Ugadi Horoscope: ಮುಂದಿನ ಇಡೀ ವರ್ಷ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ
ಹೊಸ ವರ್ಷ ಪ್ರತಿಯೊಬ್ಬನ ಜೀವನದಲ್ಲಿಯೂ ಹೊಸತನ್ನು ತರಲಿ ಎಂಬ ಆಶಯ ಪ್ರತಿಯೊಬ್ಬನದ್ದೂ ಆಗಿರುತ್ತದೆ. ಹಿಂದೂ ಹೊಸ ವರ್ಷವು 2ನೇ ಏಪ್ರಿಲ್ 2022 ರಿಂದ ಪ್ರಾರಂಭವಾಗುತ್ತದೆ. ಈ ವರ್ಷವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದ್ಭುತವಾಗಿರುತ್ತದೆ ಮತ್ತು ಕೆಲವರಿಗೆ ಸಮಸ್ಯೆಗಳನ್ನು ನೀಡುತ್ತದೆ.
ನವದೆಹಲಿ : ಏಪ್ರಿಲ್ 2 ಯುಗಾದಿ ಹಬ್ಬ. ಯುಗಾದಿಯೊಂದಿಗೆ ಹಿಂದೂ ಹೊಸ ವರ್ಷ ಆರಂಭವಾಗಲಿದೆ (Ugadi Horiscope). ಹೊಸ ವರ್ಷ ನಮ್ಮ ಜೀವನದಲ್ಲಿಯೂ ಹೊಸತೇನಾದರೂ ಆಗಲಿದೆಯೇ ಎಂಬ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ.
ಮೇಷ (Aries): ವ್ಯಾಪಾರ ಮತ್ತು ಸಂಬಂಧಗಳಲ್ಲಿ ವಿಶ್ವಾಸ ಮುರಿದು ಬೀಳುವ ಸಂಭವ ಹೆಚ್ಚು ಇದೆ. ಇದರಿಂದಾಗಿ ನೀವು ನಿರಾಸೆಗೊಳ್ಳಬಹುದು. ಆದಾಯ ಹೆಚ್ಚಿದ್ದರೂ ಖರ್ಚು ಕೂಡಾ ಹಾಗೆಯೇ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಅತಿಯಾದ ಒತ್ತಡ, ಖಿನ್ನತೆ ಮತ್ತು ಓಡಾಟದಿಂದಾಗಿ ಹೃದಯ, ರಕ್ತದೊತ್ತಡ, ಹಾರ್ಮೋನ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳ ನಿವಾರಣೆಗೆ ಶಿವನನ್ನು ಪೂಜಿಸಿ ಮತ್ತು ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸಿ.
ವೃಷಭ ರಾಶಿ (Taraus): ಈ ವರ್ಷ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಯಬಹುದು. ನಿಮ್ಮ ರಹಸ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಒಳ್ಳೆಯದು. ಆದಾಯವು ಹೆಚ್ಚಾಗಲಿದೆ ಮಾತ್ರವಲ್ಲ, ವೆಚ್ಚವೂ ಹೆಚ್ಚಾಗುತ್ತದೆ. ಈ ವರ್ಷ, ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಮನೆ ಅಥವಾ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಇದನ್ನೂ ಓದಿ : Chaitra Navratri 2022 : ಚೈತ್ರ ನವರಾತ್ರಿಯಲ್ಲಿ ಈ ವಾಸ್ತು ಸಲಹೆ ಅನುಸರಿಸಿ, ಮನೆಯಲ್ಲಿ ಸಂತೋಷ - ಸಮೃದ್ಧಿ ನೆಲೆಸುತ್ತದೆ!
ಮಿಥುನ (Gemini) : ಈ ವರ್ಷ ಆರ್ಥಿಕವಾಗಿ ಸಮೃದ್ಧವಾಗಿರುತ್ತದೆ. ಕೆಲಸದ ಕ್ಷೇತ್ರದಲ್ಲಿ ನೀವು ಲಾಭದ ವಿಶೇಷ ಅವಕಾಶಗಳನ್ನು ಪಡೆಯುತ್ತೀರಿ. ಪ್ರೇಮ ಸಂಬಂಧವು ನಿಮ್ಮ ಜೀವನದಲ್ಲಿ ಹೊಸ ವಸಂತವನ್ನು ತರುತ್ತದೆ. ಕುಟುಂಬ ಸದಸ್ಯರು ಹತ್ತಿರ ಬರುತ್ತಾರೆ ಮತ್ತು ಮನೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಈ ವರ್ಷ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮೂಳೆ ಸಮಸ್ಯೆಗಳು, ನಿದ್ರಾಹೀನತೆ, ಮುಟ್ಟಿನ ಸಂಬಂಧಿತ ಕಾಯಿಲೆಗಳು, ಪಿತ್ತದೋಷ ಮತ್ತು ಚರ್ಮ ರೋಗಗಳು ತೊಂದರೆ ಕೊಡುತ್ತವೆ.
