ನವದೆಹಲಿ: ನೀವು ಋತುಮಾನದ ಹಣ್ಣುಗಳನ್ನು ತಿನ್ನಲು ಬಯಸಿದರೆ ಚಳಿಗಾಲದಲ್ಲಿ ಪ್ಲಮ್ ಅನ್ನು ಖಂಡಿತವಾಗಿ ಸೇವಿಸಿ. ಪ್ಲಮ್ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ವಿಟಮಿನ್‌ಗಳು, ರೈಬೋಫ್ಲಾವಿನ್ ಮತ್ತು ಥಯಾಮಿನ್‌ನಂತಹ ಅನೇಕ ಅಂಶಗಳನ್ನು ಒಳಗೊಂಡಿದೆ. ಇದಲ್ಲದೆ ಪ್ಲಮ್ ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತದೆ ಮತ್ತು ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಆಯುರ್ವೇದದ ಪ್ರಕಾರ ಪ್ಲಮ್ ಹಣ್ಣುಗಳ(Benefits Of Plum Fruit) ಬೀಜಗಳು ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.


COMMERCIAL BREAK
SCROLL TO CONTINUE READING

ಜೀರ್ಣಕ್ರಿಯೆಗೆ ಉತ್ತಮ


ಪ್ಲಮ್ ಹಣ್ಣು(Plum Fruit), ಎಲೆಗಳು ಮತ್ತು ಬೀಜಗಳ ಬಳಕೆಯು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ಲಮ್ ಹಣ್ಣುಗಳ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಮಲಬದ್ಧತೆ ಸಮಸ್ಯೆಗೂ ನಿಮಗೆ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ಹೃದಯಾಘಾತ ಮತ್ತು BP ಅಪಾಯ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ ಮತ್ತು ಬೀಟ್ರೂಟ್! ಹೇಗೆ ಇಲ್ಲಿದೆ ನೋಡಿ


ಚರ್ಮಕ್ಕೆ ಹೊಳಪು ನೀಡುತ್ತದೆ


ಪ್ಲಮ್ ಹಣ್ಣುಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಜೀವಕೋಶದ ಹಾನಿ ಮತ್ತು ಸ್ವತಂತ್ರ ರಾಡಿಕಲ್ ಗಳ ವಿರುದ್ಧ ಹೋರಾಡಲು ಪ್ಲಮ್ ಹಣ್ಣುಗಳು(Plum Fruit Benefits) ತುಂಬಾ ಸಹಾಯಕವಾಗಿವೆ. ಮೊಡವೆ ಮತ್ತು ಚರ್ಮದ ಕಲೆಗಳ ಸಮಸ್ಯೆಯಲ್ಲಿ ಪ್ಲಮ್ ಹಣ್ಣುಗಳ ಸೇವನೆಯು ನಿಮಗೆ ಪ್ರಯೋಜನ ನೀಡುತ್ತದೆ. ಇದು ತ್ವಚೆಗೆ ಹೊಳಪನ್ನು ನೀಡುತ್ತದೆ.


ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ


ಪ್ಲಮ್ ಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ(Super Food) ಬಲಗೊಳ್ಳುತ್ತದೆ. ಇದು ವಿಟಮಿನ್ ಸಿ, ವಿಟಮಿನ್ ಬಿ 12 ಮತ್ತು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದ್ದು, ಇದರ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಹಲಸಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.


ಇದನ್ನೂ ಓದಿ: Obesity- ಬೊಜ್ಜು ಕಡಿಮೆ ಮಾಡಲು ದಿವ್ಯೌಷಧವಂತೆ ಈ ಒಗ್ಗರಣೆ ಸಾಮಾಗ್ರಿ-ಸಂಶೋಧನೆಯಲ್ಲಿ ಬಹಿರಂಗ


ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ


ಪ್ಲಮ್ ಹಣ್ಣು(Plum Fruit)ಗಳ ಸೇವನೆಯು ಡ್ಯಾಂಡ್ರಫ್ ಸಮಸ್ಯೆಯಲ್ಲಿಯೂ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಅಗತ್ಯ ಪ್ರೋಟೀನ್‌ಗಳ ಹೊರತಾಗಿ ಪ್ಲಮ್ ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಕ್ಯಾರಿಟಲಾಯ್ಡ್‌ ಗಳು ಮತ್ತು ಬಿ ಕಾಂಪ್ಲೆಕ್ಸ್ ಕೂಡ ಇದೆ. ಕೂದಲಿನಿಂದ ತಲೆಹೊಟ್ಟು ತೆಗೆದುಹಾಕಲು ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಪ್ರತಿದಿನ ಕನಿಷ್ಠ 8 ರಿಂದ 10 ಹಣ್ಣುಗಳನ್ನು ಸೇವಿಸುವುದು ಉತ್ತಮ.


ಒತ್ತಡ ಮತ್ತು ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ


ಪ್ಲಮ್ ಹಣ್ಣುಗಳ ಸೇವನೆಯಿಂದ ಒತ್ತಡ ಮತ್ತು ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ಲಮ್ ಸೇವನೆಯು ಮೆದುಳಿನ ಬೆಳವಣಿಗೆಗೆ ಸಹ ಪ್ರಯೋಜನಕಾರಿಯಾಗಿದೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಪಾಲಿಸುವ ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.