ವಿಶ್ವದಲ್ಲೇ ಅತ್ಯಂತ ಸುರಕ್ಷಿತ ದೇಶದ ಬಗ್ಗೆ ನಿಮಗೇಷ್ಟು ಗೊತ್ತು..?
Safest Country In The World : ವಿಶ್ವದಲ್ಲೇ ಅತ್ಯಂತ ಸುರಕ್ಷಿತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶ. ಇಲ್ಲಿ ಪೊಲೀಸರಿಗೂ ಗನ್ ಅಗತ್ಯವೇ ಇಲ್ಲ, ಹಾಗದರೆ ಆ ದೇಶ ಯಾವುದು ಎನ್ನುವುದರ ಡಿಟೈಲ್ಸ್ ಇಲ್ಲಿವೆ.
Safest Country : ಜಗತ್ತಿನಲ್ಲಿ ಅಪರಾಧದ ಮಟ್ಟವು ದಿನದಿಂದ ದಿನಕ್ಕೆ ತುಂಬಾ ಹೆಚ್ಚಾಗ್ತಿವೆ, ಒಬ್ಬ ವ್ಯಕ್ತಿಯು ಯಾವ ದೇಶಕ್ಕೆ ಹೋದರೂ ಅದು ಸುರಕ್ಷಿತವಲ್ಲ ಎನ್ನುವ ಮಟ್ಟಕ್ಕೆ ತಲುಪಿದೆ. ಆದಾಗ್ಯೂ, ಜನರಿಗೆ ತುಂಬಾ ಸುರಕ್ಷಿತವಾಗಿರುವ ಕೆಲವು ದೇಶಗಳಿವೆ. ಈ ದೇಶಗಳಿಗೆ ಹೋಗುವುದರಿಂದ, ನೀವ್ ಸೇಫ್, ನಿಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂದು ನಿಮಗೆ ಎಂದಿಗೂ ಅನಿಸುವುದಿಲ್ಲ, ಇಲ್ಲಿನ ಜನರು ತಮ್ಮ ಅನ್ಯೋನ್ಯತೆಯ ಜೀವನವನ್ನು ನಡೆಸುತ್ತಾರೆ.
ಹೌದು, ಅಂತಹ ದೇಶ ಯಾವುದು ಎಂದು ನೀವೂ ಊಹಿಸುತ್ತಿದ್ದಿರಾ.. ಅದೇ ಐಸ್ಲ್ಯಾಂಡ್ ದೇಶ. ಈ ದೇಶವನ್ನು ಅತ್ಯಂತ ಸುರಕ್ಷಿತ ದೇಶವೆಂದು ಗುರುತಿಸಲಾಗಿದೆ. ಇದು ನಾರ್ಡಿಕ್ ದೇಶವಾಗಿದ್ದು ಯುರೋಪ್‌ನ ಭಾಗವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್..!
ದೇಶ ಮತ್ತು ಜಗತ್ತಿಗೆ ಸಂಬಂಧಿಸಿದ ಇಂತಹ ಮಾಹಿತಿಗಳು ಜನರನ್ನು ಅಚ್ಚರಿಗೊಳಿಸುತ್ತೇವೆ. ಇಂದು ನಾವು ಐಸ್ಲ್ಯಾಂಡ್ ಬಗ್ಗೆ ಮಾತನಾಡಲು ಹೋರಟಿದ್ದೇವೆ. ವಾಸ್ತವವಾಗಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Quora ನಲ್ಲಿ ಯಾರೋ ಒಬ್ಬರು ಅಪರಾಧದ ಮಟ್ಟವು ಕಡಿಮೆ ಇರುವ ವಿಶ್ವದ ಸುರಕ್ಷಿತ ಸ್ಥಳ ಯಾವುದು ಎಂದು ಕೇಳಿದರು? ಈ ಬಗ್ಗೆ ಕೆಲವರಿಗೆ ಪ್ರತಿಕ್ರಿಯಾಗಿ ಐಸ್ಲ್ಯಾಂಡ್ ದೇಶದ ಹೆಸರನ್ನು ತೋರಿಸುತ್ತದೆ.
ಈ ದೇಶವು ಅತ್ಯಂತ ಸುರಕ್ಷಿತ ದೇಶ
ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಮತ್ತು ಬಿಸಿನೆಸ್ ಇನ್ಸೈಡರ್ ವೆಬ್‌ಸೈಟ್ ಪ್ರಕಾರ, ಐಸ್ಲ್ಯಾಂಡ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು ಪರಿಗಣಿಸಲಾಗಿದೆ. ಜಾಗತಿಕ ಶಾಂತಿ ಸೂಚ್ಯಂಕವು ಈ ದೇಶಕ್ಕೆ ನಂಬರ್ 1 ಸ್ಥಾನಮಾನವನ್ನು ನೀಡಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಈ ದೇಶದ 11 ಪ್ರತಿಶತ ಹಿಮದಿಂದ ಆವೃತವಾಗಿದೆ. ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದ್ದರೆ ಈ ದೇಶ ಬೇಗ ಮುಳುಗುತ್ತದೆ. ಐಸ್‌ಲ್ಯಾಂಡ್‌ನ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬೋಧನಾ ಶುಲ್ಕವನ್ನು ವಿಧಿಸುವುದಿಲ್ಲ, ಅವು ವಿದ್ಯಾರ್ಥಿಗಳಿಂದ ಅರ್ಜಿ ಮತ್ತು ನೋಂದಣಿ ಶುಲ್ಕವನ್ನು ಮಾತ್ರ ವಿಧಿಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಶಿಕ್ಷಣ ಉಚಿತ ಎಂದು ಹೇಳಬಹುದು.
ಇದನ್ನೂ ಓದಿ: ಜಪಾನ್ ನಲ್ಲಿ ಭೂಕಂಪಕ್ಕೆ ಉಯ್ಯಾಲೆಯಂತೆ ತೂಗಾಡಿದ ಕಟ್ಟಡಗಳು ! ಇಲ್ಲಿದೆ ವಿಡಿಯೋ
ಪೊಲೀಸರು ಬಂದೂಕು ಹಿಡಿಯುವುದಿಲ್ಲ
ಇನ್ನೂ, ಅಪರಾಧದ ಬಗ್ಗೆ ಹೇಳುವುದಾದರೆ, ಐಸ್ಲ್ಯಾಂಡ್ ಪೊಲೀಸರು ಗನ್ ಬಳಸುವುದೇ ಇಲ್ಲ. ಅವರು ಪೆಪ್ಪರ್ ಸ್ಪ್ರೇ, ಲಾಠಿ ಪ್ರಹಾರವನ್ನೇ ನಂಬಿದ್ದಾರೆ. ಈ ದೇಶದಲ್ಲಿ ಸಲಿಂಗಕಾಮಿ ವಿವಾಹವನ್ನು ಅನುಮತಿಸಲಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ನೀಡಲಾಗುತ್ತದೆ. ಜನಸಂಖ್ಯೆಯೂ ತುಂಬಾ ಕಡಿಮೆ ಇರುವುರಿಂದ ಇಲ್ಲಿನ ತಲಾ ಆದಾಯವು ಕೇವಲ 55,890 PPP ಡಾಲರ್ ಆಗಿದೆ. ಇದರಿಂದ ಇದು ಶ್ರೀಮಂತ ದೇಶ ಎಂದು ಸಹ ನೀವು ಊಹಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.