Drink To Boost Heart Health: ನಮ್ಮ ದೇಹ ಆರೋಗ್ಯಕರವಾಗಿರಬೇಕು ಎಂದರೆ, ನಮ್ಮ ಹೃದಯ ಆರೋಗ್ಯಕರವಾಗಿರಬೇಕು. ಹೃದಯವನ್ನು ಆರೋಗ್ಯವಾಗಿಡಲು ನಮ್ಮ ಆಹಾರ ಕ್ರಮವು ತುಂಬಾ ಮುಖ್ಯ. ಆರೋಗ್ಯಕರ ಹೃದಯಕ್ಕಾಗಿ, ಆರೋಗ್ಯಕರ ಆಹಾರದ ಜೊತೆಗೆ, ನೀವು ಕೆಲವು ಆರೋಗ್ಯಕರ ಪಾನೀಯಗಳನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ಪಾನೀಯಗಳು (best juice for heart and lungs) ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುವುದಲ್ಲದೆ,  ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಕೆಲವೊಮ್ಮೆ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದ ಕಾರಣದಿಂದಾಗಿ, ಹೃದಯವು ಬಹಳಷ್ಟು ಹಾನಿಗೊಳಗಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಪಾನೀಯಗಳನ್ನು ನಿಮ್ಮ ದೈನಂದಿನ  ಆಹಾರದಲ್ಲಿ ಸೇರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ನೀವು ಯಾವ ಪಾನೀಯಗಳನ್ನು ಸೇರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)

COMMERCIAL BREAK
SCROLL TO CONTINUE READING

ಹೃದಯವನ್ನು ಆರೋಗ್ಯವಾಗಿಡಲು, ಈ ಪಾನೀಯಗಳನ್ನು ಸೇವಿಸಿ (juices in daily diet to keep heart healthy)
ಕ್ಯಾರೆಟ್-ಬೀಟ್ ಜ್ಯೂಸ್ -
ಕ್ಯಾರೆಟ್ ಮತ್ತು ಬೀಟ್ರೂಟ್ನಿಂದ ತಯಾರಿಸಿದ ಜ್ಯೂಸ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದೇ ವೇಳೆ, ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನೀವು ಪ್ರತಿದಿನ ಕ್ಯಾರೆಟ್ ಬೀಟ್ ಜ್ಯೂಸ್ ಕುಡಿಯುತ್ತಿದ್ದರೆ, ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಇದರಿಂದ ಹೃದಯ ಹಾಗೂ ದೇಹ ಸದೃಢವಾಗುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು.(juice recipes for heart health)

ಸೌತೆಕಾಯಿ-ಪುದೀನಾ ಜ್ಯೂಸ್ - ಸೌತೆಕಾಯಿ ಮತ್ತು ಪುದೀನಾ ಎರಡೂ ಹೊಟ್ಟೆಗೆ ತುಂಬಾ ಲಾಭಕಾರಿಯಾಗಿವೆ. ಇದರಿಂದ ತಯಾರಿಸಿದ ಜ್ಯೂಸ್ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ದೇಹದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಫೈಬರ್ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಸೌತೆಕಾಯಿ-ಪುದೀನಾ ಜ್ಯೂಸ್ ಹೊಟ್ಟೆಗೆ ತಂಪು ನೀಡುತ್ತದೆ. ಈ ಪಾನೀಯವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(juicing for heart health)


ಇದನ್ನೂ ಓದಿ-Diabetes Tips: ಡೈಬಿಟೀಸ್ ಇರುವವರು ರಾತ್ರಿ ಮಲಗುವಾಗ ಈ ಒಂದು ಕೆಲಸ ಮಾಡಿ, ಬೆಳಗ್ಗೆ ಈ ಲಾಭ ಸಿಗುತ್ತೆ!

ಸೌಂಫ್ ವಾಟರ್ - ಸೌಂಫ್ ವಾಟರ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ಕೆ, ವಿಟಮಿನ್ ಇ ಮತ್ತು ಕಬ್ಬಿಣವು ಸೌಂಫ್ನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಅಂಶಗಳು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.(best juice for health)


ಇದನ್ನೂ ಓದಿ-Mustard Oil-Salt Health Benefits: ಸಾಸಿವೆ ಎಣ್ಣೆ -ಉಪ್ಪಿನಿಂದಾಗುವ ಈ ಜಬರ್ದಸ್ತ್ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?


(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