನ್ನು ಧರಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ದಂಡ ಪಾವತಿಸಬೇಕಾಗಬಹುದು ಎಂದು ಆಡಳಿತ ಎಚ್ಚರಿಸಿದೆ.
ಮಹಾಕುಂಭ 2021ರಲ್ಲಿ 4 ಶಾಹಿ ಸ್ನಾನಗಳು(4 royal Shahi Snan in Mahakumbh 2021) :
ಸುಮಾರು ಮೂರೂವರೆ ತಿಂಗಳುಗಳ ಕಾಲ ನಡೆಯುವ ಮಹಾಕುಂಭವು ಈ ಬಾರಿ ಕರೋನಾ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಕೇವಲ ಒಂದೂವರೆ ತಿಂಗಳು ಮಾತ್ರ ನಡೆಯಲಿದೆ. ಈ ಬಾರಿ ಮಾರ್ಚ್ 11 ರಂದು ಶಿವರಾತ್ರಿಯಂದು ಮೊದಲ ಶಾಹಿ ಸ್ನಾನ ನಡೆಯಲಿದೆ. ಎರಡನೇ ಶಾಹಿ ಸ್ನಾನ ಏಪ್ರಿಲ್ 12 ರಂದು ಸೋಮವತಿ ಅಮಾವಾಸ್ಯೆಯ ದಿನ ನಡೆಯಲಿದೆ, ಮೂರನೇ ಶಾಹಿ ಸ್ನಾನ ಏಪ್ರಿಲ್ 14 ರಂದು ಮೇಷ ಸಂಕ್ರಾಂತಿಯಂದು ಮತ್ತು ಏಪ್ರಿಲ್ 27 ರಂದು ಬೈಸಖ್ ಪೂರ್ಣಿಮಾದಲ್ಲಿ ನಾಲ್ಕನೇ ಶಾಹಿ ಸ್ನಾನ ನಡೆಯಲಿದೆ.
ಇದನ್ನೂ ಓದಿ - 500 ಬಸ್'ಗಳ ಪೆರೇಡ್ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಉತ್ತರ ಪ್ರದೇಶ ಸರ್ಕಾರ
ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ :
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಇದು 12 ನೇ ವರ್ಷದಲ್ಲಿ ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ನಡೆಯುತ್ತದೆ. ಆದರೆ ಈ ವರ್ಷ ಹರಿದ್ವಾರ ಮಹಾಕುಂಭ (2021) ಕೇವಲ 11 ವರ್ಷಗಳಲ್ಲಿ ನಡೆಯುತ್ತಿದೆ. ಪ್ರತಿ ಹನ್ನೆರಡು ವರ್ಷಗಳ ನಂತರ ಗ್ರಹಗಳ ರಾಜನಾದ ಗುರು ಕುಂಭ ರಾಶಿಗೆ ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ. ಪ್ರವೇಶದ ವೇಗವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಬದಲಾಗುತ್ತದೆ. ಏಳು ಅಕ್ವೇರಿಯಸ್ (ಕುಂಭ ರಾಶಿ) ಹಾದುಹೋದ ಒಂದು ವರ್ಷದ ನಂತರ ಈ ವ್ಯತ್ಯಾಸವನ್ನು ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ ಹನ್ನೊಂದನೇ ವರ್ಷದಲ್ಲಿ ಎಂಟನೇ ಕುಂಭ ನಡೆಯುತ್ತಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.