Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಭಾಗ್ಯೋದಯ!
Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸ ವರ್ಷ ಆರಂಭಗೊಳ್ಳಲಿದೆ. ಹೊಸ ವರ್ಷ 3 ರಾಶಿಗಳ ಜಾತಕದವರ ಜೀವನದಲ್ಲಿ ವಜ್ರದಂತಹ ಹೊಳಪನ್ನೇ ತರಲಿದೆ. ಯಾವ ಮೂರು ರಾಶಿಗಳ ಜನರ ಪಾಲಿಗೆ ಈ ಬಾರಿಯ ಯುಗಾದಿಯ ಮಹಾಪರ್ವ ಲಾಭಪ್ರದ ಸಿದ್ಧವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Hindu New Year 2023: ವೈದಿಕ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭವಾಗುತ್ತಿದೆ ಮತ್ತು ಈ ದಿನ ಬುಧವಾರ ಬಂದಿದೆ. ಹೀಗಾಗಿ ಬುಧನನ್ನು ಈ ಹೊಸ ವರ್ಷದ ರಾಜ ಎಂದು ಪರಿಗಣಿಸಲಾಗುತ್ತಿದೆ ಮತ್ತು ಶುಕ್ರನನ್ನು ಈ ಹೊಸ ವರ್ಷದ ಮಂತ್ರಿ ಎಂದು ಪರಿಗಣಿಸಲಾಗುತ್ತಿದೆ. ಈ ಹೊಸ ವರ್ಷದ ಹೆಸರು ಪಿಂಗಲ್. ಅಲ್ಲದೇ ಈ ಹೊಸ ವರ್ಷ ಅಪರೂಪದ ಕಾಕತಾಳೀಯದಿಂದ ಆರಂಭವಾಗುತ್ತಿದೆ. ಹೊಸ ವರ್ಷದಲ್ಲಿ ಶನಿದೇವನು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ಈ ಹಿಂದೂ ಹೊಸ ವರ್ಷವು ಎಲ್ಲಾ ದ್ವಾದಶ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿದೆ. ಆದರೆ ಹಿಂದೂ ಹೊಸ ವರ್ಷಾರಂಭದಿಂದ 3 ರಾಶಿಗಳ ಜನರ ಬಂಬಾಟ್ ದಿನಗಳು ಆರಂಭವಾಗಲಿದ್ದು, ಇವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ವರ್ಷ ಕಳೆದುಹೋಗಲಿದೆ. ಹೌದು ಈ ಜನರಿಗೆ ಹೊಸ ವರ್ಷ ಸಾಕಷ್ಟು ಆನಂದದಾಯಕ ಮತ್ತು ಲಾಭದಾಯಕ ಸಾಬೀತಗಲಿದೆ. ಹೊಸ ವರ್ಷದ ಆ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ
ಹಿಂದೂ ಹೊಸ ವರ್ಷವು ನಿಮಗೆ ಆಹ್ಲಾದಕರ ಮತ್ತು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ನೀವು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ, ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನಿಮಗೆ ಸಾಕಷ್ಟು ಅದೃಷ್ಟ ಒಲಿದು ಬರಲಿದೆ. ಆದರೆ ಸೂರ್ಯ ದೇವರು ನಿಮ್ಮ ಜಾತಕದ ಅನುಕೂಲಕರ ಸ್ಥಳದಲ್ಲಿ ಮುಂದುವರೆಯಲಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ಹೂಡಿಕೆಯಿಂದ ಲಾಭವನ್ನು ಪಡೆಯಬಹುದು. ಅಲ್ಲದೆ, ಹೊಸ ವ್ಯವಹಾರ ಒಪ್ಪಂದವನ್ನು ಅಂತಿಮಗೊಳಿಸಬಹುದು. ಇದೇ ವೇಳೆ ವ್ಯಾಪಾರಿಗಳು ಈ ಸಮಯದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.
ಇದನ್ನೂ ಓದಿ-Auspicious Rajyog: 617 ವರ್ಷಗಳ ಬಳಿಕ 3 ರಾಜಯೋಗಗಳು, 4 ರಾಶಿಗಳ ಜನರಿಗೆ ಭಾರಿ ಧನಲಾಭದ ಪ್ರಬಲ ಯೋಗ!
ಸಿಂಹ ರಾಶಿ
ಹಿಂದೂ ಹೊಸ ವರ್ಷವು ನಿಮ್ಮ ಪಾಲಿಗೆ ಸಾಕಷ್ಟು ಪ್ರಯೋಜನಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ, ನೀವು ತಂದೆಯ ಕಡೆಯಿಂದ ಮತ್ತು ತಂದೆಯಂತಹ ವ್ಯಕ್ತಿಗಳಿಂದ ಸಹಕಾರ ಮತ್ತು ಸಾಕಷ್ಟು ಪ್ರಯೋಜನಗಳನ್ನು ಪಡೆಯುವಿರಿ. ಧಾರ್ಮಿಕ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಭೂ-ಕಟ್ಟಡದ ಖರೀದಿ ವಿಷಯಗಳು ಚರ್ಚೆಗೆ ಬರಲಿವೆ. ಪ್ರಯಾಣದ ಸಾಧ್ಯತೆಗಳು ಹೆಚ್ಚಾಗಲಿದ್ದು, ಅವುಗಳಿಂದ ನಿಮಗೆ ಲಾಭದ ಸಾಧ್ಯತೆಗಳು ನಿರ್ಮಾಣಗೊಳ್ಳುತ್ತಿವೆ. ಇನ್ನೊಂದೆಡೆ ನಿಮಗೆ ಹಳೆಯ ಹೂಡಿಕೆಯಿಂದ ಲಾಭವಾಗಬಹುದು. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು.
ಇದನ್ನೂ ಓದಿ-Shash Rajyog: ಶೀಘ್ರದಲ್ಲೇ ಶನಿ ಉದಯದಿಂದ 'ಶಶ ಮಹಾಪುರುಷ ರಾಜಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!
ಧನು ರಾಶಿ
ಹಿಂದೂ ಹೊಸ ವರ್ಷವು ನಿಮಗೆ ಅನುಕೂಲಕರ ಸಾಬೀತಾಗಲಿದೆ. ಈ ಸಮಯದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಸಾಮರಸ್ಯ ಇರುತ್ತದೆ. ಸಂಪನ್ಮೂಲಗಳಲ್ಲಿ ಹೆಚ್ಚಳವಾಗಲಿದೆ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳು ಮತ್ತು ಅಧಿಕಾರಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹವನ್ನು ಪಡೆಯುವಿರಿ. ಇದರೊಂದಿಗೆ, ನಿಮ್ಮ ನಡವಳಿಕೆ ಮತ್ತು ಮಾತಿನಲ್ಲಿ ಸಾಕಷ್ಟು ಆತ್ಮವಿಶ್ವಾಸವೂ ಕಂಡುಬರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರಲಿದೆ. ಇದರೊಂದಿಗೆ, ಈ ಸಮಯದಲ್ಲಿ ನಿಮಗೆ ನಿಮ್ಮ ವಾಣಿಯ ಪ್ರಭಾವದ ಪರಿಣಾಮವು ಕಂಡುಬರಲಿದೆ. ಇದೇ ವೇಳೆ, ನೀವು ವ್ಯವಹಾರದಲ್ಲಿ ಉತ್ತಮ ಆರ್ಡರ್ ಪಡೆಯಬಹುದು. ಇದರಿಂದಾಗಿ ನಿಮಗೆ ಬಂಬಾಟ್ ಆರ್ಥಿಕ ಲಾಭವಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.