ಕರ್ಕ ರಾಶಿ (Cancer): ಈ ವರ್ಷದ ಮೊದಲಾರ್ಧದಲ್ಲಿ, ನಿಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ವಿರೋಧಿಗಳು ಅನೇಕ ರೀತಿಯಲ್ಲಿ ಮಾನಸಿಕ ಸಮಸ್ಯೆಗಳನ್ನು ನೀಡಲು ಪ್ರಯತ್ನಿಸುತ್ತಾರೆ. ವರ್ಷದ ದ್ವಿತೀಯಾರ್ಧದಲ್ಲಿ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರೊಂದಿಗಿನ ಜಗಳದಿಂದ ವೈವಾಹಿಕ ಜೀವನವು ತೊಂದರೆಗೊಳಗಾಗುತ್ತದೆ. ಹನುಮಾನ್ ಚಾಲೀಸಾವನ್ನು ಪ್ರತಿದಿನ ಓದಿ ಮತ್ತು ಕಾಲ ಕಾಲಕ್ಕೆ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ.
ಸಿಂಹ (Leo): ಈ ವರ್ಷ ನೀವು ಉತ್ಸಾಹದಿಂದ ತುಂಬಿರುವಿರಿ. ಉತ್ತಮ ಆರ್ಥಿಕ ಲಾಭಗಳ ಜೊತೆಗೆ, ನೀವು ಸ್ಥಾನ ಮತ್ತು ಪ್ರತಿಷ್ಠೆಯಲ್ಲೂ ಪ್ರಗತಿಯನ್ನು ಪಡೆಯುವಿರಿ. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಯಶಸ್ಸನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಉಸಿರಾಟ, ಗುದ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಿ.
ಇದನ್ನೂ ಓದಿ : ಏಪ್ರಿಲ್ 12 ರವರೆಗೆ ಈ ರಾಶಿಯವರಿಗೆ ಸಂಕಷ್ಟ ನೀಡಲಿದ್ದಾನೆ ಬುಧ
ಕನ್ಯಾ (Virgo): ಈ ವರ್ಷ ಎದುರಾಳಿಗಳಿಂದ ಮಾನಸಿಕ ತೊಂದರೆ ಉಂಟಾಗಲಿದೆ. ವಿಶೇಷವಾಗಿ ಜೂನ್ ತಿಂಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿನ ವಿವಾದಗಳು ಮತ್ತು ನಿಮ್ಮ ಸಂಗಾತಿಯ ನಡವಳಿಕೆಯಲ್ಲಿನ ಕೆಲವು ಬದಲಾವಣೆ ನಿಮ್ಮನ್ನು ಧರ್ಮದ ಕಡೆಗೆ ನಿಮ್ಮ ಒಲವನ್ನು ಹೆಚ್ಚಿಸುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ವರ್ಷ ಉತ್ತಮವಾಗಿದೆ. ದುರ್ಗಾ ದೇವಿಯನ್ನು ಪೂಜಿಸಿ.
ತುಲಾ (Libra): ಈ ವರ್ಷ ಹಳೆಯ ಸಮಸ್ಯೆಗಳನ್ನು ಕೊನೆಗೊಳಿಸಲು ಅನೇಕ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಆತುರದಿಂದ ಮಾಡುವ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡುವ ಸಾಧ್ಯತೆಯಿದೆ. ವರ್ಷದ ದ್ವಿತೀಯಾರ್ಧದಲ್ಲಿ ವಿಶೇಷ ವಿತ್ತೀಯ ಲಾಭಗಳ ಸಾಧ್ಯತೆಯಿದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಮಾತಿನ ಮೇಲೆ ಹಿಡಿತವಿರಲಿ. ಜುಲೈ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಜೀರ್ಣಕ್ರಿಯೆ ಮತ್ತು ಜನನಾಂಗದ ಅಂಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಆಸ್ಪತ್ರೆಯ ವೆಚ್ಚವು ಹೆಚ್ಚಾಗುತ್ತದೆ.
