Blowing Shankha benefits : ಹಿಂದೂ ಸಂಪ್ರದಾಯದಲ್ಲಿ ಅನೇಕ ಜನರು ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ. ವಿಶೇಷವಾಗಿ ಪೂಜೆಯಲ್ಲಿ ಗಂಟೆ ಬಾರಿಸುವುದು ಮತ್ತು ಶಂಖವನ್ನು ಊದುವುದು ವಾಡಿಕೆ. ಪೂಜೆ ಮಾಡುವಾಗ ಶಂಖ ಊದುವುದು ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.. ಅಲ್ಲದೆ, ಪ್ರತಿದಿನ ಕೇವಲ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳಿವೆ.. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ..


COMMERCIAL BREAK
SCROLL TO CONTINUE READING

ಶಂಖ ಊದುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದೊಂದು ವಿದ್ಯೆ. ಮೊದಲು ಪೂರ್ಣ ಉಸಿರನ್ನು ತೆಗೆದುಕೊಂಡು ನಂತರ ಶಂಖದ ಚಿಕ್ಕ ರಂದ್ರಕ್ಕೆ ಬಾಯಿಯಿಟ್ಟು ಬಲವಾಗಿ ಊದಬೇಕು. ಆಗ ಧ್ವನಿ ಬರುತ್ತದೆ.. ನಂತರ ಸಂಪೂರ್ಣವಾಗಿ ಉಸಿರನ್ನು ಎಳೆದುಕೊಂಡು ಮತ್ತೆ ಶಂಖವನ್ನು ಊದಬೇಕು.. ಒಂದೇ ಬಾರಿಗೆ ಇದನ್ನು ಕಲಿಯಲು ಆಗುವುದಿಲ್ಲ... ಕ್ರಮೇಣ ಅಭ್ಯಾಸ ಮಾಡಬೇಕು..


ಇದನ್ನೂ ಓದಿ:ಹೆಚ್ಚು ನೀರು ಕುಡಿದರೆ ವಿಷವಾಗಬಹುದೇ? ಇಲ್ಲಿದೆ ನೀರಿನ ವಿಷದ ಬಗ್ಗೆ ಅಚ್ಚರಿಯ ಮಾಹಿತಿ 


ಹಿಂದೂ ಧರ್ಮದಲ್ಲಿ ಶಂಖವು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ಆಚರಣೆಗಳು ಮತ್ತು ಸಮಾರಂಭಗಳು ಹಾಗೂ ಪೂಜೆಯ ವೇಳೆ ಶಂಖವನ್ನು ಊದಲಾಗುತ್ತದೆ. ಇದರಿಂದ ಬರುವ ಶಬ್ದವು ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ ಅಲ್ಲದೆ, ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ನಂಬಲಾಗುತ್ತದೆ..


ಹೌದು.. ಶಂಖದಿಂದ ಬರುವ ಶಬ್ದವು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದರ ಕಂಪನಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ.. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಮನೆಯಲ್ಲಿ ಮುಂಜಾನೆ ಶಂಖವನ್ನು ಊದಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ:ಸಕ್ಕರೆ ಕಾಯಿಲೆಗೆ ಕರಿಬೇವು ಪವಾಡ ಮದ್ದು..ತಟ್ಟನೆ ಕಂಟ್ರೋಲ್‌ಗೆ ಬರುತ್ತೆ ಶುಗರ್‌


ಶಂಖವನ್ನು ಊದುವಾಗ ಬಾಯಿಗಿಂತ ಮೂಗಿನ ಮೂಲಕ ಹೆಚ್ಚು ಉಸಿರೆಳೆದುಕೊಳ್ಳಬೇಕು. ಇದು ಒಂದು ರೀತಿಯ ಉಸಿರಾಟದ ವ್ಯಾಯಾಮವಾಗಿ ಕೆಲಸ ಮಾಡುತ್ತದೆ. ಈ ಉಸಿರಾಟದ ವ್ಯಾಯಾಮವು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಪ್ರತಿದಿನ ಕನಿಷ್ಠ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದಿದರೆ, ಅದು ಉಸಿರಾಟದ ವ್ಯಾಯಾಮದಂತೆ ಕೆಲಸ ಮಾಡುತ್ತದೆ.  


ಶಂಖ ಊದುವುದರಿಂದ ಹಲವಾರು ಪ್ರಯೋಜನಗಳಿವೆ. ಇದರ ಹಿಂದೆ ವಿಜ್ಞಾನವಿದೆ. ಪ್ರತಿದಿನ 10 ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಶಂಖವನ್ನು ಊದುವ ಶಬ್ದವು ಬಲವಾದ ಕಂಪನಗಳನ್ನು ಸೃಷ್ಟಿಸುತ್ತದೆ. ಅವು ನಮ್ಮ ದೇಹ, ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹರಡಿ ಧನಾತ್ಮಕ ಶಕ್ತಿಗಳ ಒತ್ತಡವನ್ನು ದೂರವಿಡುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.