Check the purity of honey at home: ತೂಕ ಇಳಿಕೆಯಿಂದ ಹಿಡಿದು ಹೊಳೆಯುವ ತ್ವಚೆ ಪಡೆಯುವವರೆಗೆ ಜೇನುತುಪ್ಪವು ಹಲವಾರು ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಚಳಿಗಾಲದಲ್ಲಿ ಜೇನುತುಪ್ಪವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಆದರೆ ಜೇನುತುಪ್ಪವು ಶುದ್ಧವಾಗಿದ್ದರೆ ಮಾತ್ರ ಜೇನುತುಪ್ಪದ ಪೋಷಕಾಂಶಗಳನ್ನು ಪಡೆಯಬಹುದು. ಪ್ರಸ್ತುತ ಕಲಬೆರಕೆಯ ಈ ಯುಗದಲ್ಲಿ, ನಕಲಿ ಮತ್ತು ಶುದ್ಧವಾದ ಜೇನುತುಪ್ಪವನ್ನು ಗುರುತಿಸುವುದು ಬಹಳ ಮುಖ್ಯ. ಹೀಗಾಗಿ ನಾವಿಂದು ಮಗೆ 6 ವಿಧಾನಗಳನ್ನು ಹೇಳುತ್ತಿದ್ದೇವೆ. ಅದನ್ನು ಬಳಸಿಕೊಂಡು ನೀವು ಶುದ್ಧ ಮತ್ತು ನಕಲಿ ಜೇನುತುಪ್ಪವನ್ನು ಗುರುತಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!


ಬಿಸಿನೀರು: ಜೇನುತುಪ್ಪವನ್ನು ಗುರುತಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಬಿಸಿನೀರು.  ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ. ಅದು ನೀರಿನಲ್ಲಿ ಕರಗಿದರೆ ಜೇನುತುಪ್ಪವು ಕಲಬೆರಕೆಯಾಗಿದೆ ಎಂದು ಅರ್ಥ. ಆದಾಗ್ಯೂ, ಒಂದು ವೇಳೆ ದಪ್ಪವಾದ ದಾರದಂತೆ ಕಂಡುಬಂದರೆ ಜೊತೆಗೆ ಅದು ನೀರಿನಲ್ಲಿ ಮುಳುಗಿದರೆ ಶುದ್ಧ ಜೇನುತುಪ್ಪ ಎಂದು ಅರ್ಥ.  


ಬೆಂಕಿ: ನೀರಿನಿಂದ ಪರೀಕ್ಷಿಸಲು ಸಾಧ್ಯವಾಗದಿದ್ದರೆ, ಬೆಂಕಿಯ ಸಹಾಯದಿಂದ ಶುದ್ಧತೆ ಪರೀಕ್ಷಿಸಬಹುದು. ಮೇಣದಬತ್ತಿ ಬೆಳಗಿಸಿ, ಒಂದು ಕೋಲಿನಲ್ಲಿ ಹತ್ತಿಯನ್ನು ಸುತ್ತಿ ಅದರ ಮೇಲೆ ಜೇನುತುಪ್ಪವನ್ನು ಹಚ್ಚಿ. ನಂತರ ಈ ಜೇನುತುಪ್ಪವನ್ನು ನೆನೆಸಿದ ಹತ್ತಿಯನ್ನು ಉರಿಯಲ್ಲಿ ಇರಿಸಿ, ಹತ್ತಿ ತಕ್ಷಣವೇ ಉರಿಯಲು ಪ್ರಾರಂಭಿಸಿದರೆ ಜೇನು ಶುದ್ಧವಾಗಿದೆ. ಇಲ್ಲವೇ ಸಮಯ ತೆಗೆದುಕೊಂಡರೆ, ಜೇನುತುಪ್ಪವು ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.


ಟಿಶ್ಯೂ ಅಥವಾ ಬ್ಲಾಟಿಂಗ್ ಪೇಪರ್‌: ಜೇನುತುಪ್ಪದ ಶುದ್ಧತೆಯನ್ನು ಬ್ಲಾಟಿಂಗ್ ಅಥವಾ ಟಿಶ್ಯೂ ಪೇಪರ್ ಮೂಲಕವೂ ಪರಿಶೀಲಿಸಬಹುದು. ಇದಕ್ಕಾಗಿ, ಬ್ಲಾಟಿಂಗ್ ಪೇಪರ್ ಅಥವಾ ಟಿಶ್ಯೂ ಮೇಲೆ ಒಂದು ಹನಿ ಜೇನುತುಪ್ಪವನ್ನು ಹಾಕಿ. ಜೇನುತುಪ್ಪದಲ್ಲಿ ನೀರಿನ ಕಲಬೆರಕೆ ಇದ್ದರೆ, ಅದು ಕಾಗದದಿಂದ ಹೀರಲ್ಪಡುತ್ತದೆ ಆದರೆ ಶುದ್ಧ ಜೇನುತುಪ್ಪವು ಕಾಗದದ ಮೇಲೆ ಸಂಗ್ರಹವಾಗುತ್ತದೆ.


ಬ್ರೆಡ್: ಜೇನಿನ ಶುದ್ಧತೆ ಪರೀಕ್ಷೆಯಲ್ಲಿ, ಬ್ರೆಡ್ ಸಹಾಯ ಮಾಡುತ್ತದೆ. ಬ್ರೆಡ್ ಮೇಲೆ ಶುದ್ಧ ಜೇನುತುಪ್ಪವನ್ನು ಹಾಕಿದರೆ ಗಟ್ಟಿಯಾಗುತ್ತದೆ. ಕಲಬೆರಕೆ ಹಾಕಿದರೆ ಮೃದು ಮತ್ತು ತೇವವಾಗಿರುತ್ತದೆ.


ಹೆಬ್ಬೆರಳು: ಹೆಬ್ಬೆರಳು ಮತ್ತು ಬೆರಳಿನ ನಡುವೆ ಒಂದು ಹನಿ ಜೇನುತುಪ್ಪವನ್ನು ಇರಿಸಿ. ಜೇನುತುಪ್ಪವು ಶುದ್ಧವಾಗಿದ್ದರೆ, ದಪ್ಪವಾದ ಅನುಭವವಾಗುತ್ತದೆ. ಒಂದು ವೇಳೆ ಕಲಬೆರಕೆಯಾಗಿದ್ದರೆ, ತೆಳುವಾಗುತ್ತದೆ.


ಇದನ್ನೂ ಓದಿ: iPhone ಬಳಕೆದಾರರಿಗೆ ಹೈ ಅಲರ್ಟ್​! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್‌ ಆಗುವ ಸಾಧ್ಯತೆ..!


ನೀರು ಮತ್ತು ವಿನೆಗರ್:‌ ಒಂದು ಲೋಟ ಅಥವಾ ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪ, 2-3 ಹನಿ ವಿನೆಗರ್ ಮತ್ತು ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. 2-3 ನಿಮಿಷಗಳ ನಂತರ ನೊರೆ ಏರಲು ಪ್ರಾರಂಭಿಸುತ್ತದೆ. ನೊರೆ ಎದ್ದರೆ ಜೇನುತುಪ್ಪವು ಕಲಬೆರಕೆಯಾಗಿದೆ ಎಂದು ಅರ್ಥ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.