Herbs For Thick Hair : ಹುಡುಗರೇ ಆಗಲಿ, ಹುಡುಗಿಯರೇ ಆಗಲಿ ಪ್ರತಿಯೊಬ್ಬರಿಗೂ ಕೂದಲಿನ ಮೇಲೆ ವಿಶೇಷವಾದ ಪ್ರೀತಿ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಾವು ಸದೃಢವಾದ ಕೂದಲು ಹೊಂದಬೇಕು ಎಂದು ಬಯಸುತ್ತಾರೆ.ಕೂದಲು ದುರ್ಬಲವಾಗಿ  ಉದುರಲು ಆರಂಭಿಸಿದರೆ ಕೂದಲು ತೆಳ್ಳಗಾಗುವುದರ ಜೊತೆಗೆ ಸೌಂದರ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ.ಅಲ್ಲದೆ ಉದುರಿದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಬೆಳೆಯದೆ ಹೋದರೆ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಕೆಲವು ಗಿಡಮೂಲಿಕೆಗಳನ್ನು ಬಳಸುವ ಮೂಲಕ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.ಅಲ್ಲದೆ, ಈ ಗಿಡ ಮೂಲಿಕೆಗಳು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಕೂದಲು ಮತ್ತೆ ಬೆಳೆಯಲು ಕೂಡಾ ಸಹಾಯ ಮಾಡುತ್ತದೆ. ಈ ಗಿಡ ಮೂಲಿಕೆಗಳನ್ನು ಬಳಸುವುದರಿಂದ ಕೂದಲಿನ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡಾ ಬೀರುವುದಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. 


COMMERCIAL BREAK
SCROLL TO CONTINUE READING

 ಸದೃಢ ಕೂದಲಿಗೆ 8 ಗಿಡಮೂಲಿಕೆಗಳನ್ನು ಸೇವಿಸಿ
1.ದಾಸವಾಳ

ದಾಸವಾಳದ ಟೀ ಕುಡಿಯುವುದರಿಂದ ಕೂದಲಿಗೆ ಆಂತರಿಕವಾಗಿ ಪೋಷಣೆ ಸಿಗುತ್ತದೆ.  ನೆತ್ತಿಯ ಸುತ್ತ ರಕ್ತ ಸಂಚಾರ ಹೆಚ್ಚುತ್ತದೆ.ಇದು ಕೂದಳು ಉದುರುವುದನ್ನು ತಡೆಯುತ್ತದೆ. ಅಲ್ಲದೆ, ಕೂದಲಿಗೆ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. 


2.ಪುದೀನಾ
ಪುದೀನಾ ಎಲೆಗಳನ್ನು ಜಗಿಯುವುದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.


ಇದನ್ನೂ ಓದಿ : Idli Recipe: ದಕ್ಷಿಣ ಭಾರತದ ವಿಶೇಷ ಉಪಹಾರ ದಹಿ ಇಡ್ಲಿ ಮಾಡುವ ಸುಲಭ ವಿಧಾನ


3.ರೋಸ್ಮರಿ
ಮನೆಯಲ್ಲಿಯೇ ರೋಸ್ಮರಿ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿದರೆ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಕೂದಲಿನ ಬೇರುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.


4.ಲ್ಯಾವೆಂಡರ್
ಲ್ಯಾವೆಂಡರ್ ಚಹಾವನ್ನು ಸೇವಿಸಿದರೆ, ಅದು ಕೂದಲಿನಲ್ಲಿ ತೇವಾಂಶವನ್ನು ಪುನಃಸ್ಥಾಪಿಸುತ್ತದೆ. ಇದು ಕೂದಲಿನ ಹೊಳಪನ್ನು ಹೆಚ್ಚಿಸಳು ಸಹಾಯ ಮಾಡುತ್ತದೆ.   ಕೂದಲಿನ ಬೆಳವಣಿಗೆಯನ್ನು ಅದ್ಭುತವಾಗಿ ಸುಧಾರಿಸುತ್ತದೆ.


5.ಅಲೋ ವೆರಾ
ಅಲೋವೆರಾ ಎಲೆಗಳಿಂದ ತೆಗೆದ ಜೆಲ್ ನಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನೆತ್ತಿಯಲ್ಲಿ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.


ಇದನ್ನೂ ಓದಿ : Wedding Tips: ವಿವಾಹವಾಗುತ್ತಿರುವಿರಾ? ಹಾಗಾದ್ರೆ, ನಿಮ್ಮ ಭಾವಿ ಪತ್ನಿಗೆ ಈ ಐದು ಪ್ರಶ್ನೆ ಕೇಳಿದ್ರಾ?


6.ನೆಲ್ಲಿಕಾಯಿ 
ನೆಲ್ಲಿಕಾಯಿ ತುಂಬಾ ಪೌಷ್ಟಿಕ ಆಹಾರವಾಗಿದೆ. ಇದರ ಸೇವನೆಯಿಂದ ಹಾನಿಗೊಳಗಾದ ಕೂದಳು ಕೂಡಾ ಸರಿಯಾಗುತ್ತದೆ. ಇದು ಒಳಗಿನಿಂದ ಕೂದಲಿಗೆ ಶಕ್ತಿ ನೀಡುತ್ತದೆ. ಕಿರಿ ವಯಸಿನಲ್ಲಿ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಕೂಡಾ ನೆಲ್ಲಿಕಾಯಿ ತಡೆಯುತ್ತದೆ. 


7.ಮೆಂತ್ಯೆ 
ಮೆಂತ್ಯ ಬೀಜಗಳು ಕೂದಲಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಮೆಂತ್ಯೆ  ಪೇಸ್ಟ್ ಅನ್ನು ಕೂದಲಿಗೆ ಹಚ್ಚುವ ಮೂಲಕ ಕೂದಲು ಉದುರಿ ತೆಲ್ಲಗಾಗುವುದನ್ನು ತಡೆಯಬಹುದು. ಮೆಂತ್ಯೆ ಬಿಳಿ ಕೂದಲಿನ ಸಮಸ್ಯೆಗೂ ಪರಿಹಾರವಾಗಿ ಕೆಲಸ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.