Home Remedies Tips: ಮಳೆಗಾಲದಲ್ಲಿ ಮಾತ್ರ ಸೊಳ್ಳೆಗಳ ಕಾಟ ಜಾಸ್ತಿ ಎಂದು ಹಲವರು ಭಾವಿಸುತ್ತಾರೆ. ಆದರೆ, ಬಿಸಿ ಋತುವಿನಲ್ಲಿಯೂ ಸೊಳ್ಳೆಗಳು ಹೇರಳವಾಗಿರುತ್ತವೆ. ಅವುಗಳು ಹೆಚ್ಚಾಗಿ ರಾತ್ರಿಯ ವೇಳೆ ತೊಂದರೆಯನ್ನು ನೀಡುತ್ತದೆ. ಈ ಸೋಳ್ಳೆ ಕಚ್ಚುವುದರಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ರೋಗಗಳಿಂದ ರಕ್ಷಿಸಿಕೊಳ್ಳಲು ಹಾಗೂ ಸೊಳ್ಳೆಗಳಿಂದ ನಿಮ್ಮನ್ನು ಮತ್ತು ಇತರ ಕುಟುಂಬ ಸದಸ್ಯರನ್ನು ರಕ್ಷಿಸುವುದು ಬಹಳ ಮುಖ್ಯ. ಅಂತಹ ಸಂದರ್ಭಗಳಲ್ಲಿ, ಕೆಲವರು ಅಂಗಡಿಗಳಲ್ಲಿ ಸಿಗುವಂತ ಸೊಳ್ಳೆ ಔಷಧಿಯನ್ನು ಬಳಸಿದರು ಉತ್ತಮ ಫಲಿತಾಂಶ ಸಿಗುವುದಿಲ್ಲ. ಇದರ ಬದಲಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. 


COMMERCIAL BREAK
SCROLL TO CONTINUE READING

ಸೊಳ್ಳೆಗಳನ್ನು ಹೋಗಲಾಡಿಸುವುದು ಹೇಗೆ ಮತ್ತು ಏನು ಮಾಡಬೇಕೆಂದು ತಿಳಿಯದೆ ನೀವು ಆಯಾಸಗೊಂಡಿದ್ದೀರಾ? ಹಾಗಾದರೆ ಈ ಸ್ಟೋರಿ ನೋಡಿ.. 


ಮನೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಸಹಾಯದಿಂದ ನೀವು ಸೊಳ್ಳೆಗಳನ್ನು ಕ್ಷಣಮಾತ್ರದಲ್ಲೇ ತೊಡೆದು ಹಾಕಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ನಾವು ಬಳಸುವ ದಿನನಿತ್ಯದ ಗೃಹೋಪಯೋಗಿ ವಸ್ತುಗಳು ಕೂಡ ನಮ್ಮನ್ನು ಕಚ್ಚುವ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Kidney Detox Tips: ಮೂತ್ರಪಿಂಡಗಳ ಆರೋಗ್ಯ ರಕ್ಷಣೆಗೆ ಇಲ್ಲಿವೆ ಕೆಲ ಆರೋಗ್ಯಕರ ಜ್ಯೂಸ್ ಗಳು!


- ಮೊದಲು ನೀವು ಅಂಗಡಿಗೆ ಹೋಗಿ ಸ್ವಲ್ಪ ಹಣ್ಣಾದ ನಿಂಬೆಹಣ್ಣುಗಳನ್ನು ಖರೀದಿಸಿ. ನಂತರ ಸ್ವಲ್ಪ ಲವಂಗ, ಸ್ವಲ್ಪ ಸಾಸಿವೆ ಎಣ್ಣೆ, ಹತ್ತಿ ಅಥವಾ ದೀಪದ ಬತ್ತಿ, ಸ್ವಲ್ಪ ಕರ್ಪೂರವನ್ನು ತೆಗೆದುಕೊಳ್ಳಿ. ನಂತರ ನೀವು ಖರೀದಿಸಿದ ನಿಂಬೆಹಣ್ಣುಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದು ಮೇಲ್ಭಾಗವನ್ನು ಹರಿತವಾದ ಚಾಕುವಿನಿಂದ ಕತ್ತರಿಸಿ.


- ನಂತರ  ಒಂದು ಚಮಚವನ್ನು ಬಳಸಿ, ತೆರೆದ ಭಾಗದಿಂದ ಸ್ವಲ್ಪ ನಿಂಬೆ ರಸವನ್ನು ಹಿಂಡಿ. ಇದನ್ನು ಮಾಡುವಾಗ ನಿಂಬೆಗೆ ಹಾನಿಯಾಗದಂತೆ ಎಚ್ಚರವಹಿಸಿ.


ಇದನ್ನೂ ಓದಿ: White Hair Natural Remedy : ಹೇರ್ ಡೈ, ಕಲರ್ ಗೆ ಹೇಳಿ ಗುಡ್ ಬೈ ! ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ !


- ನಂತರ ತೆರೆದ ನಿಂಬೆಯಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸುರಿಯಿರಿ ಮತ್ತು ಅದರೊಂದಿಗೆ ಇಟ್ಟುಕೊಂಡಿರುವ ಲವಂಗ ಮತ್ತು ಕರ್ಪೂರವನ್ನು ಸೇರಿಸಿ. ನಂತರ ಅದರ ಮೇಲೆ ದೀಪವನ್ನು ಹಾಕಿ ಬೆಂಕಿಕಡ್ಡಿಯಿಂದ ದೀಪದಂತೆ ಬೆಳಗಿಸಿ. ಈ ವಿಧಾನವನ್ನು ಅನುಸರಿಸಿ ಮತ್ತು ನಿಂಬೆ ದೀಪವನ್ನು ಬೆಳಗಿಸಿ ಮತ್ತು ಬಾಗಿಲು ಮುಚ್ಚಿ. ಹೀಗೆ ಮಾಡುವುದರಿಂದ ಸೊಳ್ಳೆಗಳ ಕಾಟ ಗಣನೀಯವಾಗಿ ಕಡಿಮೆಯಾಗುತ್ತದೆ.


- ನಿಮ್ಮ ಮನೆ ವಿಶೇಷವಾಗಿ ರಾತ್ರಿಯಲ್ಲಿ ಸೊಳ್ಳೆಗಳಿಂದ ತುಂಬಿದ್ದರೆ, ನೀವು ಹಲವಾರು ವಿಧಾನಗಳನ್ನು ಬಳಸಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಆದರೆ ಮೇಲಿನ ಸಲಹೆಗಳನ್ನು ಪ್ರಯತ್ನಿಸಿ. ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಅದರ ಹೊರತಾಗಿ ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಪ್ರತಿ ಅರ್ಧಕ್ಕೆ ಒಂದಿಷ್ಟು ಲವಂಗವನ್ನು ಹಾಕಿ ಮನೆಯಲ್ಲಿ ನಿಮಗೆ ಇಷ್ಟವಾದ ಸ್ಥಳದಲ್ಲಿಟ್ಟರೆ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ. ಇಲ್ಲದಿದ್ದರೆ, ಲವಂಗದ ಎಣ್ಣೆಯನ್ನು ನಿಮ್ಮ ದೇಹಕ್ಕೆ ಉಜ್ಜುವುದು ಸೊಳ್ಳೆ ಕಡಿತವನ್ನು ತೊಡೆದುಹಾಕಲು ಪರಿಣಾಮಕಾರಿ ಮಾರ್ಗ ಇದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.