Cause of High BP: ರಕ್ತದೊತ್ತಡ ಹೆಚ್ಚಾಗಲು ಒತ್ತಡ, ಕೋಪ ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಹಲವಾರು ಕಾರಣಗಳಿವೆ, ಇವುಗಳಿಂದಾಗಿ ಹೈ ಬಿಪಿ ಸಮಸ್ಯೆ ಇಂದಿನ ಕಾಲದಲ್ಲಿ ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಬಿಪಿ ಕಡಿಮೆಯಾದಾಗ ಸಕ್ಕರೆ ಉಪ್ಪಿನ ದ್ರಾವಣವನ್ನು ತೆಗೆದುಕೊಳ್ಳಬೇಕು ಅಥವಾ ಸಿಹಿತಿಂಡಿಯನ್ನು ತಕ್ಷಣ ಸೇವಿಸಬೇಕು ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ ಅಧಿಕ ಬಿಪಿ ಇದ್ದಲ್ಲಿ  ರೋಗಿಯ ಸ್ಥಿತಿ ಬೇಗ ನಾರ್ಮಲ್ ಆಗಲು ಏನು ಮಾಡಬೇಕು? ಮತ್ತು ಹೃದಯಾಘಾತದ ಅಪಾಯ ಹೇಗೆ ತಪ್ಪಿಸಬೇಕು ಎಂಬುದು ಬಹಿತೆಕರಿಗೆ ತಿಳಿದಿರುವುದಿಲ್ಲ.


COMMERCIAL BREAK
SCROLL TO CONTINUE READING

ಅಧಿಕ ಬಿಪಿಯ ಲಕ್ಷಣಗಳು
>> ತಲೆತಿರುಗುವಿಕೆ ಅಥವಾ ತಲೆ ಸುತ್ತುವಿಕೆ
>> ಹೃದಯ ಬಡಿತದಲ್ಲಿ ಹೆಚ್ಚಳ. 
>> ಉಸಿರಾಟದ ತೊಂದರೆ
>> ವಿಪರೀತ ತಲೆನೋವು
>> ಮೂಗಿನಿಂದ ರಕ್ತಸ್ರಾವ
>> ತೀವ್ರ ಆಯಾಸ ಮತ್ತು ಗೊಂದಲ
>> ಎದೆ ನೋವು
>> ಮಂದ ದೃಷ್ಟಿ
>> ಕೆಲವರಿಗೆ ಮೂತ್ರದಲ್ಲಿ ರಕ್ತವೂ ಬರಬಹುದು. ಈ ಎಲ್ಲಾ ಲಕ್ಷಣಗಳು ಎಲ್ಲಾ ಜನರಲ್ಲಿ ಒಟ್ಟಿಗೆ ಎಲ್ಲಾ ಜನರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಇವುಗಳಲ್ಲಿ ಯಾವುದಾದರು ಎರಡು ಅಥವಾ ಮೂರು ರೋಗಲಕ್ಷಣಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.


ಜನಸಂದಣಿಯಿಂದ ದೂರವಿರಿ
ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣವೇ ಜನಸಂದಣಿಯಿಂದ ದೂರಾಗಿ. ಏಕೆಂದರೆ ಬಿಪಿ ಹೆಚ್ಚಾದಾಗ ಜನಜಂಗುಳಿಯಿಂದ ಗಾಬರಿ ಹೆಚ್ಚಾಗಬಹುದು. ಇದರೊಂದಿಗೆ, ಜನರ ಧ್ವನಿ ಮತ್ತು ಟ್ರಾಫಿಕ್ ಇತ್ಯಾದಿಗಳ ಶಬ್ದವು ಮೆದುಳಿನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತವೆ, ಇದು ಹೃದಯಾಘಾತದಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು.


ತಾಜಾ ಗಾಳಿ ಬರುವ ಜಾಗದಲ್ಲಿ ಕುಳಿತುಕೊಳ್ಳಿ
ಇದಾದ ಬಳಿಕ ತಾಜಾ ಗಾಳಿ ಬರುವ ಜಾಗದಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ಎಸಿ ಅಥವಾ ಫ್ಯಾನ್ ಆನ್ ಮಾಡಿ ಮತ್ತು ದೀರ್ಘಶ್ವಾಸವನ್ನು ತೆಗೆದುಕೊಳ್ಳಿ. ಇವೆಲ್ಲವುಗಳಿಂದ ನಿಮ್ಮ ಚಿತ್ತವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿ ಮತ್ತು ನಿಮ್ಮ ಉಸಿರಾಟದ ಮೇಲೆ ಮಾತ್ರ ಕೇಂದ್ರೀಕರಿಸಿ.


