ಬೆಂಗಳೂರು : ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ನಮ್ಮ ಮಧ್ಯೆ ಅನೇಕರಿದ್ದಾರೆ. ತಮ್ಮ ಕೂದಲನ್ನು ಹೇಗಾದರೂ ಉದ್ದವಾಗಿ ಬೆಳೆಸಬೇಕೆಂಬ ಆಸೆ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕಾಗಿ ತಮಗೆ ತಿಳಿದಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಾರೆ. ಕೂದಲು ಉದುರುವ ಸಮಸ್ಯೆ ಇದ್ದರೆ  ಅಥವಾ ಕೂದಲು ಬೆಳೆಯುತ್ತಿಲ್ಲ ಎನ್ನುವ ಚಿಂತೆ ಕಾಡುತ್ತಿದ್ದರೆ ಈ ಕೆಳಗಿನ  ನೈಸರ್ಗಿಕ ಪರಿಹಾರಗಳನ್ನು ಬಳಸಬಹುದು.  


COMMERCIAL BREAK
SCROLL TO CONTINUE READING

ಉದ್ದ ಮತ್ತು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು, ನಾವು ಆರೋಗ್ಯಕರ ಜೀವನಶೈಲಿ ಮತ್ತು ನೈಸರ್ಗಿಕ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕು. ಇದಕ್ಕಾಗಿ  ರಾಸಾಯನಿಕಗಳ ಮೊರೆ ಹೋಗುವ ಬದಲು ಗಿಡಮೂಲಿಕೆಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ನೆಲ್ಲಿಕಾಯಿ ಮತ್ತು ಬೇವಿನಂತಹ ಗಿಡಮೂಲಿಕೆಗಳು ನಿಮ್ಮ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. 


ನೆಲ್ಲಿಕಾಯಿ:
ನೆಲ್ಲಿಕಾಯಿಯು ಆಯುರ್ವೇದ ಗಿಡಮೂಲಿಕೆಯಾಗಿದೆ. ಇದರಲ್ಲಿ ವಿಟಮಿನ್ ಸಿ ಕೂಡಾ ಸಮೃದ್ಧವಾಗಿದೆ. ಅಲ್ಲದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳಲ್ಲಿ ಇದು ಸಮೃದ್ಧವಾಗಿದೆ. ನೆಲ್ಲಿಕಾಯಿಯ ಎಣ್ಣೆ ಮತ್ತು ನೆಲ್ಲಿ ಕಾಯಿ ಬೇಯಿಸಿದ ನೀರನ್ನು ಕೂದಲಿನ ಆರೈಕೆಗೆ ಬಳಸಬಹುದು. 


ಇದನ್ನೂ ಓದಿ : ಮತ್ತೊಂದು ವೈರಸ್ ಭೀತಿ ಎದುರಿಸಲು ಜಿಲ್ಲಾಸ್ಪತ್ರೆ ಸಿದ್ದತೆ


ಭೃಂಗರಾಜ್ ಎಣ್ಣೆ:
ಅನೇಕ ಜನರು ಭೃಂಗರಾಜ್ ಅನ್ನು ಗಿಡಮೂಲಿಕೆಗಳ ರಾಜ ಎಂದು ಕರೆಯುತ್ತಾರೆ. ಇದರ ಎಣ್ಣೆ ಕೂದಲು ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ. ಅಲ್ಲದೆ, ಇದು ನೆತ್ತಿಯನ್ನು ಪೋಷಿಸುತ್ತದೆ ಮತ್ತು ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಕೂದಲು ವೇಗವಾಗಿ ಬೆಳೆಯುತ್ತದೆ.  


ಮೆಂತ್ಯೆ :
ಮೆಂತ್ಯೆ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು  ನೆತ್ತಿಯ ಮೇಲಿನ ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ದುರ್ಬಲವಾಗದಂತೆ ತಡೆಯುತ್ತದೆ. ಇದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಪೇಸ್ಟ್  ಮಾಡಿ ಕೂದಲಿಗೆ ಹಚ್ಚಬಹುದು. 


ಅಲೋವೆರಾ ರಸ : 
ಅಲೋವೆರಾ ರಸವನ್ನು ನೇರವಾಗಿ ನೆತ್ತಿಗೆ ಹಚ್ಚುವುದರಿಂದ ರಕ್ತದ ಹರಿವನ್ನು ಸಮತೋಲನದಲ್ಲಿಡುತ್ತದೆ. ಇದರ pH ಮಟ್ಟವು ನೆತ್ತಿಯ ಮೇಲೆ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ. ಅಲ್ಲದೆ, ಇದನ್ನು ನೈಸರ್ಗಿಕ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. 


ದಾಸವಾಳ:
ದಾಸವಾಳದ ಎಲೆಗಳು ಮತ್ತು ಹೂವುಗಳು ವಿಟಮಿನ್ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ನಿಮ್ಮ ಕೂದಲಿಗೆ ಪೋಷಣೆ ನೀಡಲು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ನೈಸರ್ಗಿಕ ಪೋಷಕಾಂಶಗಳು ಕೂದಳು ಉದುರದಂತೆ ತಡೆಯುತ್ತದೆ. ದಾಸವಾಳದ ಎಲೆಗಳು ಮತ್ತು ಹೂವುಗಳ ಹೇರ್ ಮಾಸ್ಕ್ ಮತ್ತು ಎಣ್ಣೆಯನ್ನು ತಯಾರಿಸಬಹುದು. ಇದರ ಸಿರೆಮ್ ಕೂಡಾ ಬಳಸಬಹುದು. ದಾಸವಾಳ ಬಳಕೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ. 


ಇದನ್ನೂ ಓದಿ : ನಿಮಗೆ ತುರಿಕೆ ನಿರಂತರ ಸಮಸ್ಯೆಯೂಡ್ಡಿದರೆ, ಚರ್ಮದ ನಿರ್ಲಜೀಕರಣದ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ...!


ಬೇವು :
ಬೇವು ಶಕ್ತಿಯುತವಾದ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ ಮೂಲಿಕೆಯಾಗಿದೆ. ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇವು ಅತ್ಯುತ್ತಮ ಮೂಲಿಕೆಯಾಗಿದೆ. ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದು ಕೂದಲ ಅರೋಗ್ಯ ಕಾಪಾಡುವಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ. ನೆತ್ತಿಯ ಸೋಂಕನ್ನು ತಡೆಗಟ್ಟುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೇವಿನ ಎಣ್ಣೆ ಅಥವಾ ಬೇವಿನ ಆಧಾರಿತ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿಗೆ ಉತ್ತಮ ಪೋಷಕಾಂಶಗಳು ದೊರೆಯುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.