ಈ ಪಾತ್ರೆಯಲ್ಲಿ ಊಟ ತಿಂದರೆ ಆಯಸ್ಸು 10 ವರ್ಷ ಹೆಚ್ಚಾಗುತ್ತದೆ..! ನಂಬಿಕೆ ಇದ್ದರೆ ತಿಳಿದುಕೊಳ್ಳಿ
ನೀವು ತೀವ್ರವಾದ ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಮನೆಯಲ್ಲಿ ಕಬ್ಬಿಣದ ಪ್ಯಾನ್ ಬದಲಿಗೆ ಮಣ್ಣಿನ ಪಾತ್ರೆಗಳನ್ನು ಬಳಸಿ. ಅನೇಕ ಗಂಭೀರ ಕಾಯಿಲೆಗಳಿಂದ ಮುಕ್ತರಾಗಿ.
Mud Pot Health benefits : ಕಾಲ ಕ್ರಮೇಣ ಅಡುಗೆ ಮಾಡುವ ಪದ್ದತಿಗಳು ಬದಲಾವಣೆಗೆ ಒಳಗಾಗಿವೆ. ಈಗ ಎಲ್ಲಿ ನೋಡಿದರೂ ಸಹ ಸ್ಟೀಲ್, ಅಲ್ಯೂಮಿನಿಯಂ, ಕಬ್ಬಿಣ ಮತ್ತು ಈಗ ನಾನ್ ಸ್ಟಿಕ್ ಪ್ಯಾನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಅವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದನ್ನು ನೆನಪಿಡಿ.
ಆಯುರ್ವೇದದ ಪ್ರಕಾರ, ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರವನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಮಣ್ಣಿನ ಪಾತ್ರೆಗಳಿಂದ ತಯಾರಿಸಿದ ಊಟ ರುಚಿಕರವಾಗಿರುವುದಲ್ಲದೆ ಶೇಕಡ 100 ರಷ್ಟು ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ಆಹಾರದಲ್ಲಿರುವ ಪೌಷ್ಟಿಕಾಂಶದ ಅಂಶಗಳನ್ನು ಕಳೆದುಕೊಳ್ಳುವುದಿಲ್ಲ.
ಇದನ್ನೂ ಓದಿ: ಊಟ ಮಾಡುವಾಗ ಈ ದಿಕ್ಕಿಗೆ ಮುಖ ಮಾಡಿ ಕುಳಿತರೆ ಸಾಲ ಹೆಚ್ಚುತ್ತದೆ..! ಈ ತಪ್ಪು ಮಾಡ್ಬೇಡಿ
ಇದಲ್ಲದೆ ಮಣ್ಣಿನ ಬಾಣಲೆಯಲ್ಲಿ ಮಾಡಿದ ರೊಟ್ಟಿಯು ಜೀರ್ಣಕ್ರಿಯೆಯನ್ನು ಸುಧಾರಣೆಗೆ ಕಾರಣವಾಗುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ತಡೆಯುತ್ತದೆ. ಹಾಗಾದರೆ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರವನ್ನು ತಿನ್ನುವುದರಿಂದ ಆಗುವ ಇತರ ಪ್ರಯೋಜನಗಳನ್ನು ತಿಳಿಯೋಣ.
ಆಯುರ್ವೇದ ತಜ್ಞರ ಪ್ರಕಾರ, ಜನರು ಕೇವಲ ವರ್ಷಗಳ ಹಿಂದೆ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿದ್ದರು. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು, ದೊಡ್ಡ ಕಾಯಿಲೆಗಳು ಅವರ ಹತ್ತಿರ ಸುಳಿಯುತ್ತಿದ್ದಿಲ್ಲ. ಇಂದಿಗೂ ಸಹ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಸರಾಸರಿ ವಯಸ್ಸು 8 ರಿಂದ 10 ವರ್ಷ ಹೆಚ್ಚಾಗಬಹುದು.
ಇದನ್ನೂ ಓದಿ: ಶನಿ ವಕ್ರಿಯಿಂದ ಈ ರಾಶಿಯವರಿಗೆ ಪ್ರಗತಿಯ ಜೊತೆಗೆ ಶುಭಸುದ್ದಿ ಸಿಗಲಿದೆ
ಮಲಬದ್ಧತೆಯಿಂದ ಪರಿಹಾರ : ಅತಿಯಾಗಿ ತಿನ್ನುವುದು ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಲಬದ್ಧತೆಗೆ ಕಾರಣವಾಗಿದೆ. ಈ ಸ್ಥಿತಿಯಿಂದ ಪರಿಹಾರ ಪಡೆಯಲು, ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರವನ್ನು ಸೇವನೆ ಮಾಡಿ.
ಗ್ಯಾಸ್ ಸಮಸ್ಯೆಯಿಂದ ಮುಕ್ತಿ : ಒಂದೆಡೆ ಕೂತು ಹೆಚ್ಚು ಹೊತ್ತು ಕೆಲಸ ಮಾಡುವುದರಿಂದ ಅನೇಕರು ಗ್ಯಾಸ್ ಸಮಸ್ಯೆ ಎದುರಿಸುತ್ತಾರೆ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕಬ್ಬಿಣ ಅಥವಾ ನಾನ್ ಸ್ಟಿಕ್ ಪ್ಯಾನ್ ಬದಲಿಗೆ ಮಣ್ಣಿನ ಬಾಣಲೆಯಲ್ಲಿ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ.
ಇದನ್ನೂ ಓದಿ: ಮನಿ ಪ್ಲಾಂಟ್ ಬೇರಿಗೆ ಈ ವಸ್ತುವನ್ನು ಕಟ್ಟಿದರೆ ಮನೆಯಲ್ಲಿ ತುಂಬಿ ತುಳುಕುವುದು ಸಂಪತ್ತು!
ತಜ್ಞರ ಪ್ರಕಾರ, ರೊಟ್ಟಿಯನ್ನು ಮಣ್ಣಿನ ಬಾಣಲೆಯಲ್ಲಿ ಬೇಯಿಸುವುದರಿಂದ ರೊಟ್ಟಿಯಲ್ಲಿನ ಪೋಷಕಾಂಶಗಳು ನಷ್ಟವಾಗುವುದಿಲ್ಲ. ಅಲ್ಯೂಮಿನಿಯಂ ಪ್ಯಾನ್‌ನಲ್ಲಿ ರೊಟ್ಟಿ ತಯಾರಿಸುವಾಗ ಶೇ.87, ಹಿತ್ತಾಳೆಯ ಬಾಣಲೆಯಲ್ಲಿ ಶೇ.7 ಮತ್ತು ಕಂಚಿನ ಬಾಣಲೆಯಲ್ಲಿ ಶೇ.3 ರಷ್ಟು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. 100 ರಷ್ಟು ಪೋಷಕಾಂಶಗಳು ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಆಹಾರದಲ್ಲಿ ಮಾತ್ರ ಇರುತ್ತವೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.