ಆಳವಾದ ಉಸಿರನ್ನು ತೆಗೆದುಕೊಳ್ಳಿ
ಆಳವಾದ ಉಸಿರನ್ನು ತೆಗೆದುಕೊಳ್ಳುವಾಗ, ಮೂಗಿನ ಮೂಲಕ ಉಸಿರನ್ನು ಒಳತೆಗೆದುಕೊಂಡು ಮತ್ತು ಬಾಯಿಯ ಮೂಲಕ ಉಸಿರನ್ನು ಹೊರಬಿಡಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಒತ್ತಡವನ್ನು ನಿವಾರಿಸಲು ಮತ್ತು ಉಸಿರಾಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಆಮ್ಲಜನಕದ ಮಟ್ಟವು ಹೆಚ್ಚಾಗುತ್ತದೆ, ಇದರಿಂದಾಗಿ ಹೃದಯ ಬಡಿತ ಮತ್ತು ರಕ್ತದ ಹರಿವು ತ್ವರಿತವಾಗಿ ನಿಯಂತ್ರಣಕ್ಕೆ ಬರುತ್ತದೆ.


ಎಳನೀರು ಕುಡಿಯಿರಿ
ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಾಗ, ಒಂದು ಲೋಟ ಎಳನೀರು ಕುಡಿಯಿರಿ. ನೀರು ಉಗುರುಬೆಚ್ಚಗಿರಬಾರದು ಮತ್ತು ತುಂಬಾ ತಂಪಾಗಿರಬಾರದು. ಕೋಣೆಯ ಉಷ್ಣಾಂಶದಲ್ಲಿ ಇರಿಸಲಾದ ನೀರನ್ನು ಕುಡಿಯಿರಿ ಅಥವಾ ಅದರಲ್ಲಿ ಸ್ವಲ್ಪ ತಣ್ಣನೆಯ ನೀರನ್ನು ಕುಡಿಯಿರಿ ಇದರಿಂದ ಎದೆ ಮತ್ತು ಹೊಟ್ಟೆ ತಂಪಾಗುತ್ತದೆ.


ಇದನ್ನೂ ಓದಿ-Taming Thyroid: ಈ ಚಹಾ ಸೇವನೆಯಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯ ಜೊತೆಗೆ ಈ ಕಾಯಿಲೆಗಳನ್ನು ಕೂಡ ಗುಣಪಡಿಸಬಹುದು


ಕಣ್ಣು ಮುಚ್ಚಿ ಮಲಗಿ
ನೀವು ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಆ ಔಷಧಿಯನ್ನು ಸೇವಿಸಿ. ಈ ರೀತಿಯ ಸಮಸ್ಯೆ ಮೊದಲ ಬಾರಿಗೆ ಸಂಭವಿಸಿದಲ್ಲಿ ಅಥವಾ ನೀವು ಇನ್ನೂ ಈ ರೋಗದ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ನೀವು ಕನಿಷ್ಟ ಅರ್ಧ ಘಂಟೆಯವರೆಗೆ ಶಾಂತವಾಗಿ ಮಲಗಿಕೊಳ್ಳಿ. ಇದರ ನಂತರ, ಉಪ್ಪು ಮತ್ತು ಸಕ್ಕರೆ ಇಲ್ಲದೆ ಮಜ್ಜಿಗೆ ಕುಡಿಯಿರಿ, ತೆಳು ಮತ್ತು ತಣ್ಣನೆಯ ಹಾಲು ಕುಡಿಯಿರಿ ಅಥವಾ ತೆಂಗಿನ ನೀರನ್ನು ಕುಡಿಯಿರಿ ಮತ್ತು ನಂತರ ತಕ್ಷಣ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಿರಿ.


ಇದನ್ನೂ ಓದಿ-ಭಾರತಕ್ಕೆ ಕಾಲಿಟ್ಟ ಟೊಮೇಟೊ ಜ್ವರ..! ಇದೆಷ್ಟು ಅಪಾಯಕಾರಿ ಗೊತ್ತೇ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.