ಚಳಿಗಾಲದ ಡ್ಯಾಂಡ್ರಫ್ ಸಮಸ್ಯೆ ತೊಲಗಿಸಲು 4 ಸರಳ ಸೂತ್ರಗಳು!
Dandruff Home Remedies : ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದಾಗಿ, ತುರಿಕೆ ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ.
Winter hair care: ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದಾಗಿ, ತುರಿಕೆ ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆ ಅಷ್ಟು ಬೇಗ ಮಾಯವಾಗದ ಕಾರಣ ಹಲವು ಮುಜುಗರದ ಸನ್ನಿವೇಶಗಳು ಎದುರಾಗುತ್ತವೆ. ಆದರೆ ನೀವು ಕೆಲವು ಸರಳ ಸಲಹೆಗಳನ್ನು ಅನುಸರಿಸಿದರೆ, ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
ಚಳಿಗಾಲ ಬಂತೆಂದರೆ ತಲೆಹೊಟ್ಟು ಕೂದಲಿನಲ್ಲಿ ಶೇಖರಣೆಯಾಗಿ ತಲೆ ಮತ್ತು ಬಟ್ಟೆಯ ಮೇಲೆ ಕಾಣಿಸಿಕೊಳ್ಳುವುದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ಡ್ಯಾಂಡ್ರಫ್ ಸಮಸ್ಯೆಯನ್ನು ಹೋಗಲಾಡಿಸಲು ಕೆಮಿಕಲ್ ಆಧಾರಿತ ಆ್ಯಂಟಿ ಡ್ಯಾಂಡ್ರಫ್ ಶಾಂಪೂಗಳು ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತವೆ.
ಅಲೋವೆರಾ: ಅಲೋವೆರಾ ತಲೆಹೊಟ್ಟು ಸಮಸ್ಯೆಯನ್ನು ಬಹಳ ಸುಲಭವಾಗಿ ಕಡಿಮೆ ಮಾಡುತ್ತದೆ.ತಾಜಾ ಅಲೋವೆರಾ ಜೆಲ್ ಅನ್ನು ನೆತ್ತಿಯ ಮೇಲೆ ಹಚ್ಚಿ. ಬಳಿಕ ವಾಶ್ ಮಾಡಿ ತುರಿಕೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಕರಿಬೇವನ್ನು ಈ ರೀತಿ ಸೇವಿಸಿ ಹೊಟ್ಟೆ - ಸೊಂಟದ ಭಾಗದ ಕೊಬ್ಬು ಮಂಜಿನಂತೆ ಕರಗುವುದು
ಆಪಲ್ ಸೈಡರ್ ವಿನೆಗರ್ : ಇದರಲ್ಲಿ ಸಾಕಷ್ಟು ಆ್ಯಂಟಿಮೈಕ್ರೊಬಿಯಲ್ ಗುಣಗಳಿವೆ. ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಒಂದು ಬಟ್ಟಲಿನಲ್ಲಿ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಮತ್ತು ನೆತ್ತಿಗೆ ಅನ್ವಯಿಸಿ. 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಬಾರಿ ಇದನ್ನು ಮಾಡಿ.
ಟೀ ಟ್ರೀ ಆಯಿಲ್: ಇದರಲ್ಲಿರುವ ಆ್ಯಂಟಿ ಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ತಡೆಯಲು ಸಹಕಾರಿ. ನೀವು ಮಾಡಬೇಕಾಗಿರುವುದು ಟೀ ಟ್ರೀ ಎಣ್ಣೆಯನ್ನು ಶಾಂಪೂಗೆ ಬೆರೆಸಿ ಮತ್ತು ಅದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ. ಬಳಿಕ ವಾಶ ಮಾಡಿ.
ತೆಂಗಿನೆಣ್ಣೆ : ತೆಂಗಿನ ಎಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ. ರಾತ್ರಿಯಿಡೀ ಇಡುವುದು ಉತ್ತಮ. ಬೆಳಿಗ್ಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.
ಇದನ್ನೂ ಓದಿ : ಹನಿ ಹೇರ್ ಮಾಸ್ಕ್.. ಬಿಳಿ ಕೂದಲಿಗೆ ಶಾಶ್ವತ ಪರಿಹಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.