ನವದೆಹಲಿ: ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಚಹಾ ಪ್ರಿಯರನ್ನು ನೀವು ಕಾಣಬಹುದು. ನಮ್ಮಲ್ಲಿ ಅನೇಕರು ಬೆಳಗ್ಗೆ ಎದ್ದಕೂಡಲೇ ಬೆಡ್ ಟೀ ಸೇವಿಸುವ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಇನ್ನು ಕೆಲವರು ದಿನದಲ್ಲಿ ಅನೇಕ ಕಪ್ ಚಹಾವನ್ನು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಮನೆ-ಕಚೇರಿ ಮತ್ತು ಹೊರಗೆ ಹೀಗೆ ಟೀ ಕುಡಿಯುವುದು ಹಲವರ ಹವ್ಯಾಸವಾಗಿರುತ್ತದೆ.   


COMMERCIAL BREAK
SCROLL TO CONTINUE READING

ಚಹಾ ಪ್ರೀತಿಸುವ ಹೆಚ್ಚಿನ ಜನರು ಅದರ ಅತಿಯಾದ ಸೇವನೆಯು ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಒಂದು ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯುವುದು ಉತ್ತಮ ಎಂಬುದರ ಬಗ್ಗೆ ತಿಳಿಯಿರಿ. ಚಹಾದಲ್ಲಿ ಕೆಫೀನ್ ಮತ್ತು ಸಂಸ್ಕರಿಸಿದ ಸಕ್ಕರೆ ಇರುತ್ತದೆ. ಇವೆರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ದಿನಕ್ಕೆ 5 ರಿಂದ 10 ಕಪ್ ಚಹಾ  ಕುಡಿಯುತ್ತಿದ್ದರೆ, ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆಯ ಅಗತ್ಯವಿದೆ.


ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆಗಳಿರುವವರಿಗೆ ಮೊಟ್ಟೆ ಸೇವನೆ ತುಂಬಾ ಡೇಂಜರ್


ಚಹಾ ಕುಡಿಯುವುದು ಹಾನಿಕಾರಕವಲ್ಲ. ಈ ಪಾನೀಯವನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದು ನಿಮ್ಮನ್ನು ರಿಫ್ರೆಶ್ ಮಾಡಲು ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ನೀವು ಮಿತಿಗಿಂತ ಹೆಚ್ಚು ಕುಡಿದರೆ ಮಲಬದ್ಧತೆ, ಎದೆಯುರಿ, ಕರುಳು, ಆಮ್ಲೀಯತೆ, ಅಧಿಕ ರಕ್ತದೊತ್ತಡದಂತಹ ಕೆಟ್ಟ ಪರಿಣಾಮಗಳ ಸಮಸ್ಯೆಗಳು ಉಂಟಾಗಬಹುದು.


ಸಕ್ಕರೆಯಿಂದ ಆರೋಗ್ಯ ಕೆಡುತ್ತದೆ


ಭಾರತದಲ್ಲಿ ಚಹಾದಲ್ಲಿ ಸಕ್ಕರೆ ಬೆರೆಸುವ ಟ್ರೆಂಡ್ ಹೆಚ್ಚಾಗಿದ್ದು, ದಿನವಿಡೀ ಹಲವು ಕಪ್ ಟೀ ಕುಡಿದರೆ ಸಕ್ಕರೆಯ ಪ್ರಮಾಣ ಹೆಚ್ಚಾಗುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಮತ್ತು ನಂತರ ಮಧುಮೇಹದ ಅಪಾಯವು ಉದ್ಭವಿಸಬಹುದು.


ಸ್ಥೂಲಕಾಯತೆ ಹೆಚ್ಚಿಸಬಹುದು


ಹೆಚ್ಚು ಸಕ್ಕರೆ ಸೇವಿಸುವುದರಿಂದ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಬೊಜ್ಜು ಹೆಚ್ಚಾಗುತ್ತದೆ ಮತ್ತು ನಂತರ ಕೊಬ್ಬು ಹೊಟ್ಟೆಯ ಸುತ್ತಲೂ ಕಾಣಿಸಿಕೊಳ್ಳುತ್ತದೆ. ಇದರಿಂದ ತೂಕ ಇಳಿಸುವುದು ಕಷ್ಟವಾಗುತ್ತದೆ.


ಇದನ್ನೂ ಓದಿ: ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹರಹಾಕಬೇಕೆ? ಇಲ್ಲಿದೆ ಒಂದು ಅದ್ಭುತ ಪಾನೀಯ!


ಕೆಫೀನ್ ಹಾನಿಯುಂಟುಮಾಡುತ್ತದೆ


ಚಹಾದಲ್ಲಿ ಕೆಫೀನ್ ಬಹಳಷ್ಟು ಇದೆ, ಇದು ತಾಜಾತನವನ್ನು ನೀಡುತ್ತದೆ, ಆದರೆ ನೀವು ಚಹಾಕ್ಕೆ ವ್ಯಸನಿಯಾಗುತ್ತೀರಿ. ನೀವು ಈ ಪಾನೀಯ ಸೇವಿಸದ ದಿನ ಚಡಪಡಿಕೆ ಮತ್ತು ತಲೆನೋವು ಎದುರಿಸಬೇಕಾಗುತ್ತದೆ. ಚಹಾವು ನಿದ್ರೆಯನ್ನು ದೂರ ಮಾಡುತ್ತದೆ, ಆದ್ದರಿಂದ ನಿಮ್ಮ ನಿದ್ರೆಯ ಮೇಲೆ ಇದು ಪರಿಣಾಮ ಬೀರಬಹುದು.


ದಿನಕ್ಕೆ ಎಷ್ಟು ಚಹಾ ಕುಡಿಯಬೇಕು?


1 ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯಬೇಕು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿನಲ್ಲಿರಬಹುದು. ಆರೋಗ್ಯದ ದೃಷ್ಟಿಯಿಂದ ನೀವು ದಿನಕ್ಕೆ 2-3 ಕಪ್ ಚಹಾವನ್ನು ಕುಡಿಯಬಹುದು. ಅದೂ ಸಹ ಸೀಮಿತ ಪ್ರಮಾಣದ ಸಕ್ಕರೆಯೊಂದಿಗೆ. ಈ ಅಭ್ಯಾಸವನ್ನು ನಿಯಂತ್ರಿಸಲು ಸಾಧ್ಯವಾಗದ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.