ಬಂಜೆತನ ಸೇರಿದಂತೆ ಪುರುಷರ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಇಂದಿನ ಜಗತ್ತಿನಲ್ಲಿ ಅಸಾಮಾನ್ಯವೇನಲ್ಲ.  ಪುರುಷರ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ವಿವಿಧ ರೀತಿಯ ಚಿಕಿತ್ಸೆಗಳು ಮತ್ತು ವಿಧಾನಗಳಿವೆಯಾದರೂ, ಸರಿಯಾದ ಜೀವನಶೈಲಿ ಬದಲಾವಣೆಗಳೊಂದಿಗೆ ಸೆಲ್ಪ್ ಆರೈಕೆಯು ಉಪಯುಕ್ತವಾಗಿದೆ. ಯೋಗವು ವಿಶೇಷವಾಗಿ ಎಲ್ಲಾ ಪುರುಷರಿಗೆ ವರದಾನವಾಗಬಹುದು. ಪುರುಷರ ಸಂತಾನೋತ್ಪತ್ತಿ ಆರೋಗ್ಯವು ನಿಯಮಿತ ಯೋಗಾಭ್ಯಾಸದಿಂದ ಪ್ರಯೋಜನ ಪಡೆಯಬಹುದು ಏಕೆಂದರೆ ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಮಹಾʼ ಬಿಕ್ಕಟ್ಟು: ಮುಂಬೈಗೆ ತೆರಳಿದ ಶಿವಸೇನಾ ನಾಯಕ ಏಕನಾಥ್ ಶಿಂಧೆ! ಉಪಸಭಾಪತಿ ಭೇಟಿ ಸಾಧ್ಯತೆ


ಈ ಲೇಖನದಲ್ಲಿ, ಪುರುಷ ಫಲವತ್ತತೆ ಸಮಸ್ಯೆಗಳನ್ನು ಯೋಗದೊಂದಿಗೆ ಹೇಗೆ ನಿಭಾಯಿಸಬಹುದು ಎಂಬುದನ್ನು ನಾವು ನೋಡೋಣ 


ಪುರುಷ ಬಂಜೆತನ ಎಂದರೇನು?


ಪುರುಷ ಬಂಜೆತನವು ಲೈಂಗಿಕ ಸಂಪರ್ಕದ ನಂತರ ಪ್ರಬುದ್ಧ ಅಂಡಾಣುಗಳನ್ನು ಫಲವತ್ತಾಗಿಸಲು ಮನುಷ್ಯನ ಅಸಮರ್ಥತೆಯನ್ನು ಸೂಚಿಸುತ್ತದೆ. ಪುರುಷರಲ್ಲಿ ಬಂಜೆತನವು ಕಡಿಮೆ ವೀರ್ಯಾಣುಗಳ ಸಂಖ್ಯೆ, ಕಳಪೆ ವೀರ್ಯಾಣು ಕಾರ್ಯನಿರ್ವಹಣೆ ಅಥವಾ ವೀರ್ಯಾಣು ವಿತರಣೆ ಅಡೆತಡೆಗಳಿಂದ ಉಂಟಾಗಬಹುದು.  ಪುರುಷ ಬಂಜೆತನವು ಅನಾರೋಗ್ಯ, ಆರೋಗ್ಯ ಸಮಸ್ಯೆಗಳು, ಗಾಯಗಳು ಮತ್ತು ಧೂಮಪಾನದಂತಹ ಜೀವನಶೈಲಿ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಸಂದರ್ಭಗಳಿಂದ ಎದುರಾಗಬಹುದು.


ಸಿಗರೇಟುಗಳು ಅಥವಾ ಗಾಂಜಾವನ್ನು ಸೇದುವುದು, ಹಾಗೆಯೇ ಕೊಕೇನ್ ಮತ್ತು ಸ್ಟಿರಾಯ್ಡ್ ಗಳಂತಹ ಔಷಧಿಗಳನ್ನು ಬಳಸುವುದು ಪುರುಷರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಜೊತೆಗೆ ಬೊಜ್ಜು, ಪರಿಸರದ ವಿಷಗಳು ಮತ್ತು ಇತರ ವಿವಿಧ ವೇರಿಯಬಲ್‌ಗಳು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿವೆ.


ಯೋಗವು ಪುರುಷರ ಸಂತಾನೋತ್ಪತ್ತಿ ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ?


ಸಂತಾನೋತ್ಪತ್ತಿ ಆರೋಗ್ಯವನ್ನು ಪೂರಕ ಔಷಧಿಯಾಗಿ ಉತ್ತೇಜಿಸಲು ಯೋಗವನ್ನು ಬಳಸಬಹುದು. ನಿಯಮಿತ ಅಭ್ಯಾಸವು ರಕ್ತದ ಹರಿವನ್ನು ನಿಯಂತ್ರಿಸುವ ಮೂಲಕ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ಹಾಗೂ ಸಾಮಾನ್ಯ ಮನಸ್ಥಿತಿಯನ್ನು ಹೆಚ್ಚಿಸುವ ಮೂಲಕ ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸುತ್ತದೆ.


