ನವದೆಹಲಿ: ಮೂಲವ್ಯಾಧಿ ಅಥವಾ ಪೈಲ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಆಗಾಗ ನೋವಿನ ಸಮಸ್ಯೆ ಇರುತ್ತದೆ. ಇದು ತುಂಬಾ ಅಪಾಯಕಾರಿ ಕಾಯಿಲೆಯಾಗಿದೆ. ಪೈಲ್ಸ್ ಸಮಯದಲ್ಲಿ ಸಾಕಷ್ಟು ನೋವು ಇರುತ್ತದೆ. ಗುದದ್ವಾರದಿಂದ ರಕ್ತ ಬರಲು ಪ್ರಾರಂಭಿಸಿದಾಗ ಈ ಕಾಯಿಲೆಯ ತೊಂದರೆ ಶುರುವಾಗುತ್ತದೆ. ಇದು ಪೈಲ್ಸ್‌ನ ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ.


COMMERCIAL BREAK
SCROLL TO CONTINUE READING

ಅನೇಕ ಬಾರಿ ನಾವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೇವೆ, ಆದರೆ ಇದು ತುಂಬಾ ಗಂಭೀರ ಸಮಸ್ಯೆಯಾಗಿ ನಮ್ಮನ್ನು ಕಾಡುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವರು ಶಸ್ತ್ರಚಿಕಿತ್ಸೆಗೆ ಮೊರೆ ಹೋಗುತ್ತಾರೆ. ಆದರೆ ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವರು ದುಬಾರಿ ಔಷಧಗಳ ಮೊರೆ ಹೋಗಿ ದೀರ್ಘಕಾಲದವರೆಗೆ ಸೇವಿಸುತ್ತಾರೆ. ನಿಮ್ಮ ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳು ಮೂಲವ್ಯಾದಿಗೆ ಮುಕ್ತಿ ನೀಡುತ್ತವೆ. ಅವು ಯಾವವು ಎಂದು ತಿಳಿಯಿರಿ.


ಇದನ್ನೂ ಓದಿ: Diabetes Control with Salad: ಈ ರೀತಿ ಸಲಾಡ್ ಮಾಡಿ ತಿಂದರೆ 7 ದಿನಗಳಲ್ಲಿ ನಿಯಂತ್ರಣವಾಗುತ್ತೆ ಡಯಾಬಿಟಿಸ್


ಮೂಲವ್ಯಾಧಿ ಅಥವಾ ಪೈಲ್ಸ್‌ಗೆ ಮನೆಮದ್ದು


ಅರಿಶಿನ ಪುಡಿಯೊಂದಿಗೆ ತೆಂಗಿನ ಎಣ್ಣೆ ಬಳಸಿ


ಆರೋಗ್ಯ ತಜ್ಞರ ಪ್ರಕಾರ, ಅರಿಶಿನ ಪುಡಿಯನ್ನು ಮನೆಯ ಅಡುಗೆಮನೆಯಲ್ಲಿ ಇಡುವುದರಿಂದ ರಾಶಿ ರಾಶಿ ಕಾಯಿಲೆಗಳನ್ನು ದೂರವಿಡಬಹುದು. ತೆಂಗಿನೆಣ್ಣೆಯೊಂದಿಗೆ ಅರಿಶಿನ ಪುಡಿಯನ್ನು ಬೆರೆಸಿ ಮೂಲವ್ಯಾದಿ ಇರುವ ಜಾಗಕ್ಕೆ ಹಚ್ಚಿದರೆ ಸಾಕು. ಹೀಗೆ ಮಾಡುವುದರಿಂದ ಪೈಲ್ಸ್‌ನಿಂದ ನಿಮಗೆ ಶೀಘ್ರವೇ ಮುಕ್ತಿ ಸಿಗುತ್ತದೆ.


ದೇಸಿ ತುಪ್ಪ ಮತ್ತು ಅರಿಶಿನ  


ದೇಸಿ ತುಪ್ಪವನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ. ಇದು ಪೈಲ್ಸ್ ವಿರುದ್ಧ ರಾಮಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ತುಪ್ಪ ಮತ್ತು ಒಂದು ಚಿಟಿಕೆ ಅರಿಶಿನವು ಪೈಲ್ಸ್ ಅನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ದೇಸಿ ತುಪ್ಪ ಮತ್ತು ಅರಿಶಿನ ಮಿಶ್ರಣವನ್ನು ಮೂಲವ್ಯಾದಿಯ ಪ್ರದೇಶಕ್ಕೆ ಪ್ರತಿದಿನ ಹಚ್ಚಬೇಕು. ಹೀಗೆ ಮಾಡುವುದರಿಂದ ಪೈಲ್ಸ್ ಸಮಸ್ಯೆ ದೂರವಾಗುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಮೆಂತ್ಯ ಸೊಪ್ಪಿನ ಸೇವನೆಯಿಂದ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು


ಕಪ್ಪು ಉಪ್ಪು ಮತ್ತು ಮೇಕೆ ಹಾಲು


ಪೈಲ್ಸ್ ಸಮಸ್ಯೆಗೆ ಮೇಕೆ ಹಾಲು ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಆಡಿನ ಹಾಲಿಗೆ ಕಪ್ಪು ಉಪ್ಪು ಮತ್ತು ಒಂದು ಚಿಟಿಕೆ ಚಮಚ ಅರಿಶಿನವನ್ನು ಬೆರಸಿ ಸೇವಿಸಬೇಕು. ಇದರಿಂದ ನಿಮ್ಮ ಪೈಲ್ಸ್ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.