Hing Water Benefits: ಒಂದು ಸಣ್ಣ ಚಿಟಿಕೆ ಇಂಗು ಕರ್ರಿ, ಸೂಪ್ ಗಳಂತಹ ಆಹಾರಪದಾರ್ಥಗಳ ಪರಿಮಳವನ್ನು ಹೆಚ್ಚಿಸುತ್ತದೆ. ಆದರೆ, ಇಂಗು ನೀರನ್ನು ಪ್ರತಿದಿನ ಕುಡಿಯುವುದರಿಂದ ತನ್ನದೇ ಆದ ಪ್ರಯೋಜನಗಳಿವೆ. ಇದೆ ಕಾರಣಕ್ಕೆ ನಮ್ಮ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇಂಗು ಸದಾ ಇದ್ದೇ ಇರುತ್ತದೆ. ನಿಜವಾದ ಇಂಗು ಎಲ್ಲಿದ್ದರೂ ಅದು ತನ್ನ ಪರಿಮಳವನ್ನು ಸುತ್ತಲೂ ಹರಡುತ್ತದೆ. ದಾಲ್ ತಡ್ಕಾ ಆಗಿರಲಿ, ಕರ್ರಿಗಳಾಗಿರಲಿ ಅಥವಾ ಸೂಪ್ ಗಳಂತ ಆಹಾರ ಪದಾರ್ಥಗಳಿಗೆ ಚಿಟಿಕೆ ಇಂಗು ಸೇರಿಸುವುದು ವಿಭಿನ್ನ ರುಚಿಯನ್ನು ನೀಡುತ್ತದೆ. ಇದರ ಸುವಾಸನೆಯು ಖಂಡಿತವಾಗಿಯೂ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ, ಆದರೆ ಇಂಗು ನೀರನ್ನು ಕುಡಿಯಲು ಯಾರಾದರೂ ನಿಮಗೆ ಸಲಹೆ ನೀಡಿದ್ದಾರೆಯೇ? ಇಲ್ಲ ಎಂದಾದರೆ ಇಂದು ನಾವು ನಿಮಗೆ ಅದರ ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)


COMMERCIAL BREAK
SCROLL TO CONTINUE READING

ಇಂಗು ನೀರು ಸೇವನೆ ನಮ್ಮ ಆರೋಗ್ಯದ ಮೇಲೆ ಹಲವು ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ.ಇದನ್ನು ಕುಡಿಯುವುದರಿಂದ ಅದು ನಮ್ಮ ಜೀರ್ಣಕ್ರಿಯೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ ಕರುಳಿನ ಉರಿಯೂತ ನಿವಾರಣೆ ಮತ್ತು ಕರುಳಿನ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ಅದು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಇಂಗು ಆಂಟಿಮೈಕ್ರೊಬಿಯಲ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಸಹ ಹೊಂದಿದೆ.


ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ, ಪ್ರತಿದಿನ ಇಂಗು ನೀರನ್ನು ಕುಡಿಯುವುದರಿಂದ ನೀವು ಅವುಗಳನ್ನು ಪಡೆಯಬಹುದು. ಇದರ ಜೊತೆಗೆ ಅದು ಆಸ್ತಮಾ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದ ಸಕ್ಕರೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಇತರ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ, 


ತೂಕ ಇಳಿಕೆಗೆ ಸಹಾಯಕ
ಅಸಾಫೋಟಿಡಾ ನೀರು ನಮ್ಮ  ಚಯಾಪಚಯ ಕ್ರಿಯೆಯ ದರವನ್ನು ಹೆಚ್ಚಿಸುತ್ತದೆ. ವೇಗದ ಚಯಾಪಚ ಕ್ರಿಯೆ ನೇರವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಏಕೆಂದರೆ ಹೆಚ್ಚಿನ ಚಯಾಪಚಯ ದರ, ನಿಮ್ಮ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ನಮಗೆ  ಸಹಾಯ ಮಾಡುತ್ತದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಪಾನೀಯವನ್ನು ಹುಡುಕುತ್ತಿದ್ದರೆ, ಇದು ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ.


ಚರ್ಮದ ಆರೋಗ್ಯ ಸುಧಾರಿಸುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇಂಗು ನೀರು ಕುಡಿದರೆ ಚರ್ಮ ಬೇಗ ಮುಪ್ಪಾಗುವುದಿಲ್ಲ ಮತ್ತು ತ್ವಚೆ ಹೊಳೆಯುತ್ತದೆ. ಇಂಗು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಇದನ್ನು ನಿಯಮಿತವಾಗಿ ಕುಡಿಯುವುದರಿಂದ ನಮ್ಮ ದೇಹವನ್ನು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಿಕೊಳ್ಳಬಹುದು.


