ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಗೋವಾ ಸ್ಟೈಲ್‌ನ ಆಹಾರವಾಗಿದ್ದು, ಊಟಕ್ಕೆ ಸೈಡ್ ಡಿಶ್ ಆಗಿ ಸವಿಯಲು ಪರ್ಫೆಕ್ಟ್ ಆಗಿದೆ.


COMMERCIAL BREAK
SCROLL TO CONTINUE READING

 ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡುವ ವಿಧಾನ : 


ಇದನ್ನು ಓದಿ : ಪೌಡರ್' ಚಿತ್ರೀಕರಣ ಪೂರ್ಣ : ಜುಲೈನಲ್ಲಿ ಬಿಡುಗಡೆ , ಪೋಸ್ಟರ್ ಹಂಚಿಕೊಂಡ ದಿ ವೈರಲ್ ಫಿವರ್ 


ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – 5
ರವೆ/ಒರಟಾದ ಅಕ್ಕಿ ಹಿಟ್ಟು – ಕಾಲು ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ನಿಂಬೆ – 1
ಎಣ್ಣೆ – 4 ಟೀಸ್ಪೂನ್


ಇದನ್ನು ಓದಿ : Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!


ಮಾಡುವ ವಿಧಾನ:


  • * ಮೊದಲಿಗೆ ಹಾಗಲಕಾಯಿಯ ಸಿಪ್ಪೆ ಸುಲಿದು, ತೆಳುವಾದ, ಉದ್ದವಾಗಿ ಕತ್ತರಿಸಿಕೊಳ್ಳಿ.

  • * ಅದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ಸುಮಾರು 15 ನಿಮಿಷಗಳ ಕಾಲ ಪಕ್ಕಕ್ಕಿಡಿ. ಈ ವೇಳೆ ಹಾಗಲಕಾಯಿಯಿಂದ ನೀರು ಬಿಡುಗಡೆಯಾಗಿ ಕಹಿ ಕಡಿಮೆಯಾಗುತ್ತದೆ.

  • * ರವೆ ಅಥವಾ ಒರಟಾದ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ. ಅದಕ್ಕೆ ಅರಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ 

  • * ಹಾಗಲಕಾಯಿಯಿಂದ ಬಿಡುಗಡೆಯಾದ ನೀರನ್ನು ತೆಗೆಯಿರಿ

  • * ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ಸುತ್ತಲೂ ಕೋಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ.

  • * ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ.

  • * ಈಗ ಹಾಗಲಕಾಯಿ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.

  • * ತಯಾರಾದ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ , ಊಟದೊಂದಿಗೆ ಸವಿಯಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.