Soda Side Effects: ಇತ್ತೀಚಿನ ದಿನಗಳಲ್ಲಿ ಸೋಡಾವನ್ನು ಸೇವಿಸಲು ಇಷ್ಟಪಡುವ ಹಲವು ಜನರನ್ನು ನೀವು ನೋಡಿರಬಹುದು. ಇದೇ ವೇಳೆ ಕೆಲವರು ಇದನ್ನು ಪ್ರತಿದಿನ ಸೇವಿಸುತ್ತಾರೆ. ಅಷ್ಟೇ ಅಲ್ಲ ರಾತ್ರಿ ಊಟದ ನಂತರ ಸೋಡಾ ಕುಡಿಯುವುದನ್ನು ಜನರು ತಮ್ಮ ದಿನಚರಿಯಲ್ಲಿ ಸೇರಿಸಿಕೊಂಡಿದ್ದಾರೆ. ಆದರೆ ಸೋಡಾ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ದುರ್ಬಲಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಸೋಡಾ ಸೇವಿಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಸೋಡಾ ಕುಡಿಯುವುದರಿಂದ ಆಗುವ ಕೆಲವು ಮಾರಕ ಪರಿಣಾಮಗಳ ಬಗ್ಗೆ ಇಂದು ನಾವು ಈ ಲೇಖನದಲ್ಲಿ ಚರ್ಚಿಸುತ್ತಿದ್ದೇವೆ. ಈ ಅಡ್ಡ ಪರಿಣಾಮಗಳು ತಿಳಿದರೆ ನೀವೂ ಕೂಡ ಆಚರ್ಯಕ್ಕೆ ಒಳಗಾಗುವಿರಿ. ಸೋಡಾ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯೋಣ ಬನ್ನಿ.

COMMERCIAL BREAK
SCROLL TO CONTINUE READING

ಸೋಡಾ ಸೇವನೆಯಿಂದಾಗುವ ಅನಾನುಕೂಲಗಳು
ಆಸ್ತಮಾವನ್ನು ಪ್ರಚೋದಿಸಬಹುದು

ನಿಮಗೆ ಅಸ್ತಮಾ ಇದ್ದರೆ, ನೀವು ಸೋಡಾದಿಂದ ದೂರವಿರಬೇಕು. ಏಕೆಂದರೆ ಸೋದಾದಲ್ಲಿ ಕಂಡುಬರುವ ಸಂರಕ್ಷಕ ಸೋಡಿಯಂ ಬೆಂಜೊಯೇಟ್ ಅಸ್ತಮಾವನ್ನು ಪ್ರಚೋದಿಸುತ್ತದೆ. ಇದರಿಂದಾಗಿ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.

ಮೂಳೆಗಳು ದುರ್ಬಲಗೊಳ್ಳುತ್ತವೆ
ಪ್ರತಿನಿತ್ಯ ಸೋಡಾ ಕುಸಿಯುವುದರಿಂದ ಮೂಳೆಗಳು ದುರ್ಬಲವಾಗುತ್ತವೆ. ಏಕೆಂದರೆ ಸೋಡಾದಲ್ಲಿ ಕಂಡು ಬರುವ ಫಾಸ್ಪರಿಕ್ ಆಮ್ಲವು ದೇಹದಿಂದ ಕ್ಯಾಲ್ಸಿಯಂ ಅನ್ನು ತೆಗೆದುಹಾಕುತ್ತದೆ. ಹೀಗಾಗಿ ಪ್ರತಿನಿತ್ಯ ಸೋಡಾ ಸೇವನೆಯನ್ನು ತಪ್ಪಿಸಬೇಕು.

ಕ್ಯಾನ್ಸರ್ ಅಪಾಯ
ಆರೋಗ್ಯ ಪ್ರಜ್ಞೆ ಇರುವ ಕೆಲವರು ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತಾರೆ ಮತ್ತು ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಡಯಟ್ ಸೋಡಾದಲ್ಲಿ ಕೃತಕ ಸಿಹಿಯನ್ನು ಬಳಸಲಾಗುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳಿಗೂ ಬಲಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.


ಇದನ್ನೂ ಓದಿ-Body Detox: ರಕ್ತ ಶುದ್ಧೀಕರಣಕ್ಕೆ ನಿತ್ಯ ಒಂದು ಕಪ್ ಈ ಹರ್ಬಲ್ ಚಹಾ ಸೇವಿಸಿ, ಆರೋಗ್ಯಕ್ಕೆ ಹಲವು ವಿಧದಲ್ಲಿ ಲಾಭ

ಹೃದ್ರೋಗದ ಅಪಾಯ
ಪ್ರತಿದಿನ ಸೋಡಾ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗಬಹುದು. ಆದ್ದರಿಂದ, ಅದರ ಸೇವನೆಯನ್ನು ಆದಷ್ಟು ತಪ್ಪಿಸಬೇಕು.


ಇದನ್ನೂ ಓದಿ-Onion Juice: ಅಧಿಕ ರಕ್ತದೊತ್ತಡ ನಿಯಂತ್ರಿಸಲು ಖಾಲಿ ಹೊಟ್ಟೆ ಈ ಜ್ಯೂಸ್ ಸೇವಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.