ವೃಶ್ಚಿಕ (Scorpio): ಈ ವರ್ಷದ ಹಳೆಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಈ ವರ್ಷ, ಅದೃಷ್ಟದ ವಿಶೇಷ ಬೆಂಬಲ ಸಿಗಲಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಯಶಸ್ಸು ಸಿಗುತ್ತದೆ. ಹೃದಯ, ಸಂಧಿವಾತ, ಮೈಗ್ರೇನ್, ಲ್ಯುಕೋರಿಯಾ ಮೊದಲಾದ ಕಾಯಿಲೆಗಳ ಬಗ್ಗೆ ಜಾಗೃತರಾಗುವುದು ಅಗತ್ಯವಾಗಿದೆ.
ಇದನ್ನೂ ಓದಿ : ಶನಿ ರಾಶಿಗೆ ಮಂಗಳನ ಪ್ರವೇಶ: ಈ 7 ರಾಶಿಯವರಿಗೆ ದೊಡ್ಡ ಸಮಸ್ಯೆಗಳು ಎದುರಾಗಲಿವೆ
ಧನು ರಾಶಿ (Sagitarius): ಈ ವರ್ಷ ನೀವು ಉನ್ನತ ಅಧಿಕಾರಿಗಳ ಮಾರ್ಗದರ್ಶನ ಪಡೆಯುವ ಮೂಲಕ ಯಶಸ್ಸನ್ನು ಪಡೆಯುವಿರಿ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ . ಅಕ್ಟೋಬರ್ ನಂತರ ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ನೀವು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಯಶಸ್ಸನ್ನು ಪಡೆಯುತ್ತೀರಿ. ಈ ವರ್ಷ ನೀವು ಪ್ರಕೃತಿಗೆ ಹತ್ತಿರವಾಗುತ್ತೀರಿ, ಇದರಿಂದಾಗಿ ಆರೋಗ್ಯವು ಉತ್ತಮವಾಗಿರುತ್ತದೆ.
ಮಕರ (Capricorn): ನಿಮ್ಮ ಸಂಪ್ರದಾಯವಾದಿ ಚಿಂತನೆಯಿಂದಾಗಿ, ಒಂದು ಸುವರ್ಣಾವಕಾಶ ಕೈತಪ್ಪಬಹುದು. ಆರ್ಥಿಕ ಲಾಭವಿದ್ದರೂ ಖರ್ಚುಗಳು ಕೂಡಾ ನಿಮ್ಮನ್ನು ಕಾಡುತ್ತವೆ. ತಾಯಿ ಮತ್ತು ಹೆಂಡತಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕಡಿಮೆ ರಕ್ತದೊತ್ತಡ, ಖಿನ್ನತೆ, ಹೆದರಿಕೆ, ಚರ್ಮ ರೋಗಗಳ ತೊಂದರೆಗಳು ಸಾಧ್ಯ.
ಕುಂಭ (Sagitarius) : ಆರ್ಥಿಕವಾಗಿ, ವರ್ಷದ ಮೊದಲಾರ್ಧವು ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ ಅಕ್ಟೋಬರ್ ನಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಸ್ಥಳ ಅಥವಾ ಪ್ರಯಾಣದ ಬದಲಾವಣೆಯ ಅವಕಾಶಗಳು ಸಿಗಲಿದೆ. ವೈವಾಹಿಕ ಸಂಬಂಧ ಅಥವಾ ಪ್ರೇಮ ಸಂಬಂಧದಲ್ಲಿ ಬೇರ್ಪಡುವ ಸಾಧ್ಯತೆ ಇರುತ್ತದೆ. . ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮತ್ತು ಉಸಿರಾಟ, ಗುದದ್ವಾರ, ಸಂಬಂಧಿತ ಕಾಯಿಲೆಗಳು ತೊಂದರೆಗೊಳಗಾಗುತ್ತವೆ.
ಮೀನ (Pisces): ನೀವು ಆರ್ಥಿಕವಾಗಿ ಸಮೃದ್ಧರಾಗುತ್ತೀರಿ ಮತ್ತು ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಪ್ರೇಮ ಸಂಬಂಧಗಳಿಗೆ ಈ ವರ್ಷ ಉತ್ತಮವಾಗಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಮಕ್ಕಳಿಂದಾಗಿ ಖರ್ಚು ಹೆಚ್ಚಾಗಬಹುದು. ಈ ವರ್ಷ ಶ್ರೀ ಕೃಷ್ಣ-ರುಕ್ಮಣಿಯನ್ನು ಸ್ತುತಿಸಿ .
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.