Brinjal Side Effects: ಬದನೆಕಾಯಿ ತರಕಾರಿಯನ್ನು ಭಾರತೀಯ ಅಡುಗೆಮನೆಗಳಲ್ಲಿ ನೀವು ಸುಲಭವಾಗಿ ಕಾಣಬಹುದು ಏಕೆಂದರೆ ದೇಶದ ಪ್ರತಿಯೊಂದು ಭಾಗದಲ್ಲೂ ಬದನೆಕಾಯಿಯನ್ನು ಸೇವಿಸಲಾಗುತ್ತದೆ ಮತ್ತು ಜನರು ತಮ್ಮ ದೈನಂದಿನ ಆಹಾರದಲ್ಲಿ ಬದನೆಯಿಂದ ಮಾಡಿದ ವಿಭಿನ್ನ ಭಕ್ಷ್ಯಗಳನ್ನು ಸೇರಿಸುತ್ತಾರೆ. ಅದು ಸ್ಟಫ್ಡ್ ಬದನೆ ಕಾಯಿ ಆಗಿರಲಿ ಅಥವಾ ಬದನೆಕಾಯಿ ಭರ್ತಾ ಆಗಿರಲಿ, ಜನರು ಅದರ ರುಚಿಯನ್ನು ತುಂಬಾ ಇಷ್ಟಪಡುತ್ತಾರೆ. ಬದನೆಕಾಯಿಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ಈ ತರಕಾರಿಯನ್ನು ಆರೋಗ್ಯಕರವಾಗಿಸುತ್ತದೆ. ಆದರೆ, ಕೆಲವರಿಗೆ ಬದನೆಕಾಯಿ ಸೇವನೆ ನಿಷಿದ್ಧ ಏಣಲಾಗಿದೆ.  (Lifestyle News In Kannada)


COMMERCIAL BREAK
SCROLL TO CONTINUE READING

ಈ ಕಾಯಿಲೆಗಳಲ್ಲಿ ಬದನೆಕಾಯಿಯನ್ನು ತಿನ್ನಬಾರದು
ಕೆಲವು ಕಾಯಿಲೆಗಳ ಸಂದರ್ಭದಲ್ಲಿ ಬದನೆಕಾಯಿ ಸೇವನೆ ರೋಗ ಲಕ್ಷಣಗಳನ್ನು ಮತ್ತಷ್ಟು ಹದಗೆಡಿಸುತ್ತದೆ. ಅದೇ ರೀತಿ ಬದನೆಕಾಯಿಯಿಂದ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಬರಬಹುದು. ಯಾವ ಜನರು ಬದನೆ ತರಕಾರಿಯನ್ನು ತಿನ್ನಬಾರದು ಎಂದು ತಿಳಿಯೋಣ. 


ದುರ್ಬಲ ಮೂಳೆಗಳನ್ನು ಹೊಂದಿರುವ ಜನರು
ಮೂಳೆ ಸಂಬಂಧಿ ಸಮಸ್ಯೆ ಇರುವವರು ಬದನೆ ತಿನ್ನಬಾರದು. ವಾಸ್ತವದಲ್ಲಿ ಬದನೆಕಾಯಿಯಲ್ಲಿ, ಆಕ್ಸಲೇಟ್ ಕಂಡುಬರುತ್ತದೆ, ಇದು ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂಳೆಗಳಿಗೆ ಮತ್ತಷ್ಟು ದುರ್ಬಲಗೊಳಿಸುತ್ತದೆ.


ಸಂಧಿವಾತ ರೋಗಿಗಳು
ಸಂಧಿವಾತ ರೋಗಿಗಳು ಅಥವಾ ಮೊಣಕಾಲು ನೋವಿನಿಂದ ಬಳಲುತ್ತಿರುವವರು ಸಹ ಬದನೆ ತಿನ್ನಬಾರದು. ಬದನೆಕಾಯಿ ತಿನ್ನುವುದರಿಂದ ದೇಹದಲ್ಲಿ ವಾತ ದೋಷ ಹೆಚ್ಚಾಗುತ್ತದೆ, ಇದು ಕೀಲುಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕೀಲುಗಳಲ್ಲಿ ನೋವನ್ನು ಹೆಚ್ಚಿಸುತ್ತದೆ. 


ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು
ಕಿಡ್ನಿ ಸ್ಟೋನ್  ಸಮಸ್ಯೆ ಇರುವವರಿಗೆ ಬದನೆಕಾಯಿಯ ಸೇವನೆಯು ಹಾನಿಕಾರಕವಾಗಿದೆ. ಬದನೆ ಬೀಜಗಳು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಿದ್ದು, ಅವುಗಳ ಸೇವನೆಯನ್ನು ತಪ್ಪಿಸಬೇಕು.


ಇದನ್ನೂ ಓದಿ-Bad Cholesterol Symptoms: ಹಿಮ್ಮಡಿಯಲ್ಲಿನ ಈ 4 ಬದಲಾವಣೆಗಳು ಶರೀರದಲ್ಲಿ ಹೆಚ್ಚಾಗಿದೆ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಎನ್ನುತ್ತವೆ... ಎಚ್ಚರ!


ಪೈಲ್ಸ್ ರೋಗಿಗಳು
ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಇರುವವರು ಕೂಡ ಬದನೆಯನ್ನು ಸೇವಿಸಬಾರದು. ವಾಸ್ತವದಲ್ಲಿ, ಬದನೆಕಾಯಿಯನ್ನು ತಿನ್ನುವುದು ಪೈಲ್ಸ್ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. 


ಇದನ್ನೂ ಓದಿ-Taming Diabetes: ಫಾಸ್ಟಿಂಗ್ ಶುಗರ್ ನಿಯಂತ್ರಣದಲ್ಲಿರಿಸಬೇಕೆ? ರಾತ್ರಿ ಮಲಗುವ ಮುನ್ನ ಒಂದು ಚಮಚ ಈ ಬೀಜಗಳನ್ನು ಸೇವಿಸಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.