610 ಕೆಜಿಯಿಂದ 63 ಕೆಜಿಗೆ... ಬರೋಬ್ಬರಿ 550 ಕೆಜಿ ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ತೂಕದ ವ್ಯಕ್ತಿ! ಅನುಸರಿಸಿದ ಟಿಪ್ಸ್ ಏನು ಗೊತ್ತಾ?
heaviest person in the world weight loss: ಸೌದಿ ಮೂಲದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಈ ಸಾಧನೆ ಮಾಡಿದಾತ. 2013 ರ ವೇಳೆಗೆ ಖಾಲಿದ್ ತೂಕ 610 ಕೆಜಿ ತಲುಪಿತ್ತು. ತನ್ನ ಬೃಹತ್ ದೇಹದ ಕಾರಣದಿಂದಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಹಾಸಿಗೆ ಹಿಡಿಯುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
heaviest person in the world weight loss: ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬ ಮಾತಿದೆ. ಅಂತೆಯೇ ಜಗತ್ತಿನ ಅತಿ ತೂಕದ ವ್ಯಕ್ತಿ ಒಂದೇ ಏಟಿಗೆ ಸ್ಲಿಮ್ ಆಗಿದ್ದಾನೆ. ಒಂದು ಕಾಲದಲ್ಲಿ 600 ಕೆಜಿಗೂ ಅಧಿಕ ತೂಕ ಹೊಂದಿದ್ದ ಈ ವ್ಯಕ್ತಿ ಈಗ ಕೇವಲ 63 ಕೆಜಿಗೆ ಇಳಿದಿದ್ದಾನೆ.
ಇದನ್ನೂ ಓದಿ: ಪಾಕ್ ಪರ ಆಡಿದ್ದ ಈತ ಇನ್ಮುಂದೆ ಟೀಂ ಇಂಡಿಯಾದ ಬೌಲಿಂಗ್ ಕೋಚ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಚ್ಚರಿಯ ಘೋಷಣೆ
ಸೌದಿ ಮೂಲದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಈ ಸಾಧನೆ ಮಾಡಿದಾತ. 2013 ರ ವೇಳೆಗೆ ಖಾಲಿದ್ ತೂಕ 610 ಕೆಜಿ ತಲುಪಿತ್ತು. ತನ್ನ ಬೃಹತ್ ದೇಹದ ಕಾರಣದಿಂದಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಹಾಸಿಗೆ ಹಿಡಿಯುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
ಸಾವಿಗೆ ಹತ್ತಿರವಾದ ಖಾಲಿದ್ ದುಃಖವನ್ನು ಕೇಳಿದ ಸೌದಿಯ ಮಾಜಿ ರಾಜ ಅಬ್ದುಲ್ಲಾ ಮಾನವೀಯತೆಯಿಂದ ಪ್ರತಿಕ್ರಿಯಿಸಿದ್ದರು. ರಾಜಮನೆತನದವರ ಇಚ್ಛೆಯ ಮೇರೆಗೆ ಖಾಲಿದ್ ಚಿಕಿತ್ಸೆ ಪ್ರಾರಂಭವಾಯಿತು. ವಿಶೇಷವಾದ ಹಾಸಿಗೆ ವಿನ್ಯಾಸ ಮಾಡಲಾಗಿತ್ತು. ಫೋರ್ಕ್ ಲಿಫ್ಟ್ ಸಹಾಯದಿಂದ ಖಾಲಿದ್ʼನನ್ನು ವಾಹನದಲ್ಲಿ ಎತ್ತಿಕೊಂಡು ರಿಯಾದ್ʼನ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಕರೆದೊಯ್ಯಲಾಯಿತು. 30 ವೈದ್ಯರ ವಿಶೇಷ ತಂಡ ಖಾಲಿದ್ ಮೇಲೆ ಕಾಲಕಾಲಕ್ಕೆ ನಿಗಾ ಇರಿಸಿತ್ತು. ವಿಶೇಷ ಡಯಟ್ ಚಾರ್ಟ್ ಮಾಡಿದ ನಂತರ, ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದನ್ನೂ ಓದಿ: ನೀವು ಸಿದ್ಧರಿದ್ದೀರಾ?- ಎರಡನೇ ಮದುವೆ ವದಂತಿ ಮಧ್ಯೆ ಸಾನಿಯಾ ಮಿರ್ಜಾ ಮಹತ್ವದ ಹೆಜ್ಜೆ... ಮೂಗುತಿ ಸುಂದರಿ ಬಹುದಿನದ ಕನಸು ನನಸು!
ಇವುಗಳೊಂದಿಗೆ ದೇಹದಲ್ಲಿ ಚಲನೆಯನ್ನು ಪುನಃಸ್ಥಾಪಿಸಲು ವ್ಯಾಯಾಮ ಮತ್ತು ಫಿಸಿಯೋಥೆರಪಿ ಮಾಡಲಾಯಿತು. ಮಧ್ಯಪ್ರಾಚ್ಯದ ವಿಜ್ಞಾನಿಗಳ ಸಹಯೋಗವನ್ನು ಕೂಡ ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು. ಇದು ಕ್ರಮೇಣ ಫಲಿತಾಂಶವನ್ನು ನೀಡಿತು. 2023 ರ ಹೊತ್ತಿಗೆ 610 ಕೆಜಿಯಿದ್ದ ಖಾಲಿದ್, ಸುಮಾರು 550 ಕೆಜಿ ತೂಕ ಕಳೆದುಕೊಂಡರು, ಜೊತೆಗೆ ಸಂಪೂರ್ಣವಾಗಿ ಆರೋಗ್ಯವಂತರಾದರು. ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಖಲೀದ್ ಈಗ ತೆಳ್ಳಗಿನ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಅವರ ತೂಕ 63.5 ಕೆ.ಜಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