Beginning Of Holi Festival - ಹೋಳಿ ಹಬ್ಬದ (Holi Festival 2022) ಆಚರಣೆ ಎಲ್ಲಿಂದ ಆರಂಭಗೊಂಡಿದೆ ನಿಮಗೆ ಗೊತ್ತಾ? ಸರಳ ಭಾಷೆಯಲ್ಲಿ ಕೇಳುವುದಾದರೆ, ಹೋಳಿ ಹಬ್ಬವನ್ನು  ಮೊದಲ ಬಾರಿಗೆ ಎಲ್ಲಿ ಆಚರಿಸಲಾಯಿತು ನಿಮಗೆ ತಿಳಿದಿದೆಯಾ? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ, ಈ ಬಾರಿಯ ಹೋಳಿ ಹಬ್ಬ ಆಚರಣೆಗೂ  ಮುನ್ನ ಅದನ್ನು ತಿಳಿದುಕೊಳ್ಳಿ.

COMMERCIAL BREAK
SCROLL TO CONTINUE READING

ಬುಂದೇಲ್‌ಖಂಡ್‌ನ ಝಾನ್ಸಿಯ ಎರಿಚ್ (Erach) ಪಟ್ಟಣದಲ್ಲಿ ಮೊದಲ ಬಾರಿಗೆ ಹೋಳಿ ಹಬ್ಬ ಆಚರಿಸಲಾಯಿತು. ಈ ಸ್ಥಳವು ಒಂದು ಕಾಲದಲ್ಲಿ ಹಿರಣ್ಯಕಶಪುವಿನ ರಾಜಧಾನಿಯಾಗಿತ್ತು. ಇದೆ ಸ್ಥಳದಲ್ಲಿ ಹೋಲಿಕಾ ತನ್ನ ಭಕ್ತ ಪ್ರಲ್ಹಾದನನ್ನು ತನ್ನ ಮಡಿಲಲ್ಲಿ ಮಲಗಿಸಿ ಬೆಂಕಿಯಲ್ಲಿ ಕುಳಿತಿದ್ದಳು. ಇದರಲ್ಲಿ ಹೋಲಿಕಾ ಸುಟ್ಟು ಕರಕಲಾಗಿ, ಪ್ರಲ್ಹಾದನನ್ನು ಕಾಪಾಡುತ್ತಾಳೆ. ಅಂದಿನಿಂದ ಹೋಳಿ ಆಚರಣೆ ಆಂಭಗೊಂಡಿತು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-Weekly Horoscope : ಮುಂದಿನ ವಾರ ಈ ರಾಶಿಯವರಿಗೆ ಆರ್ಥಿಕ ಪ್ರಗತಿ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ


ಎರಿಚ್ ಬುಂದೇಲ್‌ಖಂಡದ (Bundelkhand) ಅತ್ಯಂತ ಹಳೆಯ ನಗರವಾಗಿದೆ
ಝಾನ್ಸಿ (Jhansi) ಗೆಜೆಟಿಯರ್‌ನಲ್ಲಿ ದಾಖಲಾಗಿರುವ ವಿವರಗಳ ಪ್ರಕಾರ, ಎರಿಚ್ ಒಂದು ಐತಿಹಾಸಿಕ ನಗರವಾಗಿದೆ. ಇಲ್ಲಿ ಬೆಟ್ವಾ ನದಿಯ ದಡದಲ್ಲಿರುವ ಡಿಕೋಲಿ ಗ್ರಾಮವು ಐತಿಹಾಸಿಕ ದೇಕಾಂಚಲ್ ಪರ್ವತದೊಂದಿಗೆ ಸಂಪರ್ಕ ಹೊಂದಿದೆ. ಈ ಪರ್ವತದಿಂದ ಪ್ರಹ್ಲಾದನನ್ನು ನದಿಗೆ ಎಸೆಯಲಾಗಿತ್ತು ಎಂದು ಹೇಳಲಾಗುತ್ತದೆ. ಇದರೊಂದಿಗೆ ಹಿರಣ್ಯಕಶಪುವಿನ ಅರಮನೆ ಎಂದು ಹೇಳಲಾಗುವ ಅರಮನೆಯ ಅವಶೇಷಗಳೂ ಅಲ್ಲಿ ಕಂಡುಬರುತ್ತವೆ.  ಇದೆ ಅರಮನೆಯ ಬಳಿ ಪ್ರಹ್ಲಾದನನ್ನು ತನ್ನ ಮಡಿಲಲ್ಲಿಟ್ಟುಕೊಂಡು ಹೋಲಿಕಾ ಕುಳಿತಿದ್ದಳು ಎನ್ನಲಾಗುತ್ತದೆ.


ಇದನ್ನೂ ಓದಿ-Health Tips: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರತಿದಿನವೂ ಈ ಹಣ್ಣುಗಳನ್ನು ಸೇವಿಸಿ


ಇದೆ ಕಾರಣಕ್ಕಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ
ಹಿರಣ್ಯಕಶಪುವಿನ ವಧೆಯ ನಂತರ ಈ ಸ್ಥಳದಲ್ಲಿ ದೇವತೆಗಳ ಮತ್ತು ರಾಕ್ಷಸರ ಪಂಚಾಯತಿ ನಡೆಸಲಾಯಿತು ಎಂದು ಹೇಳಲಾಗುತ್ತದೆ. ಈ ಪಂಚಾಯತಿಯಲ್ಲಿ ಇಬ್ಬರೂ ಪರಸ್ಪರ ಬಣ್ಣ ಬಳಿದುಕೊಂಡು ಶತ್ರುತ್ವವನ್ನು ಅಂತ್ಯಗೊಳಿಸುವ ಸಂದೇಶ ನೀಡಿದ್ದರು. ಅಂದಿನಿಂದ ಹೋಳಿ ಹಬ್ಬವನ್ನು ಆರಂಭಿಸಲಾಗಿದೆ ಎಂಡ್ ಪರಿಗಣಿಸಲಾಗಿದೆ. ದೇವಸ್ಥಾನದಲ್ಲಿ ನರಸಿಂಹ ದೇವರ ವಿಗ್ರಹಗಳಿದ್ದು, ದೂರದೂರದಿಂದ ಜನರು ಇದನ್ನು ನೋಡಲು ಬರುತ್ತಾರೆ. ಹೋಳಿ ಸಮೀಪಿಸುತ್ತಿದ್ದಂತೆ ಜನರು ಪರಸ್ಪರ ಬಣ್ಣ ಹಚ್ಚಿ, ಸಡಗರ ಸಂಭ್ರಮಾಚರಣೆಯಲ್ಲಿ ತೊಡಗಿ  ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.


ಇದನ್ನೂ ಓದಿ-Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.