Diabetes: ಮಧುಮೇಹಕ್ಕೆ 4 ದೊಡ್ಡ ಕಾರಣಗಳು, ಈ ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ
ವಿಜ್ಞಾನಿಗಳು ಇನ್ನೂ ಮಧುಮೇಹಕ್ಕೆ ಸರಿಯಾದ ಚಿಕಿತ್ಸೆಯನ್ನು ಕಂಡುಹಿಡಿದಿಲ್ಲ. ಮಧುಮೇಹದ ಕಾರಣಗಳನ್ನು ನೀವು ತಿಳಿದುಕೊಂಡಿದ್ದರೆ ಅದರಿಂದ ಪಾರಾಗಬಹುದು.
ನವದೆಹಲಿ: ಮಧುಮೇಹವು ತುಂಬಾ ಗಂಭೀರವಾದ ಕಾಯಿಲೆಯಾಗಿದೆ. ಯಾರಿಗಾದರೂ ಒಮ್ಮೆ ಬಂದರೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಡೀ ಜೀವನಪರ್ಯಂತ ಕಾಡುತ್ತವೆ. ಮಧುಮೇಹ(Diabetes)ದ ಸ್ಥಿತಿಯಲ್ಲಿ ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ ಅಥವಾ ದೇಹವು ಅದನ್ನು ಹೆಚ್ಚು ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹಲವಾರು ಸಮಸ್ಯೆಗಳು ಮನುಷ್ಯನನ್ನು ಕಾಡುತ್ತವೆ.
ಮಧುಮೇಹಕ್ಕೆ 4 ಪ್ರಮುಖ ಕಾರಣಗಳು
ಇನ್ಸುಲಿನ್ ಕೊರತೆಯು ಅನೇಕ ಜೀವಕೋಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದಿಂದ ಹೃದಯಾಘಾತ(Heart Attack), ಕಣ್ಣಿನ ದೌರ್ಬಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯ ಉಂಟಾಗುತ್ತದೆ. ಮಧುಮೇಹಕ್ಕೆ 4 ಕಾರಣಗಳು ಯಾವುವು ಗೊತ್ತಾ?
1. ಆನುವಂಶಿಕ ಕಾರಣ
ಪ್ರಪಂಚದಾದ್ಯಂತ ನಡೆಸಿದ ಸಂಶೋಧನೆಯಲ್ಲಿ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ ಅದು ನಿಮಗೂ ಬಳುವಳಿಯಾಗಿ ಬರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಈ ರೋಗ ಆನುವಂಶಿಕ ಕಾರಣದಿಂದ ಬರುತ್ತದೆ.
ಇದನ್ನೂ ಓದಿ: Kidney Food: ಆರೋಗ್ಯಕರ ಕಿಡ್ನಿಗಾಗಿ ಈ 5 ಆಹಾರಗಳನ್ನು ಮಿಸ್ ಮಾಡದೇ ನಿಮ್ಮ ಡಯಟ್ನಲ್ಲಿ ಸೇರಿಸಿ
2. ಅನಾರೋಗ್ಯಕರ ಜೀವನಶೈಲಿ
ನಿಮ್ಮ ದೇಹವು ಯಾವಾಗಲೂ ಸಕ್ರಿಯವಾಗಿರುವುದು ಬಹಳ ಮುಖ್ಯ. ಜೀವನಶೈಲಿ(Lifestyle))ಯನ್ನು ನಿರ್ಲಕ್ಷ್ಯ ಮಾಡುವ ಜನರು ದೀರ್ಘಕಾಲದ ಕಾಯಿಲೆಗೆ ಒಳಗಾಗುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂ ಪ್ರತಿದಿನ ಕನಿಷ್ಠ 1 ಗಂಟೆ ವ್ಯಾಯಾಮ ಮಾಡಬೇಕು
3. ಅತಿಯಾಗಿ ಸಿಹಿ ಸೇವಿಸುವುದು
ಕೆಲವು ಜನರು ಹೆಚ್ಚು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಮಧುಮೇಹದ ಅಪಾಯ(Bad Habits)ವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿದುಕೊಳ್ಳಬೇಕು. ಏಕೆಂದರೆ ಕ್ಯಾಲೊರಿಗಳ ಹೆಚ್ಚಳವು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಸಿಹಿ ಪದಾರ್ಥಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು.
4. ಬೊಜ್ಜು
ನಿಮ್ಮ ತೂಕವು ನಿರಂತರವಾಗಿ ಹೆಚ್ಚಾಗುತ್ತಿದ್ದರೆ ಇಂದಿನಿಂದಲೇ ವ್ಯಾಯಾಮವನ್ನು ಪ್ರಾರಂಭಿಸಿ. ಏಕೆಂದರೆ ಬೊಜ್ಜು ಹೆಚ್ಚಾಗುವುದರಿಂದ ದೇಹದೊಳಗಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಮತ್ತು ಕ್ರಮೇಣ ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Virus alert! ಜಗತ್ತನ್ನು ಆತಂಕಕ್ಕೀಡು ಮಾಡಿರುವ ಲಸ್ಸಾ ಜ್ವರದ ಬಗ್ಗೆ ನಿಮಗೆಷ್ಟು ಗೊತ್ತು?
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ
ನಿಮಗೆ ಮಧುಮೇಹ ಬರಬಾರದೆಂದು ನೀವು ಬಯಸಿದರೆ ಇಂದಿನಿಂದಲೇ ನಿಮ್ಮ ಆರೋಗ್ಯದ(Healthy Lifestyle) ಬಗ್ಗೆ ಜಾಗರೂಕರಾಗಿರಿ. ಅನಾರೋಗ್ಯಕರ ಜೀವನಶೈಲಿಯನ್ನು ತ್ಯಜಿಸಿ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ. ಮಧುಮೇಹವನ್ನು ತಪ್ಪಿಸಲು ದೇಹದ ಚಟುವಟಿಕೆಗಳು ಅಗತ್ಯವಾಗಿದ್ದು, ಕ್ಯಾಲೊರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರ್ನ್ ಮಾಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.