Horoscope 2023: ಹೊಸ ವರ್ಷ ಪ್ರಾರಂಭವಾಗಲು ಸ್ವಲ್ಪ ಸಮಯ ಮಾತ್ರ ಉಳಿದಿದೆ. 2023ರ ವರ್ಷ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. 2023 ರಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವನ್ನು ನೋಡಿದರೆ, ಈ ವರ್ಷವು 3 ರಾಶಿಯವರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಭಾರೀ ಯಶಸ್ಸು ಪಡೆಯಲಿದ್ದಾರೆ. ಹಣಕಾಸಿನ ದೃಷ್ಟಿಯಿಂದಲೂ ಈ ವರ್ಷ ಸಾಕಷ್ಟು ನೆಮ್ಮದಿ ನೀಡಲಿದೆ. ಈ ಮೂರು ರಾಶಿಯವರು  ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲಿದ್ದಾರೆ.  ಹಾಗಿದ್ದರೆ 2023 ಯಾವ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ನೋಡೋಣ.  


COMMERCIAL BREAK
SCROLL TO CONTINUE READING

2023 ರ ಅದೃಷ್ಟ ರಾಶಿಗಳು :  
ಮಿಥುನ ರಾಶಿ - ವಾರ್ಷಿಕ ಜಾತಕದ ಪ್ರಕಾರ, 2023 ವರ್ಷವು ನಿಮಗೆ ಅದೃಷ್ಟದ ವರ್ಷಗಳಲ್ಲಿ ಒಂದಾಗಿರಲಿದೆ. ಈ ವರ್ಷ ನೀವು ಅಂದು ಕೊಂಡ ಕೆಲಸಗಳನ್ನು ಸಾಧಿಸುತ್ತೀರಿ. ನಿಮ್ಮ ಗುರಿಯನ್ನು ಸುಲಭವಾಗಿ ತಲುಪುವುದು ಸಾಧ್ಯವಾಗುತ್ತದೆ. ಬಡ್ತಿ ಪಡೆಯುವ ನಿಮ್ಮ ಕನಸು ನನಸಾಗುತ್ತದೆ. ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವ ಮೂಲಕ ಸಂತೋಷದಿಂದ ಇರುತ್ತೀರಿ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಈ ವರ್ಷ ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 


ಇದನ್ನೂ ಓದಿ : Baby Girl's Name : ಸಂಸ್ಕೃತದಲ್ಲಿವೆ ಹೆಣ್ಣು ಮಗುವಿನ Unique ಈ ಹೆಸರುಗಳು : ಇಲ್ಲಿದೆ ಲಿಸ್ಟ್


ತುಲಾ ರಾಶಿ - 2023 ರ ವರ್ಷವು ತುಲಾ ರಾಶಿಯವರಿಗೆ ವೃತ್ತಿ, ಪ್ರೀತಿ ಮತ್ತು ಹಣದ ವಿಷಯದಲ್ಲಿ ತುಂಬಾ ಶುಭವಾಗಿರಲಿದೆ. ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುವಿರಿ. ನಿಮ್ಮ ಪಾಲಿನ ದೊಡ್ಡ ಕನಸೊಂದು ಈ ಬಾರಿ ನನಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ಮಾರ್ಗಗಳಲ್ಲಿ ಹಣ ಗಳಿಸುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. 


ವೃಶ್ಚಿಕ ರಾಶಿ - ಮುಂಬರುವ ವರ್ಷವು ಈ ರಾಶಿಯ ಜನರಿಗೆ ಅನೇಕ ಉಡುಗೊರೆಗಳನ್ನು ತರುತ್ತಿದೆ. ವೃತ್ತಿಜೀವನದಲ್ಲಿ ಅನೇಕ ಹೊಸ ಅವಕಾಶಗಳು ಎದುರಾಗಲಿವೆ. ಈ ಅವಕಾಶಗಳ ಲಾಭವನ್ನು ಪಡೆದುಕೊಳ್ಳಿ. ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಅಂದುಕೊಂಡ ಕೆಲಸವನ್ನು ಸಾಧಿಸಿಬಿಡಿ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಬಡ್ತಿ ಸಿಗುವ ಸಂಭವವಿದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಆಗಮನವಾಗಬಹುದು. ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ. 


ಇದನ್ನೂ ಓದಿ : Chanakya Niti : ಅಪ್ಪತಪ್ಪಿಯೂ ಈ ಸ್ಥಳಗಳಲ್ಲಿ ಮನೆ ಕಟ್ಟಬೇಡಿ, ಇಲ್ಲದಿದ್ದರೆ ಸಂಪತ್ತು - ಗೌರವ ಹಾಳಾಗುತ್ತೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.