ಮುಟ್ಟಿನ ನೋವಿನಿಂದ ಪರಿಹಾರವನ್ನು ನೀಡುತ್ತದೆ
ನಿಮ್ಮ ಋತುಚಕ್ರದ ಸೆಳೆತವು ನಿಮ್ಮನ್ನು ಸತಾಯಿಸುತ್ತಿದ್ದರೆ, ಈ ಪಾನೀಯವು ನಿಮಗೆ ಸೂಕ್ತವಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ಪಿರಿಯಡ್ಸ್ ನೋವಿನಿಂದ ಪರಿಹಾರ ಸಿಗುತ್ತದೆ  ಮತ್ತು ನೀವು ಯಾವುದೇ ನೋವು ನಿವಾರಕವನ್ನು ಔಷಧಿಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. 


ಶೀತ ಮತ್ತು ಕೆಮ್ಮಿನ ಚಿಕಿತ್ಸೆಯಲ್ಲಿ ಸಹಕಾರಿ
ಇದು ಚಳಿಗಾಲ, ಮಳೆಗಾಲ ಅಥವಾ ಯಾವುದೇ ಋತುಮಾನ ಬದಲಾವಣೆಯ ಸಮಯದಲ್ಲಿ ಪ್ರತಿ ಎರಡನೇ ವ್ಯಕ್ತಿ ಶೀತ ಮತ್ತು ಕೆಮ್ಮುಗಳಂತಹ ಕಾಯಿಲೆಗಳಿಗೆ ಗುರಿಯಾಗುತ್ತಾನೆ. ಇಂಗು ನೀರನ್ನು ಕುಡಿಯುವ ಮೂಲಕ ನೀವು ಶೀತವನ್ನು ತಪ್ಪಿಸಬಹುದು. ಕೆಮ್ಮು, ಕಟ್ಟಿದ ಮೂಗು ಮತ್ತು ಲೋಳೆಯಂತಹ ಉಸಿರಾಟದ ಕಾಯಿಲೆಗಳಿಗೆ ಇಂಗು ಸಹಾಯ ಮಾಡುತ್ತದೆ.


ಇದನ್ನೂ ಓದಿ-High BP Control Tips: ಔಷಧಿಗಳ ಸಹಾಯ ಇಲ್ಲದೆಯೇ ರಕ್ತದೊತ್ತಡ ನಿಯಂತ್ರಿಸಬೇಕೆ? ಇಲ್ಲಿವೆ ಕೆಲ ಸಲಹೆಗಳು!


ಇಂಗು ನೀರನ್ನು ಹೇಗೆ ತಯಾರಿಸುವುದು
ಒಂದು ಲೋಟ ನೀರು ತೆಗೆದುಕೊಳ್ಳಿ, ಅದನ್ನು ಉಗುರು ಬೆಚ್ಚಗಾಗಲು ಬಿಸಿ ಮಾಡಿ.
ಅದರಲ್ಲಿ ನಾಲ್ಕನೇ ಒಂದು ಭಾಗ ಇಂಗು ಸೇರಿಸಿ.
ಇಂಗು ನೀರಿನಲ್ಲಿ ಕರಗಲು ಚೆನ್ನಾಗಿ ಮಿಶ್ರಣ ಮಾಡಿ.
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ನೀವು ಆಂಟಿಆಕ್ಸಿಡೆಂಟ್‌ಗಳನ್ನು ಬಯಸಿದರೆ ಮತ್ತು ನಿಮ್ಮ ಸ್ಥೂಲಕಾಯತೆಯನ್ನು ತ್ವರಿತವಾಗಿ ಕಡಿಮೆ ಮಾಡಲು ಬಯಸಿದರೆ, ನೀವು ಅದಕ್ಕೆ ಅರಿಶಿನವನ್ನು ಸೇರಿಸಬಹುದು.


ಇದನ್ನೂ ಓದಿ-Bad Cholesterol Symptoms: ಹಿಮ್ಮಡಿಯಲ್ಲಿನ ಈ 4 ಬದಲಾವಣೆಗಳು ಶರೀರದಲ್ಲಿ ಹೆಚ್ಚಾಗಿದೆ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಎನ್ನುತ್ತವೆ... ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.