ದಿನಭವಿಷ್ಯ 19-11-2022:  ದಿನಾಂಕ: 19 ನವೆಂಬರ್ 2022, ವಾರ: ಶನಿವಾರ, ತಿಥಿ: ದಶಮಿ ಉಪರಿ ಏಕಾದಶಿ  ನಕ್ಷತ್ರ: ಉತ್ತರ ಫಲ್ಗುನಿ, ಯೋಗ: ವಿಷ್ಕುಂಭ, ಕರಣ: ಭದ್ರೆ. ಇಂದಿನ ವಿಶೇಷ: ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಆರಂಭವಾಗಲಿದೆ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಶುಭ ದಿನವಾಗಿರುತ್ತದೆ. ನೀವು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ದಿನ. ಹಣಕಾಸಿಗೆ ಸಂಬಂಧಿಸಿದಂತೆ ನಿಮಗೆ ವಿಶೇಷ ಶುಭಸುದ್ದಿ ಸಿಗಲಿದೆ. ಅಣ್ಣ-ತಮ್ಮಂದಿರಿಂದ ನಿಮಗೆ ಲಾಭವಿರುತ್ತದೆ.


ವೃಷಭ ರಾಶಿ: ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಮನೆಯ ಹಿರಿಯರಿಂದ ನಿಮಗೆ ಲಾಭವಿದೆ. ಇಷ್ಟಪಟ್ಟವರ ಜೊತೆಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ ಇರುತ್ತದೆ.


ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಬಹಳ ಸಂಕಟಮಯ ಸಮಯ. ಇದಕ್ಕೆ ಕಾರಣ ಮಾನಸಿಕವಾಗಿ ನಿಮಗೆ ಬಹಳ ಕಿರಿಕಿರಿ ಇರುತ್ತದೆ. ನಿಮ್ಮ ಕೆಲಸಗಳು ಆಗುತ್ತಿದ್ದರೂ ನೆಮ್ಮದಿ ಇರುವುದಿಲ್ಲ. ಹೀಗಾಗಿ ಮಿಥುನ ರಾಶಿಯವರಿಗೆ ಈ ದಿನ ಶುಭ ಇರುವುದಿಲ್ಲ. ಆದರೆ ನಿಮ್ಮ ಪ್ರಯತ್ನವನ್ನು ನಿಲ್ಲಿಸಬಾರದು.


ಕಟಕ ರಾಶಿ: ಈ ರಾಶಿಯವರಿಗೆ ಬಯಸಿದ ವಸ್ತುಗಳು ಸಿಗುವ ದಿನವಾಗಿರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಯಶಸ್ಸು ಜಾಸ್ತಿ ಇರುತ್ತದೆ. ಸ್ವಲ್ಪ ಮನೆಯವರ ಜೊತೆಗೆ ಕಿರಿಕಿರಿಯೂ ಇರುತ್ತದೆ.


ಇದನ್ನೂ ಓದಿ: Vastu Tips: ಈ ಶಕ್ತಿಶಾಲಿ ಸಸ್ಯದಿಂದ ಮನೆಯ ಎಲ್ಲಾ ವಾಸ್ತು ದೋಷಗಳಿಗೆ ಪರಿಹಾರ..!


ಸಿಂಹ ರಾಶಿ: ಈ ರಾಶಿಯವರಿಗೆ ಹೊಸ ಮನೆಗೆ ಹೋಗುವ ಯೋಗ ಸಿಗಲಿದೆ. ಹೊಸದಾಗಿ ಮನೆ ಖರೀದಿಸುವ ಅಥವಾ ಮನೆ ಬದಲಾಯಿಸುವ ಯೋಚನೆ ಇರುತ್ತದೆ. ಸ್ನೇಹಿತರ ಅಥವಾ ಹೊರಗಡೆಯವರಿಂದ ಮಾರ್ಗದರ್ಶನ ಸಿಗಲಿದ್ದು, ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇರುತ್ತದೆ.


ಕನ್ಯಾ ರಾಶಿ: ಈ ರಾಶಿಯವರು ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಿಕೊಂಡು ಕೆಲಸವನ್ನು ಸಿದ್ಧಿಮಾಡಿಕೊಳ್ಳುವ ದಿನ. ಹಿಂದೆ ಮಾಡಿದ ಕೆಲಸಗಳ ಪುಣ್ಯದ ಫಲವು ದೊರೆಯಲಿದೆ. ಇದರ ಜೊತೆಗೆ ಕೆಲಸಗಳು ಸುಲಭವಾಗಿ ನೆರವೇರುತ್ತವೆ. ಆತ್ಮವಿಶ್ವಾಸವು ನಿಮಗೆ ಸಹಾಯ ಮಾಡುತ್ತದೆ. ಆತ್ಮವಿಶ್ವಾಸದಿಂಲೇ ಈ ರಾಶಿಯವರು ಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ.


