ಬೆಂಗಳೂರು : Hing Benefits: ಇಂಗು ಬಳಸಿದ ಅಡುಗೆಯ ರುಚಿಯೂ  ಹೆಚ್ಚು ಅದರ ಘಮ ಕೂಡಾ ಅದ್ಬುತವಾಗಿರುತ್ತದೆ.  ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಇಂಗನ್ನು ಬಳಸಲಾಗುತ್ತದೆ. ಇಡು ಕೇವಲ ಊಟದ ರುಚಿ ಹೆಚ್ಚಿಸುವುದಲ್ಲ, ಬದಲಾಗಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇಂಗು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.  


COMMERCIAL BREAK
SCROLL TO CONTINUE READING

ಇಂಗು ತಿನ್ನುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ :
ಇಂಗನ್ನು ಆರೋಗ್ಯದ ನಿಧಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು ವಿಶೇಷ ರೀತಿಯಲ್ಲಿ ಬಳಸಿದರೆ ಅನೇಕ ರೋಗಗಳನ್ನು ತೊಡೆದುಹಾಕಬಹುದು. ಹಾಗಿದ್ದರೆ ಇಂಗು ಯಾವ ಸಮಸ್ಯೆಗಳಿಗೆ ರಾಮಬಾಣ ನೋಡೋಣ. 


ಇದನ್ನೂ ಓದಿ : Coriander Leaves Benefits: ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಈ ಸಮಸ್ಯೆಗಳಿಗೂ ಪರಿಹಾರ ನೀಡುತ್ತೆ ಕೊತ್ತಂಬರಿ ಸೊಪ್ಪು


1. ವಾಯು ಸಮಸ್ಯೆ :
ನಮ್ಮ ನಡುವೆ  ಅದೆಷ್ಟೋ ಜನರಿಗೆ ವಾಯು ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಇಂಗು ಪುಡಿಯನ್ನು ಸಾಸಿವೆ ಎಣ್ಣೆಗೆ ಬೆರೆಸಿ ಹೊಕ್ಕಳ ಸುತ್ತ ಹಚ್ಚಬೇಕು.  ಹೀಗೆ ಮಾಡುವುದರಿಂದ ವಾಯು ಸಮಸ್ಯೆಯಿಂದ ಬಹಳ ಬೇಗ ಪರಿಹಾರ ಸಿಗುತ್ತದೆ.


2. ತಲೆನೋವು  :
ಒತ್ತಡದ ಕಾರಣದಿಂದ ಅನೇಕ ಬಾರಿ ತಲೆನೋವು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ನಾವು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತೇವೆ. ಆರೇ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಕೂಡಾ ಬೀರುತ್ತದೆ. ತಲೆನೋವಿಗೆ ನೈಸರ್ಗಿಕ ಚಿಕಿತ್ಸೆ ಬೇಕಿದ್ದರೆ ಇಂಗನ್ನು  ಅರೆದು ಪೇಸ್ಟ್ ಮಾಡಿ ಹಣೆಗೆ ಹಚ್ಚುವುದು. ಹೀಗೆ ಹಚ್ಚಿದ ಸ್ವಲ್ಪ  ಹೊತ್ತಿಗೆ ತಲೆನೋವಿನಿಂದ ಮುಕ್ತಿ ಸಿಗುತ್ತದೆ. 


ಇದನ್ನೂ ಓದಿ :  ಮಧುಮೇಹ ಇರುವವರು ಈ ಹಳದಿ ಚಪಾತಿ ತಿಂದರೆ ನಿಯಂತ್ರಣಕ್ಕೆ ಬರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ


3. ಅಜೀರ್ಣ ಸಮಸ್ಯೆ : 
 ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂಗು ನಿಮಗೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ  ಇಂಗನ್ನು ಬೆರೆಸಿ ನಂತರ ಕುಡಿಯಿರಿ. ಅಲ್ಲದೆ  ಇಂಗನ್ನು ಪೇಸ್ಟ್ ಮಾಡಿಕೊಂಡು ಅದನ್ನು ಹೊಕ್ಕುಳ ಸುತ್ತಲೂ ಹಚ್ಚುವುದರಿಂದಲೂ ಅಜೀರ್ಣ ಸಮಸ್ಯೆಗೆ ಪರಿಹಾರ ಸಿಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.