Afternoon Sleep Good Or Bad: ಮಧ್ಯಾಹ್ನ ಊಟ ಮಾಡಿದ  ನಂತರ ನಿದ್ದೆ ಬರುವುದು ಸಹಜ (Afternoon Sleep). ಆರೋಗ್ಯ ತಜ್ಞರ ಪ್ರಕಾರ, ನಾವು ಮಧ್ಯಾಹ್ನ ಆಹಾರವನ್ನು ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಮೆದುಳಿಗೆ ರಕ್ತ ಪೂರೈಕೆಯು ಕಡಿಮೆಯಾಗುವ ಸಾಧ್ಯತೆ ಇದ್ರುತ್ತದೆ. ಈ ಕಾರಣದಿಂದಾಗಿ, ನಿದ್ರೆ ಮತ್ತು ಆಯಾಸದ ಸಮಸ್ಯೆ ಎದುರಾಗುವುದು ಸಾಮಾನ್ಯ. ತಿಂದ ನಂತರ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ ಎಂದೂ ಹೇಳಲಾಗುತ್ತದೆ. ಇದರಿಂದಾಗಿ ಒಬ್ಬರು ಹೆಚ್ಚು ನಿದ್ರೆ ಮಾಡುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ, ಆತಂಕ ಪಡುವ ಅವಶ್ಯಕತೆ ಇಲ್ಲ, ಆದರೆ ಪ್ರತಿದಿನ ಮಧ್ಯಾಹ್ನ ಮಲಗುವ ಅಭ್ಯಾಸ ನಿಮಗೆ ಬಂದರೆ, ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ,  ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
 
ಮಧ್ಯಾಹ್ನ ಮಲಗುವುದು ಒಳ್ಳೆಯದು ಅಥವಾ ಕೆಟ್ಟದ್ದೋ?
ನ್ಯಾಷನಲ್ ಸ್ಲೀಪ್ ಫೌಂಡೇಶನ್ (National Sleep Foundation) ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು ಮಧ್ಯಾಹ್ನ ನಿದ್ರೆ ಮಾಡುತ್ತಾರೆ. ಜಾಗರೂಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಣ್ಣ ನಿದ್ರೆ ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಆದಾಗ್ಯೂ, ಇದು ಅಭ್ಯಾಸವಾಗಿದ್ದರೆ ಅದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನಲಾಗುತ್ತದೆ.
 
ಹಗಲಿನಲ್ಲಿ ಮಲಗಿದರೆ ಏನು ಪರಿಣಾಮ
ಹಾರ್ವರ್ಡ್ ಹೆಲ್ತ್ ವರದಿ ಹೇಳುವಂತೆ ಹಗಲಿನಲ್ಲಿ ಒಂದು ಸಣ್ಣ ನಿದ್ದೆ ಅಥವಾ ನಿದ್ರೆಯು ಜ್ಞಾಪಕಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಆದಾಗ್ಯೂ, ಇದು ಅಭ್ಯಾಸವಾದರೆ ದೀರ್ಘಾವಧಿಯಲ್ಲಿ ಅನೇಕ ನಷ್ಟಗಳನ್ನು ಉಂಟುಮಾಡಬಹುದು. ಹೀಗಾಗಿ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ನೀವು ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನುತ್ತಾರೆ ಸಂಶೋಧಕರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Bad Cholesterol: ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಕಿತ್ತೆಸೆಯುವ ಸಾಮರ್ಥ್ಯ ಹೊಂದಿವೆ ಈ ತರಕಾರಿಗಳು!
 
ನೀವು ಹಗಲಿನಲ್ಲಿ ಮಲಗಬೇಕೇ ಅಥವಾ ಬೇಡವೇ?
ಹಗಲಿನಲ್ಲಿ ತಡವಾಗಿ ಮಲಗುವ ವಯಸ್ಕರಿಗೆ ಮಧುಮೇಹ, ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ ಎಂದು ಹಾರ್ವರ್ಡ್ ತಜ್ಞರು ಹೇಳುತ್ತಾರೆ. ಹಗಲಿನಲ್ಲಿ ಮಲಗುವುದು ಎಂದರೆ ನೀವು ರಾತ್ರಿಯಲ್ಲಿ ಸಾಕಷ್ಟು ನಿದ್ದೆ ಮಾಡುತ್ತಿಲ್ಲ, ಇದು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯಿರಿ. ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡುವುದರಿಂದ ನಿದ್ರೆಯ ಚಕ್ರಕ್ಕೆ ತೊಂದರೆಯಾಗಬಹುದು. ಹೀಗಾಗಿ ಹಗಲಿನಲ್ಲಿ ಲಘು ನಿದ್ರೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಒಬ್ಬ ವ್ಯಕ್ತಿಯು ಹಗಲಿನಲ್ಲಿ 20-30 ನಿಮಿಷಗಳಿಗಿಂತ ಹೆಚ್ಚು ಕಾಲ ಮಲಗಬಾರದು. ಇಲ್ಲದಿದ್ದರೆ ನಷ್ಟ ಸಂಭವಿಸಬಹುದು.


ಇದನ್ನೂ ಓದಿ-Taming Diabetes: ಮಧುಮೇಹ ನಿಯಂತ್ರಣಕ್ಕೆ ಗೋಧಿ ಹಿಟ್ಟಿನಲ್ಲಿ ಈ ಎರಡು ಪದಾರ್ಥ ಬೆರೆಸಿದ ಚಪಾತಿ ಸೇವಿಸಿ!


(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