ತುಲಾ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಸುಧಾರಣೆಯಾಗಲಿದೆ. ಪ್ರೀತಿ-ವಿಶ್ವಾಸವನ್ನು ಮತ್ತೆ ಮರಳಿ ಪಡೆಯುವಂತಹ ದಿನ ಇದಾಗಿರುತ್ತದೆ. ಹೀಗಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷದಿಂದ ಯಶಸ್ಸು ಕಾಣುತ್ತೀರಿ.


ವೃಶ್ಚಿಕ ರಾಶಿ: ಈ ರಾಶಿಯವರಿಗೆ ಹೊಸ ಹೊಸ ಉದ್ಯೋಗಗಳು ಸಿಗುತ್ತವೆ. ಹೊಸ ಹೊಸ ಪರೀಕ್ಷೆಗಳು ನಿಮಗೆ ಎದುರಾಗಲಿವೆ. ಹೀಗಾಗಿ ಕುಲದೇವತೆಯ ಜೊತೆಗೆ ಶ್ರೀ ವೀರಾಂಜನೇಯನನ್ನು ಭಕ್ತಯಿಂದ ಪೂಜಿಸಿ ಅನುಗ್ರಹ ಪಡೆದುಕೊಳ್ಳಬೇಕು.


ಇದನ್ನೂ ಓದಿ: Astro Benefits: ಈ ನಾಲ್ಕು ರಾಶಿಗಳ ಜನರ ಮೇಲೆ ಶುಕ್ರ, ಬುಧ ಹಾಗೂ ಸೂರ್ಯರ ವಿಶೇಷ ಕೃಪಾವೃಷ್ಟಿ, ಸಿಗಲಿದೆ ಅಪಾರ ಧನಲಾಭ


ಧನು ರಾಶಿ: ಈ ರಾಶಿಯವರಿಗೆ ಪ್ರಯಾಣದ ಅವಕಾಶಗಳು ಹೆಚ್ಚಾಗಿ ಸಿಗಲಿವೆ. ದೂರದ ಸಂಬಂಧಿಕರಿಂದ ನಿಮಗೆ ಲಾಭ ದೊರೆಯಲಿದೆ. ವ್ಯಾಸಂಗದಲ್ಲಿ ಸ್ವಲ್ಪ ಏರುಪೇರಾದರೂ ಸಹ ಕೊನೆಗೆ ಉತ್ತಮ ಫಲಿತಾಂಶ ಸಿಗಲಿದೆ.


ಮಕರ ರಾಶಿ: ಈ ರಾಶಿಯವರಿಗೆ ದೇವಸ್ಥಾನ ಮತ್ತು ಪೂಜೆ-ಪುನಸ್ಕಾರಗಳಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಹಳೆಯ ಸ್ನೇಹಿತರ ಸಹಾಯದಿಂದ ನೀವು ಜೀವನದಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತೀರಿ. ಸ್ನೇಹಿತ ಸಹಕಾರದಿಂದ ಕೆಲಸ ಸಿದ್ಧಿಯಾಗುತ್ತದೆ.


ಕುಂಭ ರಾಶಿ: ಈ ರಾಶಿಯವರು ಇಂದು ಪ್ರಯಾಣ ಮಾಡಲಿದ್ದಾರೆ. ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶಗಳು ಬರಬಹುದು. ಹೀಗಾಗಿ ಶಾಂತ ರೀತಿಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.


ಮೀನ ರಾಶಿ: ಈ ರಾಶಿಯವರಿಗೆ ಧಾರ್ಮಿಕ ಕಾರ್ಯಕ್ರಮ, ದೈವ ಕಾರ್ಯಕ್ರಮ ಹಾಗೂ ಆತ್ಮ ದರ್ಶನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವ ದಿನ. ಈ ರಾಶಿಯವರಿಗೆ ಇಂದು ಶುಭ ದಿನವಾಗಿರುತ್ತದೆ. ಯಾವುದೇ ರೀತಿ ಅಪಘಾತಗಳು ಎದುರಾಗುವ ಸಂದರ್ಭ ಬಂದರೂ ನೀವು ಜಯಸುತ್ತೀರಿ.  


- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.