ದಿನಾಂಕ: 11-11-2022 ವಾರ: ಶುಕ್ರವಾರ ತಿಥಿ: ತೃತೀಯ ಪಕ್ಷ: ಕೃಷ್ಣ ಪಕ್ಷ ನಕ್ಷತ್ರ: ಮೃಗಶೀರ ಯೋಗ: ಶಿವ ಕರಣ: ಭದ್ರೆ ಗ್ರಹದ ಬದಲಾವಣೆ: ಶುಕ್ರಗ್ರಹ ವೃಶ್ಚಕ ರಾಶಿಗೆ ಪ್ರವೇಶ


COMMERCIAL BREAK
SCROLL TO CONTINUE READING

Horoscope Today (11-11-2022): ಮೇಷ ರಾಶಿಯವರಿಗೆ ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ. ಸಿಂಹ ರಾಶಿಯವರಿಗೆ ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಶುಕ್ರವಾರದ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.


ಮೇಷ ರಾಶಿ: ನಿಮಗೆ ಅಸಹಜವಾದ ಭಯ ಇರಲಿದೆ. ತಾಯಿಯ ಕಡೆಯಿಂದ ಸಹಾಯ. ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ.


ವೃಷಭ ರಾಶಿ: ವ್ಯಾಸಂಗದಲ್ಲಿ ಪ್ರಗತಿ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹೊರರಾಜ್ಯ ಪ್ರಯಾಣ. ಕಾರ್ಯಸಿದ್ದಿಯಾಗಲಿದೆ.


ಮಿಥುನ ರಾಶಿ: ಆಸೆಗಳನ್ನು ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತೀರಿ. ಗುರು-ಹಿರಿಯರ ಭೇಟಿಯಾಗಲಿದೆ. ಬಂಧನದ ಭೀತಿ ಇರಲಿದೆ.


ಕಟಕ ರಾಶಿ: ನಿಮಗೆ ಗಾಯಗಳು ಆಗುವ ಸಂಭವ. ಸ್ನೇಹಿತರಲ್ಲಿ ಮನಸ್ತಾಪ ಉಂಟಾಗಲಿದೆ. ಬೆಟ್ಟ-ಗುಡ್ಡಗಳಲ್ಲಿ ಪ್ರಯಾಣ ಮಾಡುತ್ತೀರಿ.


ಇದನ್ನೂ ಓದಿ: Chanakya Niti : ಪತಿಯಿಂದ ಈ 5 ವಿಷಯಗಳನ್ನು ಯಾವಾಗಲು ಮುಚ್ಚಿಡುತ್ತಾಳೆ ಪತ್ನಿ!


ಸಿಂಹ ರಾಶಿ: ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಸನ್ಯದಲ್ಲಿ ಸೇರಲು ಅವಕಾಶ ಸಿಗಲಿದೆ.


ಕನ್ಯಾ ರಾಶಿ: ಕೆಲಸ-ಕಾರ್ಯಗಳಲ್ಲಿ ಗೊಂದಲ ಉಂಟಾಗಲಿದೆ. ಹಣಕಾಸಿನ ಸಮಸ್ಯೆ. ಜೀವನದಲ್ಲಿ ಹತಾಶೆ ಇರಲಿದೆ.


ತುಲಾ ರಾಶಿ: ಕೆಟ್ಟ ಮಾತುಗಳನ್ನು ಆಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವಿರಿ. ಅನುಮಾನಪಡುವ ಸ್ವಭಾವ ಇರುತ್ತದೆ. ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ.


ವೃಶ್ಚಿಕ ರಾಶಿ: ಕೆಲಸದಲ್ಲಿ ಹೆಚ್ಚು ಪ್ರಭಾವ. ನಿಮ್ಮ ವಸ್ತುಗಳು ಕಳುವಾಗುವ ಸಂಭವ ಇದೆ. ಶೀಘ್ರವೇ ಶುಭ ಸುದ್ದಿಯೊಂದು ಸಿಗಲಿದೆ.


ಇದನ್ನೂ ಓದಿ: ಮುಂದಿನ ಮೂರು ದಿನಗಳು 5 ರಾಶಿಯವರಿಗೆ ವರದಾನವಿದ್ದಂತೆ.! ಪ್ರತಿ ಕೆಲಸದಲ್ಲೂ ಯಶಸ್ಸು ನೀಡುತ್ತಾನೆ ಅಂಗಾರಕ


ಧನು ರಾಶಿ: ಮನಸ್ಸಿಗೆ ಏನೋ ಚಿಂತೆ ಇರುತ್ತದೆ. ಶತ್ರುಗಳಿಂದ ಅನಿರೀಕ್ಷಿತ ಲಾಭವಾಗಲಿದೆ. ಜೀವನದಲ್ಲಿ ಯಶಸ್ಸು ಇರುತ್ತದೆ.


ಮಕರ ರಾಶಿ: ಪೂರ್ವ ಕಾರ್ಯಗಳ ಪುಣ್ಯದ ಫಲವಾಗಿ ಶುಭ ಕಾರ್ಯಗಳ ಬಗ್ಗೆ ಮಾತುಕತೆ. ಪರಾಕ್ರಮದಿಂದ ಕಾರ್ಯಸಿದ್ಧಿಯಾಗಲಿದೆ. ವಾಹನದಿಂದ ತೊಂದರೆ ಸಾಧ‍್ಯತೆ ಇದೆ.


ಕುಂಭ ರಾಶಿ: ಹೆಚ್ಚು ಕೆಲಸದ ಒತ್ತಡ ಇರಲಿದೆ. ನಿಮ್ಮ ಕಾಲುಗಳ ಬಗ್ಗೆ ಎಚ್ಚರಿಕೆ ವಹಿಸಿ. ದುಡುಕುತನಿಂದ ನಿಮಗೆ ಚಿಂತೆ ಹೆಚ್ಚಾಗಲಿದೆ.


ಮೀನ ರಾಶಿ: ಸೋದರ ಸಂಬಂಧದಲ್ಲಿ ಕೆಟ್ಟ ಘಟನೆಗಳು ನಡೆಯಲಿವೆ. ಅಲ್ಪ ಸುಖ ಇರುತ್ತದೆ. ಸಂಸಾರದಲ್ಲಿ ಸ್ನೇಹಿತರಿಂದ ಕಂಟಕವಾಗಲಿದೆ.


- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.