ಯೋಗವು ಉತ್ತಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಹಾಯ ಮಾಡುವ ಕೆಲವು ವಿಧಾನಗಳು ಈ ಕೆಳಗಿನಂತಿವೆ: 


ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ: ಖಿನ್ನತೆ ಮತ್ತು ಆತಂಕದ ಪರಿಣಾಮವಾಗಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಂತಾನೋತ್ಪತ್ತಿ ಕಾರ್ಯವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.  ಧ್ಯಾನವು ಖಿನ್ನತೆ ಮತ್ತು ಆತಂಕಕ್ಕೆ ಸಹಾಯ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದ್ದರೂ, ದೇಹದ ಒತ್ತಡದ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಯೋಗವನ್ನು ಸಹ ಉಪಯೋಗಕಾರಿಯಾಗಿದೆ. ಇದು ಖಿನ್ನತೆ ಮತ್ತು ಆತಂಕದ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಬಹುದು.


ರಕ್ತ ಪರಿಚಲನೆಯು ಸುಧಾರಿಸುತ್ತದೆ: ಯೋಗವು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದು ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಮಲಗುವ ಕೋಣೆಯಲ್ಲಿ ಒಟ್ಟಾರೆ ಆರೋಗ್ಯ ಮತ್ತು ಕಾರ್ಯಕ್ಷಮತೆಗೆ ಮುಖ್ಯವಾಗಿದೆ.  ಮತ್ತೊಂದೆಡೆ, ಕೆಲವು ಯೋಗ ಭಂಗಿಗಳು ಪುರುಷರಿಗೆ ತಮ್ಮ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ವೀರ್ಯಾಣು ಮತ್ತು ಪ್ರಾಸ್ಟೇಟ್ ಆರೋಗ್ಯವನ್ನು ಸುಧಾರಿಸುತ್ತದೆ: ದೈನಂದಿನ ಯೋಗ ಮತ್ತು ಧ್ಯಾನದ ಅಭ್ಯಾಸವು ನಿಮ್ಮ ವೀರ್ಯಾಣುವಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಪ್ರಾಸ್ಟೇಟ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತೋರಿಸಲಾಗಿದೆ. ಪ್ರಾಸ್ಟೇಟ್ ಕಾಯಿಲೆಗಳನ್ನು ತಡೆಗಟ್ಟುತ್ತದೆ ಮತ್ತು ಹಿಗ್ಗಿದ ಪ್ರಾಸ್ಟೇಟ್ ಗ್ರಂಥಿಗಳನ್ನು ಕುಗ್ಗಿಸುತ್ತದೆ.


ಲೈಂಗಿಕ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತದೆ: ಯೋಗವು ವಯಸ್ಕರಲ್ಲಿ ದೇಹವನ್ನು ಹೊಂದಿಕೊಳ್ಳುವ ಮತ್ತು ಬಲವಾಗಿರಿಸುವುದು ಮಾತ್ರವಲ್ಲದೆ, ಇದು ರಕ್ತಪರಿಚಲನೆ ಮತ್ತು ಆಂತರಿಕ ಅಂಗಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ನರಗಳನ್ನು ಶಾಂತಗೊಳಿಸುತ್ತದೆ. ಕೆಲವು ಯೋಗ ತಂತ್ರಗಳು ವೀರ್ಯ ಮತ್ತು ಲೈಂಗಿಕ ಶಕ್ತಿಗೆ ಸಹಾಯ ಮಾಡಬಹುದು.  ಸ್ಪರ್ಮಟೋರಿಯಾ (ಅತಿಯಾದ, ಅನಿಯಂತ್ರಿತ ಸ್ಖಲನ) ಮತ್ತು ಟೆಸ್ಟೋಸ್ಟೆರಾನ್ ಸ್ರವಿಸುವಿಕೆಯ ನಿಯಂತ್ರಣದಂತಹ ಲೈಂಗಿಕ ಅಸ್ವಸ್ಥತೆಗಳ ಚಿಕಿತ್ಸೆಗೆ ಯೋಗವು ಸಹಾಯ ಮಾಡುತ್ತದೆ.


ಸಂತಾನೋತ್ಪತ್ತಿ ಆರೋಗ್ಯಕ್ಕೆ ಯೋಗ ಭಂಗಿಗಳು


ಭಂಗಿಗಳನ್ನು (ಆಸನಗಳು) ಒಳಗೊಂಡಿರುವ ಯೋಗದ ಯಾವುದೇ ಶೈಲಿಯೊಂದಿಗೆ ಪುರುಷ ಫಲವತ್ತತೆಯನ್ನು ಸುಧಾರಿಸಬಹುದು. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ.


