Today Astrology(27-11-2022): ಮೇಷ ರಾಶಿಯ ಜನರು ಯಾರಿಗೂ ಸಾಲವನ್ನು ಕೊಡಬಾರದು. ಸಿಂಹ ರಾಶಿಯವರ ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ. ಕುಂಭ ರಾಶಿಯವರು ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಕುಟುಂಬದಲ್ಲಿನ ವಾದ-ವಿವಾದಗಳು ಕೊನೆಗೊಳ್ಳುತ್ತವೆ. ಯಾರಿಗೂ ಸಾಲವನ್ನು ಕೊಡಬೇಡಿ.


ಅದೃಷ್ಟದ ಬಣ್ಣ- ಅರಿಶಿನ


ವೃಷಭ ರಾಶಿ: ಶೀಘ್ರದಲ್ಲೇ ಆಸ್ತಿ ಖರೀದಿಸಬಹುದು. ಸ್ನೇಹಿತರ ಬೆಂಬಲ ಸಿಗಲಿದೆ. ಹಠಾತ್ ವಿತ್ತೀಯ ಲಾಭದ ಮುನ್ಸೂಚನೆ ಇದೆ.


ಅದೃಷ್ಟದ ಬಣ್ಣ- ನೀಲಿ


ಮಿಥುನ ರಾಶಿ: ಕೆಲಸದ ಹೊರೆ ಕಡಿಮೆ ಇರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಯಾವ ಮೂಲದಿಂದಾದರೂ ಹಣ ಪಡೆಯುವ ಬಲವಾದ ಸಾಧ್ಯತೆಯಿದೆ.


ಅದೃಷ್ಟದ ಬಣ್ಣ- ಹಸಿರು


ಕರ್ಕ ರಾಶಿ: ಪ್ರಮುಖ ಕೆಲಸಗಳು ನಿಲ್ಲಬಹುದು. ಸಂಗಾತಿಯೊಂದಿಗೆ ವಾಗ್ವಾದ ಇರುತ್ತದೆ. ವ್ಯಾಪಾರದಲ್ಲಿ ನೀವು ಅಂದಕೊಂಡಂತೆ ಲಾಭವಾಗಲಿದೆ.


ಅದೃಷ್ಟದ ಬಣ್ಣ- ಆಕಾಶ ನೀಲಿ


ಇದನ್ನೂ ಓದಿ: Chanakya Niti: ಇಂತಹ ಮಡದಿಯರು ತಮ್ಮ ಪತಿಯ ಅದೃಷ್ಟದ ಬಾಗಿಲನ್ನೇ ತೆರೆಯುತ್ತಾರೆ


ಸಿಂಹ ರಾಶಿ: ಉದ್ಯೋಗದಲ್ಲಿ ತೀವ್ರತರ ಬದಲಾವಣೆ ಇರುತ್ತದೆ. ಆರೋಗ್ಯದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ. ಹಣದ ಖರ್ಚು ಹೆಚ್ಚಾಗಲಿದೆ.


ಅದೃಷ್ಟದ ಬಣ್ಣ- ಕೆಂಪು


ಕನ್ಯಾ ರಾಶಿ: ದಾಂಪತ್ಯ ಸಮಸ್ಯೆ ಕೊನೆಗೊಳ್ಳಲಿದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಬೇರೆಯವರಿಗೆ ನೀಡಿದ ಹಣ ಸಿಗಲಿದೆ.


ಅದೃಷ್ಟದ ಬಣ್ಣ- ನೀಲಿ


ತುಲಾ ರಾಶಿ: ಹೊಸ ಮನೆ ಖರೀದಿ ನಡೆಯಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ.


ಅದೃಷ್ಟದ ಬಣ್ಣ- ಕಂದು


ವೃಶ್ಚಿಕ ರಾಶಿ: ಆರೋಗ್ಯ ಸುಧಾರಿಸಲಿದೆ. ಉನ್ನತ ಅಧಿಕಾರಿಗಳಿಂದ ಲಾಭವಾಗಲಿದೆ. ಸಾಲ ಕೊಟ್ಟ ಹಣ ಮುಳುಗಬಹುದು.


ಅದೃಷ್ಟದ ಬಣ್ಣ- ಕಂದು


ಇದನ್ನೂ ಓದಿ: Rakta Chandana Remedies: ಎಷ್ಟೇ ಕಷ್ಟಪಟ್ಟರು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗುತ್ತಿಲ್ಲವೇ? ಈ ಉಪಾಯ ಟ್ರೈ ಮಾಡಿ


ಧನು ರಾಶಿ: ಈ ದಿನವು ಸೋಮಾರಿತನದಿಂದ ತುಂಬಿರುತ್ತದೆ. ಮಗುವಿನ ಕಾರಣದಿಂದ ಚಿಂತಿಸುವಿರಿ. ನಿಮ್ಮ ಮನೆಗೆ ಅತಿಥಿಯ ಆಗಮನವನ್ನು ನಿರೀಕ್ಷಿಸಲಾಗಿದೆ.


ಅದೃಷ್ಟದ ಬಣ್ಣ- ಕೆಂಪು


ಮಕರ ರಾಶಿ: ಉದ್ಯೋಗ ಪಡೆಯುವಲ್ಲಿ ತೊಂದರೆಗಳು ಉಂಟಾಗುತ್ತವೆ. ಸಂಗಾತಿಯೊಂದಿಗಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯಲ್ಲಿ ಸಮಯ ಕಳೆಯಿರಿ.


ಅದೃಷ್ಟದ ಬಣ್ಣ- ಆಕಾಶ ನೀಲಿ


ಕುಂಭ ರಾಶಿ: ವಿದೇಶ ಪ್ರವಾಸಕ್ಕೆ ಹೋಗಬಹುದು. ಸ್ಥಗಿತಗೊಂಡ ಹಣ ಸಿಗಲಿದೆ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ.


ಅದೃಷ್ಟದ ಬಣ್ಣ - ಬೂದು


ಮೀನ ರಾಶಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಹೊಸ ಉದ್ಯೋಗಾವಕಾಶ ಸಿಗಲಿದೆ. ಮನೆ ಸ್ವಚ್ಛಗೊಳಿಸುವತ್ತ ಗಮನ ಹರಿಸಿ.


ಅದೃಷ್ಟದ ಬಣ್ಣ - ಕ್ಯಾರೆಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.