ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಭವಿಷ್ಯದ ಘಟನೆಗಳನ್ನು ಕೈ ರೇಖೆಗಳು, ಆಕಾರಗಳು, ಗುರುತುಗಳ ಮೂಲಕ ಹೇಳಲಾಗುತ್ತದೆ. ಅಂಗೈನ ರೇಖೆಗಳು ಮತ್ತು ಗುರುತುಗಳು ಮಂಗಳಕರವಾಗಿದ್ದರೆ, ವ್ಯಕ್ತಿಯು ಅದೃಷ್ಟದ ಪ್ರಚಂಡ ಬೆಂಬಲ ಪಡೆಯುತ್ತಾನೆ. ಜೀವನದಲ್ಲಿ ಅಪಾರ ಸಂಪತ್ತು, ಕೀರ್ತಿ, ದೊಡ್ಡ ಸ್ಥಾನ ಮತ್ತು ಎಲ್ಲವನ್ನೂ ಪಡೆಯುತ್ತಾನೆ. ಆದರೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲ್ಪಡುವ ಈ ಗುರುತುಗಳು ಎಲ್ಲರ ಕೈಗಳಲ್ಲಿ ಕಂಡುಬರುವುದಿಲ್ಲ, ಲಕ್ಷ ಜನರ ಪೈಕಿ ಒಬ್ಬರ ಕೈಯಲ್ಲಿ ಮಾತ್ರ ಕಂಡುಬರುತ್ತವೆ. ಇಂದು ನಾವು ಅಂಗೈಯ ಕೆಲವು ಮಂಗಳಕರ ಚಿಹ್ನೆಗಳ ಬಗ್ಗೆ ಇಲ್ಲಿ ನಿಮಗೆ ಮಾಹಿತಿ ನೀಡುತ್ತೇವೆ. ಕೈಯಲ್ಲಿರುವ ಈ ರೇಖೆಗಳ ಉಪಸ್ಥಿತಿಯು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.


COMMERCIAL BREAK
SCROLL TO CONTINUE READING

ಈ ಅಂಗೈ ಗುರುತುಗಳು ಅದೃಷ್ಟ ಬೆಳಗಿಸುತ್ತವೆ


ಅಂಗೈಯಲ್ಲಿ ಧ್ವಜ ಗುರುತು: ಹೆಡ್ ಲೈನ್ ಅಥವಾ ಜೀವ ರೇಖೆಯಿಂದ ಹೊರಬರುವ ನೇರ ರೇಖೆಯು ಗುರುವಿನ ಪರ್ವತದ ಕಡೆಗೆ ಹೋದಾಗ ಮತ್ತು ಅದೇ ರೀತಿ ಅದರ ಇನ್ನೊಂದು ತುದಿಯಲ್ಲಿ ಒಂದು ಚೌಕವು ರೂಪುಗೊಂಡಾಗ ಅದನ್ನು ಧ್ವಜ ಗುರುತು ಎಂದು ಕರೆಯಲಾಗುತ್ತದೆ. ಅಂಗೈಯಲ್ಲಿ ಇಂತಹ ಆಕಾರದ ರಚನೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹವರಿಗೆ ಜೀವನದಲ್ಲಿ ಉನ್ನತ ಸ್ಥಾನ, ಪ್ರತಿಷ್ಠೆ, ಗೌರವ ಮತ್ತು ಅಪಾರ ಹಣ ಸಿಗುತ್ತದೆ. ಸಾಮಾನ್ಯವಾಗಿ ಅವರು ವೃದ್ಧಾಪ್ಯದಲ್ಲಿ ಅಥವಾ 50 ವರ್ಷ ವಯಸ್ಸಿನ ನಂತರ ಇದೆಲ್ಲವನ್ನೂ ಪಡೆಯುತ್ತಾರೆ.


ಇದನ್ನೂ ಓದಿ: Ram Navami 2023: ರಾಮ ನವವಮಿಯ ದಿನ ಸರ್ವಾರ್ಥಸಿದ್ಧಿ, ಅಮೃತ ಸಿದ್ಧಿ ಹಾಗೂ ಗುರುಪುಷ್ಯ ನಕ್ಷತ್ರಗಳ ಮಹಾಸಂಯೋಗ!


ಅಂಗೈಯಲ್ಲಿ ಮೀನಿನ ಗುರುತು: ಕೇತು ಅಥವಾ ಅಂಗೈಯಲ್ಲಿ ಚಂದ್ರನ ಮೇಲೆ ಮೀನಿನ ಗುರುತು ಇದ್ದರೆ ತುಂಬಾ ಶುಭಕರ. ಇಂತಹ ಜನರು ಆರ್ಥಿಕವಾಗಿ ಬಹಳ ಸಮೃದ್ಧರಾಗಿತ್ತಾರೆ, ಆದರೆ ತುಂಬಾ ಧಾರ್ಮಿಕವಾಗಿ ಭಾವನೆ ಹೊಂದಿರುತ್ತಾರೆ. ಇವರು ಪೂಜೆ, ಆಚರಣೆ, ದಾನ ಮಾಡುತ್ತಾರೆ. ಜನರು ಅವರಿಗೆ ಸಾಕಷ್ಟು ಗೌರವವನ್ನು ನೀಡುತ್ತಾರೆ.


ಸ್ವಸ್ತಿಕ ಗುರುತು: ಅಂಗೈಯಲ್ಲಿ ಗುರುವಿನ ಪರ್ವತ ಅಥವಾ ಬುಧದ ಪರ್ವತದ ಮೇಲೆ ಸ್ವಸ್ತಿಕ ಚಿಹ್ನೆ ಹೊಂದಿರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಜನರು ತುಂಬಾ ಶ್ರೀಮಂತರಾಗುತ್ತಾರೆ ಮತ್ತು ದಾನದಲ್ಲಿ ಖರ್ಚು ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಈ ಜನರು ಸಾಮಾಜಿಕ ಕಾರ್ಯಗಳಿಗೆ ಸಾಕಷ್ಟು ಹಣವನ್ನು ನೀಡುತ್ತಾರೆ.


ಇದನ್ನೂ ಓದಿ: Chanakya Niti : ಈ 5 ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಬುದ್ಧಿವಂತರಂತೆ 


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.