1. ಶೋಲ್ಡರ್  ಸ್ಟ್ಯಾಂಡ್ (ಸಾಲಂಬ ಸರ್ವಾಂಗಾಸನ)


ವಿಲೋಮಗಳನ್ನು ಯೋಗದ ಅತ್ಯಂತ ಪ್ರಮುಖ ಸ್ಥಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶೋಲ್ಡರ್  ಸ್ಟ್ಯಾಂಡ್‌ನಂತಹ ತಿರುವು ಮುರುವುಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ, ಪ್ಯಾರಾಸಿಂಪಥೆಟಿಕ್  ನರವ್ಯೂಹವನ್ನು ಸಕ್ರಿಯಗೊಳಿಸುವ ಮೂಲಕ ನರಗಳನ್ನು ಶಮನಗೊಳಿಸುತ್ತವೆ. ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ.  ಈ ಎಲ್ಲಾ ಪ್ರಯೋಜನಗಳು ಪುರುಷರು ತಮ್ಮ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


2. ಬಿಲ್ಲು ಭಂಗಿ (ಧನುರಾಸನ): 


ದೇಹವ್ನನು ಬಿಲ್ಲಿನ ಆಕಾರವನ್ನು ಅಂದಾಜು ಮಾಡಿ, ತೋಳುಗಳು ದಾರವನ್ನು ಪ್ರತಿನಿಧಿಸುತ್ತವೆ. ಮುಂಡ ಮತ್ತು ಕಾಲುಗಳು ಬಿಲ್ಲಿನ ದೇಹವನ್ನು ಪ್ರತಿನಿಧಿಸುತ್ತವೆ.  ಪುರುಷರ ಲೈಂಗಿಕ ಆರೋಗ್ಯವು ಬಿಲ್ಲು ಭಂಗಿಯಿಂದ ಉತ್ತಮವಾಗಬಹುದು. ಇದು ಲೈಂಗಿಕ ಅಂಗಗಳನ್ನು ಉತ್ತೇಜಿಸುತ್ತದೆ ಹಾಗೂ ಚಿಂತೆ-ಆಯಾಸವನ್ನು ಕಡಿಮೆ ಮಾಡುತ್ತದೆ.


3. ದೋಣಿ ಭಂಗಿ (ನವಾಸನ): 


ದೋಣಿಯ ಭಂಗಿಯು ಬೆನ್ನು ಮತ್ತು ಮುಂಡವನ್ನು ಹಿಗ್ಗಿಸುತ್ತದೆ. ಅಬ್ಸ್ ಮತ್ತು ಹಿಪ್ ಫ್ಲೆಕ್ಸರ್‌ಗಳನ್ನು ಬಲಪಡಿಸುತ್ತದೆ. ಇದು ಉನ್ನತ ಮಟ್ಟದ ಕೋರ್ ಶಕ್ತಿ ಮತ್ತು ಸಮತೋಲನವನ್ನು ನೀಡುತ್ತದೆ. ಈ ಭಂಗಿಯು ಪ್ರಾಸ್ಟೇಟ್ ಗ್ರಂಥಿಯನ್ನು ಸಕ್ರಿಯಗೊಳಿಸುವ ಮೂಲಕ ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಭಾವಿಸಲಾಗಿದೆ.


ಇದನ್ನೂ ಓದಿ: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ 1178 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಮಾಹಿತಿ 


ಯೋಗವು ಪುರುಷರ ಸಂತಾನೋತ್ಪತ್ತಿ ಕಾರ್ಯಗಳನ್ನು ಹೆಚ್ಚಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ಸಂತಾನೋತ್ಪತ್ತಿ ಮನಸ್ಥಿತಿಗಳನ್ನು ಹೆಚ್ಚಿಸುತ್ತದೆ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಮನಸ್ಸು-ದೇಹ "ಔಷಧಿ"ಯಾಗಿದೆ. ನೀವು ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಉತ್ತಮ ಫಲಿತಾಂಶಗಳಿಗಾಗಿ ನೀವು ಯೋಗದ ಕಡೆಗೆ ಮುಖ ಮಾಡಬಹುದು. ಆದಾಗ್ಯೂ ಫಲವತ್ತತೆಯ ಸಮಸ್ಯೆಗಳಿಗೆ ನಿಮ್ಮನ್ನು ನೀವು ಮೌಲ್ಯಮಾಪನ ಮಾಡಿಕೊಳ್ಳುವುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಬೇಕು.


- ಡಾ. ಲಾವಣ್ಯ ಆರ್, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ ಐವಿಎಫ್ ಫರ್ಟಿಲಿಟಿ, ವೈಟ್ ಫೀಲ್ಡ್, ಬೆಂಗಳೂರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.